fbpx
ಸಮಾಚಾರ

‘ಹೆಡ್‌ ಬುಷ್’ ಸಿನಿಮಾ ತಂಡಕ್ಕೆ ಟಾಂಗ್ ಕೊಟ್ಟ ಜಯರಾಜ್ ಸೊಸೆ!

‘ನಟ ರಾಕ್ಷಸ’ ಡಾಲಿ ಧನಂಜಯ್ ಅವರ ನಟನೆಯ ‘ಹೆಡ್ ಬುಷ್’ ಚಿತ್ರದ ಮೇಲೆ ಪ್ರೇಕ್ಷಕ ವಲಯದಲ್ಲಿ ನಿರೀಕ್ಷೆ ಪರ್ವತದಷ್ಟಿದೆ. ಅದಕ್ಕೆ ಕಾರಣ ಹಲವಾರು, ಚಿತ್ರದಲ್ಲಿರುವ ದೊಡ್ಡ ತಾರಾಬಳಗ, ತಂತ್ರಜ್ಞರು ಒಂದು ಕಾರಣವಾದರೆ ‘ಹೆಡ್ ಬುಷ್’ ಚಿತ್ರ ಬೆಂಗಳೂರು ಭೂಗತ ಲೋಕದ ಸುತ್ತ ಹೆಣೆಯಲಾದ ರೋಚಕ ಕತೆ ಎಂಬುದು ಮತ್ತೊಂದು ಕಾರಣ. ಪತ್ರಕರ್ತ ಅಗ್ನಿ ಶ್ರೀಧರ್ ಅವರ ‘ದಾದಾಗಿರಿ ದಿನಗಳು’ ಪುಸ್ತಕ ಆಧರಿತವಾಗಿ ಸಿದ್ಧವಾಗಿರುವ ಈ ಚಿತ್ರ ಮೂರು ಭಾಗಗಳಲ್ಲಿ ಮೂಡಿಬರುತ್ತಿದ್ದು ಈ ಕತೆಯ ಮೊದಲ ಭಾಗ ಬಿಡುಗಡೆಗೆ ಸಿದ್ಧವಾಗಿದೆ.

ಆದರೆ, ಜಯರಾಜ್ ಕುಟುಂಬ ಈ ಸಿನಿಮಾ ವಿರುದ್ಧ ಸಿಡಿದೆದ್ದಿದೆ. ಹಾಗಂತ ಇದು ಮೊದಲೇನಲ್ಲ. ಈ ಹಿಂದೆ ಕೂಡ ‘ಹೆಡ್ ಬುಷ್’ ಸಿನಿಮಾ ವಿರುದ್ಧ ತಿರುಗಿಬಿದ್ದಿದ್ದರು. ಈಗ ಜಯರಾಜ್ ಸೊಸೆ ಇಂಪನಾ ಧನಂಜಯ್ ಸಿನಿಮಾ ವಿರುದ್ಧ ಕಿಡಿಕಾರಿದ್ದಾರೆ.

 

 

ಜಯರಾಜ್ ಸೊಸೆ ಪೋಸ್ಟ್:
“ಬದುಕಿರದಿದ್ದರೂ ಕೂಡ ರಾಜ ಎಂದು ಕೂಡ ರಾಜನಾಗಿಯೇ ಇರುತ್ತಾನೆ. ಕೆಲವರು ಅವರ ರೀತಿ ಆಗಲು ಹೋಗಿ ಸೋಲುತ್ತಾರೆ. ನಿಮ್ಮ ಕೈ ಕೆಳಗಡೆ ಇದ್ದೋರು ನಿಮ್ಮ ಹೆಸರು ಬಳಸಿಕೊಂಡು ನೀವಾಗಲು ನೋಡುತ್ತಿದ್ದಾರೆ, ಹಾಗೆಯೇ ಸೋಲುತ್ತಿದ್ದಾರೆ. ನೀವು ನೋಡುತ್ತಿದ್ದೀರಿ, ಅಜಿತ್ ಎಂದಿಗೂ ನಿಮ್ಮನ್ನು ಕೆಳಗಡೆ ಬೀಳಲು ಬಿಡೋದಿಲ್ಲ” ಎಂದು ಇಂಪನಾ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ.

ಅಂದಹಾಗೆ ಹೆಡ್ ಬುಷ್ ಭಾಗ-1 ಚಿತ್ರ ಇದೆ ಅಕ್ಟೋಬರ್ 21ರಂದು ದೀಪಾವಳಿ ಹಬ್ಬದ ವಿಶೇಷವಾಗಿ ತೆರೆಗೆ ಬರುತ್ತಿದೆ. ಶೂನ್ಯ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಹೆಡ್ ಬುಷ್ ಚಿತ್ರದ ಬೃಹತ್ ತಾರಾಗಣದಲ್ಲಿ ಡಾಲಿ ಧನಂಜಯ ಅವರೊಂದಿಗೆ ಪಾಯಲ್ ರಜಪೂತ್, ಕ್ರೇಜಿಸ್ಟಾರ್ ರವಿಚಂದ್ರನ್, ಲೂಸ್ ಮಾದ ಯೋಗಿ, ವಸಿಷ್ಠ ಸಿಂಹ, ಹಿರಿಯ ನಟ ದೇವರಾಜ್, ಶೃತಿ ಹರಿಹರನ್, ರಘು ಮುಖರ್ಜಿ, ಬಾಲು ನಾಗೇಂದ್ರ ಸೇರಿದಂತೆ ಹಲವು ತಾರೆಯರು ಬಣ್ಣ ಹಚ್ಚುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top