fbpx
ಸಮಾಚಾರ

ಭಾರತದ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದ ರಾಕಿ ಭಾಯ್! ಯಾವ ಸ್ಥಾನದಲ್ಲಿದ್ದಾರೆ ಗೊತ್ತಾ?

ಪ್ರತಿ ಬಾರಿ ಕೆಲವು ಸಂಸ್ಥೆಗಳು ಭಾರತದ ಟಾಪ್ 10 ನಟರ ಪಟ್ಟಿಯನ್ನು ಬಿಡುಗಡೆಮಾಡುತ್ತಾರೆ. ವಿಪರ್ಯಾಸ ಎಂದರೆ ಈ ಪಟ್ಟಿ ಬಿಡುಗಡೆಯಾದಾಗ ನಮ್ಮ ಸ್ಯಾಂಡಲ್ವುಡ್ ನ ಯಾವುದೇ ನಟರ ಹೆಸರು ಇರಲಿಲ್ಲ. ಆದರೆ ಇದೀಗ ಕಾಲ ಬದಲಾಗಿದೆ ಎಂದು ಹೇಳಬಹುದು. ಏಕೆಂದರೆ ಇದೆ ಮೊದಲ ಬಾರಿಗೆ ಭಾರತದ ಟಾಪ್ 10 ನಟರ ಪಟ್ಟಿಯಲ್ಲಿ ನಮ್ಮ ಸ್ಯಾಂಡಲ್ವುಡ್ ನ ನಾಯಕನಿದ್ದು, ಅದು ಬೇರೆ ಯಾರು ಅಲ್ಲ ರಾಕಿ ಭಾಯ್ ಯಶ್.

ಈ ಬಾರಿ ಆಮ್ಯಾರ್ಕ್ಸ್ ಸಂಸ್ಥೆಯು ಟಾಪ್ ನಟರ ಪಟ್ಟಿಯನ್ನು ಬಿಡುಗಡೆಮಾಡಿತ್ತು. ಈ ಪಟ್ಟಿಯಲ್ಲಿ ಕೆಜಿಎಫ್ ಸಿನಿಮಾದ ಮೂಲಕ ಕನ್ನಡ ಸಿನಿಮಾವನ್ನು ಪ್ರಪಂಚದಾದ್ಯಂತ ಜನರು ತಿರುಗಿ ನೋಡುವಂತೆ ಮಾಡಿದ ರಾಕಿ ಭಾಯ್ ಯಶ್ ಅವರ ಹೆಸರು ಇರುವುದು ಹೆಮ್ಮೆಯ ವಿಷಯ. ಈ ಪಟ್ಟಿಯಲ್ಲಿ ದಳಪತಿ ವಿಜಯ್ ಮೊದಲನೆಯ ಸ್ಥಾನದಲ್ಲಿದ್ದಾರೆ. ನಮ್ಮ ರಾಕಿ ಭಾಯ್ ಯಶ್ 5 ನೇ ಸ್ಥಾನವನ್ನು ಅಲಂಕರಿಸಿದ್ದಾರೆ.

ಇನ್ನುಳಿದಂತೆ ಪ್ರಭಾಸ್ ಎರಡನೇ ಸ್ಥಾನದಲ್ಲಿದ್ದಾರೆ. ಜ್ಯೂನಿಯರ್ ಎನ್.ಟಿ.ಆರ್ ಮೂರನೇ ಸ್ಥಾನ ಹಾಗೂ ಅಲ್ಲು ಅರ್ಜುನ್ ನಾಲ್ಕನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಇನ್ನು ಬಾಲಿವುಡ್ ವಿಚಾರಕ್ಕೆ ಬಂದರೆ ಅಕ್ಷಯ್ ಕುಮಾರ್ ಬಿಟ್ಟು ಬೇರೆ ಯಾವ ನಟರಿಗೂ ಸಹ ಈ ಟಾಪ್ 10 ರ ಪಟ್ಟಿಯಲ್ಲಿ ಸ್ಥಾನ ಸಿಕ್ಕಿಲ್ಲ. ಅಕ್ಷಯ್ ಕುಮಾರ್ 6 ನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಹೀಗಾಗಿ ಟಾಪ್ 10 ರ ಪಟ್ಟಿಯಲ್ಲಿ ನಮ್ಮ ಹೆಮ್ಮೆಯ ಕನ್ನಡಿಗ ರಾಕಿ ಭಾಯ್ ಯಶ್ ಅವರ ಹೆಸರಿರುವುದು ನಮ್ಮ ಕನ್ನಡಿಗರ ಹೆಮ್ಮೆ ಎಂದು ಹೇಳಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top