fbpx
ಸಮಾಚಾರ

ರೈಲು ಕೋಚ್‌ಗಳಲ್ಲಿ ಬಿಳಿ ಅಥವಾ ಹಳದಿ ಪಟ್ಟಿಗಳು ಏನನ್ನು ಸೂಚಿಸುತ್ತದೆ?

ಚಿಕ್ಕವರಿಂದ ಹಿಡಿದು ದೊಡ್ಡವರಿಗೂ ಸಹ ರೈಲ್ವೆ ಪ್ರಯಾಣ ಎಂದರೆ ಬಹಳ ಇಷ್ಟ. ದೂರ ಪ್ರಯಾಣಕ್ಕೆ ಹೋಗಬೇಕಾದರೆ ರೈಲಿನಲ್ಲಿ ಹೋಗುವುದು ಉತ್ತಮ. ರೈಲಿನಲ್ಲಿ ಪ್ರಯಾಣ ಬೆಳೆಸಬೇಕಾದರೆ ನಮ್ಮ ಕಣ್ಣಿಗೆ ಹಲವಾರು ವಿಚಾರಗಳು ಗೋಚರಿಸುತ್ತದೆ. ಅದರಲ್ಲೂ ರೈಲ್ವೇ ಗುರುತುಗಳು ಹಾಗೂ ಚಿಹ್ನೆಗಳನ್ನು ಕಂಡಿರುತ್ತೇವೆ. ಇವೆಲ್ಲ ಏನು ಸೂಚಿಸುತ್ತದೆ? ಇದು ಏನಿಕೆ ಬಳಸಿದ್ದಾರೆ ಎಂಬುದರ ಕುರಿತು ನಮಗೆ ಪ್ರಶ್ನೆ ಮೂಡುವುದು ಸಹಜ. ಆದರೆ ಇದಕ್ಕೆ ಉತ್ತರ ಇದೆ.

ಹಳದಿ ಅಥವಾ ಬಿಳಿ ಬಣ್ಣದ ಪಟ್ಟಿ ಏನು ಸೂಚಿಸುತ್ತದೆ?
ನೀವು ನೀಲಿ ICF (ಇಂಟಿಗ್ರಲ್ ಕೋಚ್ ಫ್ಯಾಕ್ಟ್ರಿ) ಯಲ್ಲಿ ಪ್ರಯಾಣಿಸುತ್ತಿದ್ದರೆ, ಕಿಟಿಕಿಯ ಕೊನೆಯಲ್ಲಿ ಹಳದಿ ಅಥವಾ ಬಿಳಿ ಬಣ್ಣದ ಪಟ್ಟಿಯನ್ನು ನೋಡಿರಬಹುದು. ಬಿಳಿ ಬಣ್ಣವು ಕಾಯ್ದಿರಿಸದೇ ಇರುವ ದ್ವಿತೀಯ ದರ್ಜೆಯ ಕೋಚ್‌ಗಳನ್ನು ಸೂಚಿಸುತ್ತದೆ. ಏಕೆಂದರೆ ರೈಲಿಗಾಗಿ ಅಸಂಖ್ಯಾತ ಜನರು ಕಾಯುತ್ತಿರುತ್ತಾರೆ. ಹೀಗಾಗಿ ಪ್ರಯಾಣಿಕರಿಗೆ ಜನರಲ್ ಕೋಚ್ ಯಾವುದು ಎಂದು ಸುಲಭವಾಗಿ ಕಾಣಲು ಈ ರೀತಿ ಪಟ್ಟಿ ಹಾಕಿರುತ್ತಾರೆ.

ನೇರ ರೇಖೆಯ ಹಳದಿ ಪಟ್ಟಿ ಏನನ್ನು ಸೂಚಿಸುತ್ತದೆ?
ನೀಲಿ ಹಾಗೂ ಕೆಂಪು ಕೋಚ್‌ಗಳಲ್ಲಿ ಬಿಡಿಸಿರುವ ನೇರ ರೇಖೆಯ ಹಳದಿ ಪಟ್ಟಿಗಳನ್ನು ಕಂಡಲ್ಲಿ ಈ ಬೋಗಿಯಲ್ಲಿ ವಿಶೇಷವಾಗಿ ಅಂಗವಿಕಲರಿಗೆ ಮತ್ತು ಅನಾರೋಗ್ಯದಿಂದ ಪ್ರಯಾಣಿಕರಿಗೆ ಮೀಸಲಾಡಿಲಾಗುತ್ತದೆ. ಹೀಗಾಗಿ ಈ ಪ್ರಯಾಣಿಕರು ಯಾವುದೇ ತೊಂದರೆಯಿಲ್ಲದೆ ರೈಲಿನಲ್ಲಿ ಪ್ರಯಾಣಮಾಡಬಹುದು.

ಬೂದು ಬಣ್ಣದ ಕೋಚ್‌ನಲ್ಲಿರುವ ಹಸಿರು, ಕೆಂಪು ಪಟ್ಟಿಗಳು?
ಇದೆ ರೀತಿ ರೈಲಿನಲ್ಲಿ ಬೂದು ಬಣ್ಣದ ಕೋಚ್‌ನಲ್ಲಿರುವ ಹಸಿರು, ಕೆಂಪು ಪಟ್ಟಿಯನ್ನು ನಾವು ನೋಡಬಹುದು. ಹಸಿರು ಪಟ್ಟಿಯು ಮಹಿಳೆಯರಿಗೆ ಮೀಸಲಿಟ್ಟಿರುವ ಕೋಚ್ ಅನ್ನು ಸೂಚಿಸುತ್ತದೆ, ಅದೇ ರೀತಿ ಕೆಂಪು ಪಟ್ಟಿ ನಿರ್ದಿಷ್ಟವಾಗಿ ಮುಂಬೈ ರೈಲು ನಿಲ್ದಾಣಗಳಲ್ಲಿ EMU/MEMU ರೈಲುಗಳಲ್ಲಿರುವ ಪ್ರಥಮ ದರ್ಜೆ ಕ್ಯಾಬಿನ್‌ಗಳನ್ನು ಸೂಚಿಸುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top