ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ T20 ಸರಣಿಯಲ್ಲಿ ಭಾರತ 2-1 ಅಂತರದಿಂದ ಜಯಗಳಿಸಿದೆ. ಆದರೆ ಈ ಗೆಲುವಿನೊಂದಿಗೆ ಕಳೆದ ಹಲವಾರು ವರ್ಷಗಳಿಂದ ಭಾರತ ಕ್ರಿಕೆಟ್ ನಲ್ಲಿ ನಡೆದುಕೊಂಡು ಬರುತ್ತಿದ್ದ ಪದ್ದತಿಯನ್ನು ರೋಹಿತ್ ಶರ್ಮಾ ಬ್ರೇಕ್ ಮಾಡಿದ್ದಾರೆ.
ಧೋನಿ ಭಾರತ ಯಾವುದಾದರು ಸರಣಿಯನ್ನು ಗೆದ್ದರೆ ಅದರ ಕಪ್ ಅನ್ನು ತಂಡದಲ್ಲಿರುವ ಕಿರಿಯ ಆಟಗಾರಿಗೆ ಅಥವಾ ಹೊಸ ಆಟಗಾರರಿಗೆ ನೀಡುತ್ತಿದ್ದರು. ಇದೆ ಸಂಪ್ರದಾಯವನ್ನು ಧೋನಿ ನಿವೃತಿಯ ನಂತರ ವಿರಾಟ್ ಕೊಹ್ಲಿ ಮುಂದುವರಿಸಿಕೊಂಡು ಹೋದರು. ಆದರೆ ಇದೆ ಮೊದಲ ಬಾರಿಗೆ ರೋಹಿತ್ ಶರ್ಮಾ ಟ್ರೋಫಿಯನ್ನು ತಂಡದ ಹಿರಿಯ ಆಟಗಾರಿಗೆ ನೀಡಿ ಹಳೆಯ ಸಂಪ್ರದಾಯಕ್ಕೆ ಬ್ರೆಕ್ ಹಾಕಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಸರಣಿಯನ್ನು ಗೆದ್ದ ಬಳಿಕ ರೋಹಿತ್ ಶರ್ಮಾ ಟ್ರೋಫಿಯನ್ನು ತಂಡದ ಹಿರಿಯ ಆಟಗಾರರಾದ ದಿನೇಶ್ ಕಾರ್ತಿಕ್ ಅವರಿಗೆ ನೀಡಿದರು. ರೋಹಿತ್ ಶರ್ಮಾ ಟ್ರೋಫಿ ನೀಡುತ್ತಿದ್ದಂತೆ ದಿನೇಶ್ ಕಾರ್ತಿಕ್ ಅದನ್ನು ನಿರಾಕರಿಸುವುದನ್ನು ನಾವು ವಿಡಿಯೋ ದಲ್ಲಿ ಗಮನಿಸಬಹುದು. ಆದರೆ ಸಹ ಆಟಗಾರರಾದ ಹಾರ್ಧಿಕ್ ಪಾಂಡ್ಯ ಅಶ್ವಿನ್ ಒತ್ತಾಯ ಮಾಡುವ ಮೂಲಕ ಡಿಕೆ ಕೈಯಿಂದ ಟ್ರೋಫಿಯನ್ನು ಎತ್ತಿ ಹಿಡಿಸಿದ್ದಾರೆ.
ನಾಯಕ ರೋಹಿತ್ ಶರ್ಮಾ ದಿನೇಶ್ ಕಾರ್ತಿಕ್ ಅವರಿಗೆ ಟ್ರೋಫಿ ನೀಡುವುದರಲ್ಲೂ ಒಂದು ಅರ್ಥ ಇದೆ. 2019 ರಿಂದ ದಿನೇಶ್ ಕಾರ್ತಿಕ್ ಭಾರತ ತಂಡದಿಂದ ಹೊರಗುಳಿದಿದ್ದರು. ಇದಾದ ಬಳಿಕ ಅವರು ಮತ್ತೆ ಭಾರತ ತಂಡದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದಾದ ನಂತರ 2022 ಐಪಿಎಲ್ ನಲ್ಲಿ ಆರ್ ಸಿ ಬಿ ತಂಡದ ಪರ ಅಮೋಘವಾದ ಪ್ರದರ್ಶನ ನೀಡಿದ ಕಾರಣ ಇವರನ್ನು ಮತ್ತೆ ಭಾರತ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಆಸ್ಟ್ರೇಲಿಯಾ ವಿರುದ್ಧ ನಡೆದ ಸರಣಿಯಲ್ಲೂ ಸಹ ಇವರು ಅಮೋಘವಾದ ಪ್ರದರ್ಶನ ನೀಡಿದರು. ಇದೆ ಕಾರಣಕ್ಕಾಗಿ ರೋಹಿತ್ ಶರ್ಮಾ ಕಾರ್ತಿಕ್ ಅವರಿಗೆ ಟ್ರೋಫಿ ನೀಡಿದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
