fbpx
ಸಮಾಚಾರ

ತಿರುಪತಿಗೆ ಬರುವ ಸಾಮಾನ್ಯ ಭಕ್ತಾದಿಗಳಿಗೆ ಗುಡ್ ‌ನ್ಯೂಸ್‌ ನೀಡಿದ ಟಿಟಿಡಿ!

ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಪ್ರತಿ ನಿತ್ಯ ಜನರು ಸಾಲು ಸಾಲಲ್ಲಿ ನಿಂತು ಕಾಯಬೇಕು. ಆದರೆ ಇದೀಗ ಭಕ್ತಾದಿಗಳು ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಹೆಚ್ಚು ಸಮಯ ಕಾಯಬೇಕಿಲ್ಲ. ಅದರಲ್ಲೂ ಸಾಮಾನ್ಯ ಜನರಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಸುಲಭವಾಗಲು ಟಿಟಿಡಿ ಒಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಜನರಿಗೆ ಸುಲಭವಾಗುವ ದೃಷ್ಟಿಯಿಂದ ಶನಿವಾರ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ತಿಮ್ಮಪ್ಪನ ದೇವಸ್ಥಾನದ ಸಮಯದಲ್ಲಿ ಒಂದು ಬದಲಾವಣೆ ಮಾಡಲು ನಿರ್ಧರಿಸಿದರು. ಅದೇನೆಂದರೆ ಈ ಹಿಂದೆ ಗಣ್ಯರಿಗೆ ದೇವಸ್ಥಾನದಲ್ಲಿ ದರ್ಶನ ಪಡೆಯಲು ಬೆಳಗಿನ ಜಾವ 5:30 ಕ್ಕೆ ಸಮಯ ನಿಗದಿಯಾಗಿತ್ತು. ಆದರೆ ಇದೀಗ ಈ ಸಮಯವನ್ನು 10 ಘಂಟೆಗೆ ಮಾಡಬೇಕೆಂದು ಸಭೆಯಲ್ಲಿ ನಿರ್ಧರಿಸಿದ್ದಾರೆ.

ಏಕೆಂದರೆ ಈ ಹಿಂದೆ ಇದ್ದ ಸಮಯದಲ್ಲಿ ಸಾಮಾನ್ಯ ಭಕ್ತಾದಿಗಳು ಗಣ್ಯರು ದರ್ಶನ ಮುಗಿಸಿದ ಬಳಿಕ ತಾವು ದೇವರ ದರ್ಶನವನ್ನು ಮಾಡಬೇಕಿತ್ತು. ಇದರಿಂದ ಜನರು ಸಾಲಿನಲ್ಲಿ ನೀನು ಬಹಳ ಒಟ್ಟು ಕಾಯಬೇಕಿತ್ತು. ಆದರೆ ಇದೀಗ ಈ ಸಮಯವನ್ನು 10 ಘಂಟೆಗೆ ಮಾಡಿರುವುದರಿಂದ ಸಾಮಾನ್ಯ ಭಕ್ತಾದಿಗಳು ಸುಮಾರು 10 ಘಂಟೆವರೆಗೂ ದೇವರ ದರ್ಶನವನ್ನು ಪಡೆದು ನಂತರ ಗಣ್ಯರು ದರ್ಶನ ಪಡೆದ ನಂತರ ಇದನ್ನು ಮುಂದುವರಿಸ್ಕೊಂಡು ಹೋಗಬಹುದು. ಇದರಿಂದ ಸಾಮಾನ್ಯ ಜನರು ಹೆಚ್ಚು ಕಾಲ ಸಾಲಿನಲ್ಲಿ ನಿಲ್ಲುವುದು ತಪ್ಪುತ್ತದೆ.

ಪ್ರಸಿದ್ಧ ವೆಂಕಟೇಶ್ವರ ದೇವಸ್ಥಾನವನ್ನು ನಿರ್ವಹಿಸುವ ಟಿಟಿಡಿ ಟ್ರಸ್ಟ್ ಬೋರ್ಡ್, ತಿರುಮಲ ಬೆಟ್ಟದ ಮೇಲಿನ ವಸತಿ ಹಂಚಿಕೆ ವ್ಯವಸ್ಥೆಯನ್ನು ತಿರುಪತಿಗೆ ಸ್ಥಳಾಂತರಿಸಲು ನಿರ್ಧರಿಸಿದೆ. ಏಕೆಂದರೆ ಟಿಟಿಡಿಯಲ್ಲಿ ಎಲ್ಲ ವರ್ಗದ ಕೊಠಡಿಗಳು ಇದೆ. ಇದಲ್ಲದೆ 7500 ಘಟಕಗಳಿವೆ. ಆದರೆ ಇದು ಸೀಮಿತ ಯಾತ್ರಿಕರ ಅಗತ್ಯಗಳನ್ನು ಮಾತ್ರ ಹೊಂದಿದೆ. ಹೀಗಾಗಿ ತಿರುಪತಿಗೆ ಬರುವ ಅಸಂಖ್ಯಾತ ಭಕ್ತಾದಿಗಳು ಕೊಠಡಿ ಖಾಲಿಯಾಗುವವರೆಗೂ ಕಾದು ತಮಗೆ ಹಂಚಿಕೆಯಾಗುವ ಕೊಠಡಿಯನ್ನು ಪಡೆಯಬೇಕು ಇದರಿಂದ ಬಹಳಷ್ಟು ಸಮಯ ಅವರು ಕಾಯಬೇಕು. ಇದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ದರ್ಶನದ ಸಮಯ ಹಾಗೂ ವಾಸ್ತವ್ಯದ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಮೊದಲು ಪ್ರಾಯೋಗಿಕವಾಗಿ ಅಕ್ಟೋಬರ್‌ನಿಂದ ಆರಂಭಿಸಲಾಗುವುದು ಎಂದು ಟಿಟಿಡಿ ಮಂಡಳಿಯ ಅಧ್ಯಕ್ಷ ವೈ.ವಿ.ಸುಬ್ಬಾ ರೆಡ್ಡಿ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top