ಬಿಗ್ ಬಾಸ್ ಸೀಸನ್ 9 ಶುರುವಾಗಿದ್ದು, ಮೊದಲ ದಿನವೇ ಮನೆ ರಣರಂಗವಾಗಿದೆ. ಬಿಗ್ ಬಾಸ್ ಮನೆ ಅಂದಮೇಲೆ ಸ್ವಲ್ಪ ಹರಟೆ ಮತ್ತು ಸ್ವಲ್ಪ ಜಗಳ ಇದ್ದೆ ಇರುತ್ತೆ. ಆದರೆ ಬಿಗ್ ಬಾಸ್ ನ ಕೆಲವು ಸೀಸನ್ ಗಳಲ್ಲಿ ಕಾರ್ಯಕ್ರಮ ಶುರುವಾಗಿ ಕೆಲವು ದಿನಗಳ ನಂತರ ಜಗಳವಾಗುತ್ತಿತ್ತು. ಆದರೆ ಇದೀಗ ಕಾರ್ಯಕ್ರಮ ಶುರುವಾದ ಮೊದಲ ದಿನವೇ ಜಗಳವಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನ ಪ್ರಶಾಂತ್ ಸಂಭರ್ಗಿ ಮತ್ತು ರೂಪೇಶ್ ರಾಜಣ್ಣ ನಡುವೆ ಜಗಳ ಶುರುವಾಗಿದೆ. ‘ನಿಮ್ಮ ಮನಸ್ಥಿತಿ ಹೊಂದಿರುವ ಕೆಲವರು ಮಾತ್ರ ನಿಮ್ಮನ್ನು ಒಪ್ಪಿಕೊಳ್ಳುತ್ತಿದ್ದಾರೆ. ಆದರೆ, ಸಮಾಜ ನಿಮ್ಮನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಪ್ರಶಾಂತ್ ಸಂಬರ್ಗಿಗೆ ರೂಪೇಶ್ ರಾಜಣ್ಣ ಹೇಳಿದರು. ಈ ಮಾತು ಪ್ರಶಾಂತ್ ಅವರನ್ನು ಬಹಳಷ್ಟು ಕೆರಳಿಸಿತು. ನಂತರ ಇವರಿಬ್ಬರ ಮದ್ಯೆ ಮಾತಿನ ಚಕಮಕಿ ನಡೆದಿದೆ. ಇವರಿಬ್ಬರ ಜಗಳ ನೋಡಿ ಮನೆ ಮಂದಿ ಬಿಡಿಸಲು ಪ್ರಯತ್ನಿಸಿದರು. ಆದರೆ ಅದು ಸಾಧ್ಯವಾಗಲಿಲ್ಲ.
ಇವರಿಬ್ಬರ ಜಗಳ ನೋಡಿ ಅರುಣ್ ಸಾಗರ್ ನಗೆಪಟಾಕಿ ಸಿಡಿಸಿದ್ದರು. ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಟೇಬಲ್ ಕುಟ್ಟಿ ಜಗಳವಾಡುತ್ತಿದ್ದರು. ‘ಇಬ್ಬರೂ ಟೇಬಲ್ ಕುಟ್ಟಿ ಮಾತನಾಡುತ್ತಾರೆ. ಇದರಿಂದ ಚಿತ್ರಾನ್ನ ನಾನು ತಿನ್ನುವ ಮೊದಲೇ ಬಾಯಿ ಒಳಗೆ ಹೋಗುತ್ತಿದೆ. ದಯವಿಟ್ಟು ಟೇಬಲ್ ಕುಟ್ಟಿ ಮಾತನಾಡಬೇಡಿ’ ಎಂದು ಕೇಳಿಕೊಂಡರು. ಇದು ಮನೆಯವರನ್ನು ಬಹಳಷ್ಟು ನಗಿಸಿತು. ಇದಾದ ಬಳಿಕ ಪ್ರಶಾಂತ್ ಸಂಬರ್ಗಿ ಹಾಗೂ ರೂಪೇಶ್ ರಾಜಣ್ಣ ಅವರು ಜಗಳ ಮಾಡುವುದಿಲ್ಲ ಎಂದು ಶಪಥ ಕೂಡ ಮಾಡಿದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
