fbpx
ಸಮಾಚಾರ

ನವರಾತ್ರಿ 3ನೇ ದಿನ: ಶಕ್ತಿ ಚಂದ್ರಘಂಟ ದೇವಿಯ ಪೂಜೆ- ಯಾರೀ ಚಂದ್ರಘಂಟ ದೇವಿ..? ಹೆಸರು ಹೇಗೆ ಬಂತು

ಈಗಾಗಲೇ ನವರಾತ್ರಿ 2022 ರ ಹಬ್ಬವು ಆರಂಭವಾಗಿದ್ದು, ನವರಾತ್ರಿಯ ಒಂಬತ್ತು ದಿನಗಳ ಕಾಲ ಮಾತೆ ದುರ್ಗೆಯ ವಿವಿಧ ರೂಪಗಳನ್ನು ಪೂಜಿಸುವ ಸಂಪ್ರದಾಯವಿದೆ. ದುರ್ಗಾ ದೇವಿಯ ಮೂರನೇ ಶಕ್ತಿಯ ಹೆಸರು ಚಂದ್ರಘಂಟಾ. ದುರ್ಗಾ ದೇವಿಯ ಈ ಚಂದ್ರಘಂಟಾ ರೂಪವು ಅತ್ಯಂತ ಶಾಂತಿಯುತ ಮತ್ತು ಪರೋಪಕಾರಿ. ದುರ್ಗಾ ದೇವಿಯ ಈ ಮೂರನೇ ರೂಪವಾದ ಚಂದ್ರಘಂಟಾಳನ್ನು ನವರಾತ್ರಿಯ ಮೂರನೇ ದಿನದಂದು ಪೂಜಿಸಲಾಗುತ್ತದೆ.

ನವದುರ್ಗೆಯರಲ್ಲಿ ಮೂರನೇ ಶಕ್ತಿ ಚಂದ್ರಘಂಟ ದೇವಿ:
ನವದುರ್ಗೆಯರಲ್ಲಿ ಮೂರನೆ ಶಕ್ತಿಯ ಹೆಸರು ಚಂದ್ರಘಂಟ ದೇವಿ. ಇವಳು ಶಿರದಲ್ಲಿ ಚಂದ್ರನನ್ನು ಕೂರಿಸಿಕೊಂಡಿದ್ದಾರೆ. ಅದಕ್ಕಾಗಿ ಈಕೆಯನ್ನು ಚಂದ್ರಘಂಟ ಎಂದು ಕರೆಯಲಾಗುತ್ತದೆ. ಚಂದ್ರಘಂಟಾಳ ರೂಪ ಅತ್ಯಂತ ವಿಶೇಷ.ಈಕೆ ಸಿಂಹದ ಮೇಲೆ ಕುಳಿತಿದ್ದಾಳೆ, ಗಂಟೆಯಾಕಾರದ ಅರ್ಧ ಚಂದ್ರ , ಹತ್ತು ಕೈಗಳಲ್ಲಿ ಖಡ್ಗ, ತ್ರಿಶೂಲ, ಶಸ್ತ್ರಗಳನ್ನು ಹಿಡಿದಿದ್ದಾಳೆ .ಯುದ್ಧಕ್ಕೆ ಸನ್ನದ್ಧಳಾಗಿ ಹೊರಟಂತೆ ಕಾಣುತ್ತಾಳೆ, ಚಂದ್ರಘಂಟ ದುಷ್ಟರ ದಮನ ಮಾಡಿ ಶಿಷ್ಟರ ರಕ್ಷಣೆಗೆ ಸದಾಕಾಲ ಸನ್ನದ್ಧಳಾಗಿರುತ್ತಾಳೆ.

ಈ ದೇವಿಯ ಮಂತ್ರವನ್ನು ಜಪಿಸುವುದರಿಂದ ರಕ್ಷಣೆ ಸಿಗುತ್ತದೆ.ಚಂದ್ರಘಂಟ ಮಾತೆ ಸಕಲ ಐಶ್ವರ್ಯ ಅಧಿಕಾರವನ್ನು ಕರುಣಿಸುವ ದೇವತೆ. ನವರಾತ್ರಿಯ ಮೂರನೇ ದಿನ ಇವಳನ್ನು ಪೂಜಿಸಿದರೆ ಭಕ್ತರ ಕಷ್ಟಗಳು ಬಹುಬೇಗ ನಿವಾರಣೆಯಾಗುತ್ತವೆ.ಚಂದ್ರಘಂಟಳ ಆರಾಧನೆಯ ಫಲಗಳು ಹೀಗಿವೆ ಅವಳ ಕೃಪೆಯಿಂದ ಪಾಪ ಪರಿಹಾರವಾಗುತ್ತದೆ, ಚಂದ್ರಘಂಟಾ ದೇವಿಯ ಪೂಜೆಯಿಂದ ಭಯ ದೂರವಾಗುತ್ತದೆ, ದುಷ್ಟಶಕ್ತಿಗಳಿಂದ ರಕ್ಷಣೆ ಸಿಗುತ್ತದೆ, ಚಂದ್ರಘಂಟಳ ಆರಾಧನೆಯಿಂದ ಸಾಧಕರಿಗೆ ಆಧ್ಯಾತ್ಮಿಕ ದಿವ್ಯ ಅನುಭವ ಪಡೆಯಬಹುದು.ಈ ದೇವಿಯನ್ನು ಪೂಜಿಸುವುದರಲ್ಲಿ ಸಾಮ್ಯತೆ, ವಿನಮ್ರಭಾವ ಪ್ರಾಪ್ತಿಯಾಗುತ್ತದೆ. ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಸಿಗುತ್ತದೆ. ಜೊತೆಗೆ ಇಹಲೋಕ ಮತ್ತು ಪರಲೋಕದಲ್ಲಿ ದೇವಿಯ ಕೃಪೆಯಿಂದ ಸದ್ಗತಿ ದೊರೆಯುತ್ತದೆ.ನವರಾತ್ರಿಯ ದುರ್ಗಾ ಉಪಾಸನೆಯಲ್ಲಿ ಮೂರನೇ ದಿನ ಪೂಜೆ ವಿಶೇಷವಾದದ್ದು ಈ ದಿನ ಸಾಧಕನ ಮನಸ್ಸು ಮಣಿಪುರ ಚಕ್ರವನ್ನು ಪ್ರವೇಶಿಸುತ್ತದೆ. ಚಂದ್ರಘಂಟಾಳ ಕೃಪೆಯಿಂದ ಸಾಧಕರಿಗೆ ವಿಶೇಷ ಅನುಭೂತಿಯಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top