ಅಕ್ಟೋಬರ್ 1, 2022 ಶನಿವಾರ
ವರ್ಷ : 1944, ಶೋಭಾಕೃತ
ತಿಂಗಳು : ಆಶ್ವೇಜ, ಪಕ್ಷ : ಶುಕ್ಲಪಕ್ಷ
Panchangam
ತಿಥಿ : ಷಷ್ಠೀ : Sep 30 10:35 pm – Oct 01 08:47 pm; ಸಪ್ತಮೀ : Oct 01 08:47 pm – Oct 02 06:47 pm
ನಕ್ಷತ್ರ : ಜ್ಯೇಷ್ಠ: Oct 01 04:19 am – Oct 02 03:11 am; ಮೂಲ: Oct 02 03:11 am – Oct 03 01:52 am
ಯೋಗ : ಆಯುಷ್ಮಾನ್: Sep 30 10:32 pm – Oct 01 07:58 pm; ಸೌಭಾಗ್ಯ: Oct 01 07:58 pm – Oct 02 05:14 pm
ಕರಣ : ಕುಲವ: Sep 30 10:35 pm – Oct 01 09:42 am; ತೈತುಲ: Oct 01 09:42 am – Oct 01 08:47 pm; ಗರಿಜ: Oct 01 08:47 pm – Oct 02 07:48 am
Time to be Avoided
ರಾಹುಕಾಲ : 9:10 AM to 10:40 AM
ಯಮಗಂಡ : 1:38 PM to 3:07 PM
ದುರ್ಮುಹುರ್ತ : 07:47 AM to 08:35 AM
ವಿಷ : 12:22 AM to 01:52 AM
ಗುಳಿಕ : 6:12 AM to 7:41 AM
Good Time to be Used
ಅಮೃತಕಾಲ : 06:48 PM to 08:19 PM
ಅಭಿಜಿತ್ : 11:45 AM to 12:33 PM
Other Data
ಸೂರ್ಯೋದಯ : 6:12 AM
ಸುರ್ಯಾಸ್ತಮಯ : 6:06 PM
ಸತತ ಪರಿಶ್ರಮವೇ ಯಶಸ್ಸಿನ ಗುಟ್ಟೆಂದು ಚೆನ್ನಾಗಿ ಅರಿತಿರುವ ನಿಮಗೆ ಯೋಗ್ಯ ಪ್ರತಿಫಲ ದೊರೆಯುವುದು. ಕಾರ್ಯ ಒತ್ತಡ ಎಷ್ಟೇ ಇದ್ದರೂ ಕೂಡಾ ಮನಸ್ಥಿತಿಯನ್ನು ಕಳೆದುಕೊಳ್ಳದೆ ಇರುವ ನಿಮ್ಮ ಮನೋಧೈರ್ಯವನ್ನು ಇತರರು ಮೆಚ್ಚುವರು.
ತಲೆ ಗಟ್ಟಿ ಇದೆ ಎಂದು ಯಾರೂ ಬಂಡೆಗೆ ತಲೆ ಚಚ್ಚಿಕೊಳ್ಳುವುದಿಲ್ಲ. ಅಂತೆಯೇ ಎಲ್ಲಾ ವಿಷಯಗಳಲ್ಲೂ ಯಶಸ್ಸು ಹೊಂದುತ್ತೇನೆ ಎಂಬ ಭ್ರಮೆ ಬೇಡ. ತಗ್ಗಿ-ಬಗ್ಗಿ ನಡೆದಲ್ಲಿ ಇಚ್ಛಿತ ಕಾರ್ಯಗಳಲ್ಲಿ ಯಶಸ್ಸನ್ನು ಹೊಂದುವಿರಿ.
ನಿಮ್ಮ ಪ್ರಯತ್ನಗಳಿಗೆ ಸದ್ಯಕ್ಕೆ ಫಲ ದೊರೆಯುತ್ತಿಲ್ಲ ಎಂದು ಚಿಂತಿಸದಿರಿ. ಈಗ ಆಗುತ್ತಿರುವ ಘಟನೆಗಳು ನಿಮಗೆ ಒಂದು ಪಾಠವೆಂದು ಭಾವಿಸಿ ಮುನ್ನುಗ್ಗಿ ಹೋರಾಟ ಮಾಡಿ. ಸದ್ಯದರಲ್ಲಿಯೇ ನಿಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯುವುದು.
ಹಣಕಾಸಿನ ವಿಷಯದಲ್ಲಿ ಪ್ರಗತಿ ಕಂಡು ಬರುವುದು. ಮನೋಕಾಮನೆಗಳು ಪೂರ್ಣಗೊಳ್ಳುವುದು. ಆದರೆ ನೀವು ಚಿತ್ತಚಾಂಚಲ್ಯಕ್ಕೆ ಒಳಗಾಗದೆ ದೃಢ ಚಿತ್ತದಿಂದ ಕಾರ್ಯವನ್ನು ನಿರ್ವಹಿಸಬೇಕಾಗುವುದು.
ನೀವು ಹೋಗುತ್ತಿರುವ ಅಥವಾ ಬೆಳೆಯುತ್ತಿರುವ ಪ್ರಗತಿಯನ್ನು ಕಂಡು ಇತರೆಯವರು ಕರುಬುವರು ಮತ್ತು ನಿಮ್ಮ ಪ್ರಯತ್ನಗಳನ್ನು ವಿಫಲಗೊಳಿಸಲು ಅನೇಕ ರೀತಿಯ ಕಾರ್ಯತಂತ್ರವನ್ನು ಅವರು ರೂಪಿಸುವರು. ಕುಲದೇವತಾ ಸ್ಮರಣೆ ಮಾಡಿ.
ಖರ್ಚಿನ ದಾರಿಯನ್ನು ಸ್ಪಷ್ಟವಾಗಿ ನಿಯಂತ್ರಿಸಿ. ತಿಳಿದಿರುವುದಕ್ಕಿಂತಲೂ ಜಾಸ್ತಿ ಖರ್ಚು ವೆಚ್ಚಗಳು ಎದುರಾಗುವುದು. ಸದ್ಯದಲ್ಲಿಯೇ ನಿಮ್ಮ ಜೀವನದಲ್ಲಿ ಹರಡಿಕೊಂಡಿರುವ ಕಷ್ಟದ ಕಾರ್ಮೋಡಗಳು ಕರಗಿ ಸುಖವಾಗುವುದು. ತಾಳ್ಮೆಯಿಂದ ಇರಿ.
ನಿಮ್ಮ ಬಂಧುವರ್ಗ ಅಥವಾ ನಿಮಗೆ ಹತ್ತಿರದವರೇ ನಿಮಗೆ ನೋವಾಗುವಂತಹ ಮಾತುಗಳನ್ನು ಆಡುವ ಸಾಧ್ಯತೆ ಇರುತ್ತದೆ. ಆತ್ಮಸಾಕ್ಷಿ ಶುದ್ಧವಾಗಿರುವುದರಿಂದ ಈಬಗ್ಗೆ ಅನಗತ್ಯ ಭಯ ಬೇಡ.
ಯಾವುದೇ ರೀತಿಯ ಅಡ್ಡಮಾರ್ಗವನ್ನು ಹಿಡಿಯದಿರಿ ಮತ್ತು ಅಡ್ಡದಾರಿಗಳ ಬಗ್ಗೆ ಯೋಚನೆಯನ್ನು ಮಾಡದಿರಿ. ನೇರವಾದ ಮಾರ್ಗವು ನಿಮ್ಮನ್ನು ಉತ್ತಮ ಪ್ರಜೆಯನ್ನಾಗಿ ರೂಪಿಸುವುದು. ಅಲ್ಲದೆ ಸಾಮಾಜಿಕವಾಗಿ ಗೌರವಿಸಲ್ಪಡುವಿರಿ.
ಸಣ್ಣಪುಟ್ಟ ಅನಾರೋಗ್ಯವನ್ನು ನೀವು ಎದುರಿಸಬೇಕಾಗುವುದು. ಪ್ರಯಾಣದಲ್ಲಿ ಜಾಗ್ರತೆ ಅಗತ್ಯ. ಕುಲದೇವತೆಯ ಪ್ರಾರ್ಥನೆ ಮಾಡುವುದು ಒಳ್ಳೆಯದು. ಮನಸ್ಸಿನ ದುಗುಡಗಳು ಕಡಿಮೆ ಆಗುವುದು.
ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ ಒಳ್ಳೆಯ ಸಮಯ. ಅಂತೆಯೇ ತಂದೆ-ತಾಯಿಯ ಆರೋಗ್ಯದ ಕಡೆ ಅಥವಾ ಅವರ ಯೋಗಕ್ಷೇಮದ ಕಡೆ ಗಮನಹರಿಸಿ. ನಿಮ್ಮ ಕಾರ್ಯದ ಮೇಲೂ ಹೆಚ್ಚಿನ ಗಮನ ಕೊಡುವುದು ಒಳ್ಳೆಯದು.
ಹೊಸ ತರಹದ ಆಲೋಚನೆಗಳು ನಿಮ್ಮನ್ನು ಹುರಿದುಂಬಿಸಲಿವೆ. ಹಾಗಾಗಿ ಮಾನಸಿಕ ನೆಮ್ಮದಿ ಕಂಡುಕೊಳ್ಳುವಿರಿ. ನಿಮ್ಮ ಕೈಕೆಳಗೆ ಕೆಲಸ ಮಾಡುವವರು ನಿಮಗೆ ಸಹಾಯ ಮಾಡುವರು. ಬರುವ ದಿನಗಳು ವಿಜಯವನ್ನು ತರಲಿವೆ.
ದಾಂಪತ್ಯ ಜೀವನದಲ್ಲಿ ಸಮರಸ, ಸಹಬಾಳ್ವೆ ವೃದ್ಧಿಸಿಕೊಳ್ಳಿ. ಯಾರದೋ ಮಾತುಗಳಿಂದ ಪತಿ-ಪತ್ನಿಯರಲ್ಲಿ ಅನುಮಾನ ಸುಳಿಯದಂತೆ ನೋಡಿಕೊಳ್ಳಿ. ಸಮಚಿತ್ತದಿಂದ ಬಂದದ್ದನ್ನು ಎದುರಿಸುವಿರಿ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
