fbpx
ಸಮಾಚಾರ

ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆದ ಆರ್ಯವರ್ಧನ್ ಗುರೂಜಿ! ವಿಶೇಷ ಸರ್ಪ್ರೈಸ್ ನೀಡಿದ ಬಿಗ್ ಬಾಸ್

ಬಿಗ್ ಬಾಸ್ ಸೀಸನ್ 9 ಶುರುವಾಗಿ ಇದೀಗ ಎರಡು ವಾರಗಳು ಕಳೆದಿವೆ. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಟಾಸ್ಕ್ ನಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಇದೀಗ ಬಿಗ್ ಬಾಸ್ ಮನೆಯ ಎರಡನೆಯ ಕ್ಯಾಪ್ಟನ್ ಆಗಿ ಆರ್ಯವರ್ಧನ್ ಗುರೂಜಿ ಆಯ್ಕೆಯಾಗಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ಆಡಲು ಒಟ್ಟು 4 ಜನ ಆಯ್ಕೆಯಾಗಿದ್ದರು. ಆರ್ಯವರ್ಧನ್ ಗುರೂಜಿ, ಅಮೂಲ್ಯ,ದರ್ಶ್ ಮತ್ತು ದಿವ್ಯ ಉರುದುಗ ಆಯ್ಕೆಯಾಗಿದ್ದರು. ಈ ಟಾಸ್ಕ್ ನಲ್ಲಿ ಗುರೂಜಿ ಉತ್ತಮರಾಗಿ ಆಡಿ ಮನೆಯ ಕ್ಯಾಪ್ಟನ್ ಆಗಿ ಹೊರಹೊಮ್ಮಿದರು. ಇದರಿಂದ ಮನೆಯ ಸದಸ್ಯರಲ್ಲಿ ಬಹಳಷ್ಟು ಸಂತಸ ಸೃಷ್ಟಿಯಾಗಿತ್ತು.

ಕ್ಯಾಪ್ಟನ್ಸಿ ಟಾಸ್ಕ್ ಮುಂಚೆ ಬಿಗ್ ಬಾಸ್ ಮನೆಯ ಸದಸ್ಯರು ಗುರೂಜಿ ಅವರಿಗೆ ಒಂದು ಪ್ರಾಂಕ್ ಮಾಡಿದ್ದರು. ಅದರಲ್ಲಿ ಮನೆಯ ಸದಸ್ಯರು ಗುರೂಜಿ ಅವರನ್ನು ಬಿಟ್ಟು ಮಿಕ್ಕಿದವರನ್ನು ಟಾಸ್ಕ್ ನಲ್ಲಿ ಆಡುವಂತೆ ಸೂಚಿಸಿದರು. ಇದರಿಂದ ಗುರೂಜಿ ಅವರ ಮನಸ್ಸಿಗೆ ಬಹಳಷ್ಟು ನೋವಾಗಿತ್ತು. ನಂತರ ಬಿಗ್ ಬಾಸ್ ಬಾಸ್ ಇದನ್ನೇ ಇಟ್ಟುಕೊಂಡು ಮನೆಯ ಸದಸ್ಯರಿಗೆ ಪ್ರಾಂಕ್ ಮಾಡಿದರು. ಇದಾದ ನಂತರ ಬಿಗ್ ಬಾಸ್ ಇದನ್ನು ಪ್ರಾಂಕ್ ಎಂದು ಹೇಳಿ ಕ್ಯಾಪ್ಟನ್ಸಿ ಟಾಸ್ಕ್ ಆಡಲು 4 ಜನ ಸದಸ್ಯರ ಹೆಸರನ್ನು ಸೂಚಿಸುವಂತೆ ಹೇಳಿದರು.

ಕೊನೆಗೆ ಆಡಿದ 4 ಜನ ಆಟಗಾರರಲ್ಲಿ ಗುರೂಜಿ ಅತ್ಯುತ್ತಮವಾಗಿ ಆಡಿ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಮನೆಯ ಕ್ಯಾಪ್ಟನ್ ಆದ ಗುರೂಜಿ ಅವರಿಗೆ ಬಿಗ್ ಬಾಸ್ ಒಂದು ಸರ್ಪ್ರೈಸ್ ಸಹ ನೀಡಿದ್ದರು. ಗುರೂಜಿ ಅವರ ಮಗಳ ಕೈಯಲ್ಲಿ ಬಿಗ್ ಬಾಸ್ ಗುರೂಜಿ ಅವರಿಗೆ ಅಭಿನಂದನೆ ತಿಳಿಸಿದರು. ಇದರಿಂದ ಗುರೂಜಿ ಮತ್ತು ಬಿಗ್ ಬಾಸ್ ಮನೆಯ ಎಲ್ಲ ಸದಸ್ಯರು ಬಹಳಷ್ಟು ಖುಷಿಪಟ್ಟರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top