ಇತ್ತೀಚಿನ ದಿನಗಳಲ್ಲಿ ನಮ್ಮ ಕನ್ನಡ ಸಿನಿಮಾಗಳು ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೆ ಬೇರೆ ರಾಜ್ಯಗಳಲ್ಲಿಯೂ ಸಹ ಸಕತ್ ಸೌಂಡ್ ಮಾಡುತ್ತಿದೆ. ಇದಕ್ಕೆ ಒಂದು ಉದಾಹರಣೆ ಎಂದರೆ ಅದು ಕೆಜಿಎಫ್ ಸಿನಿಮಾ. ಇದಾದ ನಂತರ ಇದೀಗ ಸದ್ದು ಮಾಡುತ್ತಿರುವ ಕನ್ನಡದ ಸಿನಿಮಾ ಎಂದರೆ ಅದು ಕಾಂತಾರ. ಈಗಾಗಲೇ ಕರ್ನಾಟಕದಲ್ಲಿ ಬಾಕ್ಸ್ ಆಫೀಸ್ ಅನ್ನು ಧೂಳಿಪಟ ಮಾಡಿರುವ ಈ ಸಿನಿಮಾ ಇದೀಗ ಬಾಲಿವುಡ್ ಬಾಕ್ಸ್ ಆಫೀಸ್ ಅನ್ನು ಧೂಳಿಪಟ ಮಾಡಲು ರೆಡಿಯಾಗಿದೆ.
ಕರ್ನಾಟಕದಲ್ಲಿ ಇದೀಗ ಎಲ್ಲಿ ನೋಡಿದರು ಬರಿ ಕಾಂತಾರದ್ದೆ ಮಾತು. ಏಕೆಂದರೆ ಈ ಸಿನಿಮಾ ಇದೀಗ ನಿರೀಕ್ಷೆಗೂ ಮೀರಿ ಬೆಳೆದು ನಿಂತಿದೆ. ಕೇವಲ ಕರ್ನಾಟಕದಲ್ಲಿ ಇಷ್ಟೊಂದು ಸಾಧನೆ ಮಾಡಿರುವ ಈ ಸಿನಿಮಾ ಇದೀಗ ಬಾಲಿವುಡ್ ಅಂಗಳಕ್ಕೆ ಕಾಲಿಡುತ್ತಿದೆ. ಇದೇ ಅಕ್ಟೋಬರ್ 14ರ ಶುಕ್ರವಾರ ಹಿಂದಿ ಭಾಷೆಯಲ್ಲೂ “ಕಾಂತಾರ” ಚಿತ್ರ ತೆರೆ ಕಾಣುತ್ತಿದೆ. ಮುಂಬೈ ಸೇರಿದಂತೆ ವಿವಿಧೆಡೆ ಸುಮಾರು 2,500ಕ್ಕೂ ಅಧಿಕ ಸ್ಕೀನ್‌ಗಳಲ್ಲಿ “ಕಾಂತಾರ” ಅಬ್ಬರಿಸಲಿದೆ.
ಅಚ್ಚರಿಯ ಸಂಗತಿ ಎಂದರೆ ಕಾಂತಾರ ಸಿನಿಮಾವು ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಿಂದ ಮೂಡಿಬಂದಿದೆ. ಈ ಹಿಂದೆ ಹೊಂಬಾಳೆ ಫಿಲ್ಮ್ ಸಂಸ್ಥೆಯಿಂದ ಮೂಡಿಬಂದ ಕೆಜಿಎಫ್ ಸಿನಿಮಾ ದಾಖಲೆ ಮಟ್ಟದ ಯಶಸ್ಸನ್ನು ಗಳಿಸಿತ್ತು. ಇದೀಗ ಕಾಂತಾರ ಸಿನಿಮಾ ಕೂಡ ಇದೆ ಹಾದಿಯಲ್ಲಿ ಸಾಗಿ ಬಾಲಿವುಡ್ ಬೋಸ್ ಆಫೀಸ್ ಅನ್ನು ಧೂಳಿಪಟ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲಾ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
