ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಿನಿಮಾ ಮಾತ್ರವಲ್ಲದೆ ಕ್ರೀಡೆಯಲ್ಲೂ ಸಹ ನಿಪುಣರು. ಅದರಲ್ಲೂ ಕ್ರಿಕೆಟ್ ಎಂದರೆ ಇವರಿಗೆ ಪಂಚಪ್ರಾಣ. ಹಲವಾರು ಕ್ರಿಕೆಟ್ ಟೂರ್ನಿಯಲ್ಲೂ ಸಹ ಕಿಚ್ಚ ಭಾಗವಹಿಸಿದ್ದಾರೆ. ಇದೀಗ ಕಿಚ್ಚ ಸುದೀಪ್ ಕ್ರಿಕೆಟ್ ನ ದೈತ್ಯ ಆಟಗಾರ ಕ್ರಿಸ್ ಗೇಲ್ ಅವರ ಜೊತೆ ಬ್ಯಾಟ್ ಬೀಸಲಿದ್ದಾರೆ.
ಕಿಚ್ಚ ಸುದೀಪ್ ಮತ್ತು ವೆಸ್ಟ್ ಇಂಡೀಸ್ ನ ದೈತ್ಯ ಆಟಗಾರ ಕ್ರಿಸ್ ಗೇಲ್ ಒಟ್ಟಿಗೆ ಸೂಪರ್ ಟೆನ್ ಕ್ರಿಕೆಟ್ ಲೀಗ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೂಪರ್ ಟೆನ್ ಲೀಗ್ ನಲ್ಲಿ ಸೆಲೆಬ್ರಿಟಿಗಳು ಮತ್ತು ಕ್ರಿಕೆಟ್ ಜಗತ್ತಿನ ಮಾಜಿ ಆಟಗಾರರು ಆಡುತ್ತಾರೆ. ಇದು 10 ಓವರ್ ಗಳ ಪಂದ್ಯವಾಗಲಿದ್ದು, ಬೆಂಗಳೂರಿನಲ್ಲಿ ಎರಡು ಪಂದ್ಯಗಳು ನಡೆಯಲಿದೆ.
ಈ ಟೂರ್ನಿಯಲ್ಲಿ ಕನ್ನಡ, ಹಿಂದಿ, ತಮಿಳು ಮತ್ತು ತೆಲುಗು ಚಿತ್ರರಂಗದ ನಟರು ಮತ್ತು ವಿಶ್ವದ ಮಾಜಿ ಕ್ರಿಕೆಟಿಗರು ಒಟ್ಟಿಗೆ ಸೇರಿ ಆಡಲಿದ್ದಾರೆ. ಹೀಗಾಗಿ ಈ ಟೂರ್ನಿಯಲ್ಲಿ ನಮ್ಮ ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ ಭಾಗವಹಿಸಲಿದ್ದಾರೆ. ಈ ಕುರಿತು ಕ್ರೈಸ್ ಗೇಲ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಸೂಪರ್ ಟೆನ್ ಕ್ರಿಕೆಟ್ ಲೀಗ್ ಕುರಿತು ಕ್ರೈಸ್ ಗೇಲ್ ” ಜಗತ್ತಿನಾದ್ಯಂತ ಇರುವ ನನ್ನ ಕ್ರಿಕೆಟ್ ಗೆಳೆಯರು ಮತ್ತು ಚಿತ್ರರಂಗದಲ್ಲಿರುವ ದಿಗ್ಗಜರೊಂದಿಗೆ ಕ್ರಿಕೆಟ್ ಆಡಲು ಉತ್ಸುಕನಾಗಿದ್ದೇನೆ. ಪಂದ್ಯಾವಳಿಯು ಸೂಪರ್ 10 ಮಾದರಿಯಲ್ಲಿ ಇರಲಿದ್ದು, ಡಿಸೆಂಬರ್‌ನಲ್ಲಿ ನಡೆಯುವ ಸಾಧ್ಯತೆ ಇದೆ ” ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
