fbpx
ಸಮಾಚಾರ

ಭಾರತ ಮತ್ತು ಪಾಕಿಸ್ತಾನ ನಡುವಿನ ಮೊದಲ ಅಭ್ಯಾಸ ಪಂದ್ಯ ನಡೆಯುವುದು ಅನುಮಾನ! ಯಾಕೆ ಗೊತ್ತಾ?

ಕ್ರಿಕೆಟ್ ಜ್ವರ ಎಂಬುದು ಇದೀಗ ಎಲ್ಲ ಕಡೆ ಹಬ್ಬುತ್ತಿದೆ. ಅದರಲ್ಲೂ T20 ವಿಶ್ವಕಪ್ ಶುರುವಾಗುತ್ತಿರುವ ಕಾರಣ ಇದರ ಜ್ವರ ಇದೀಗ ಬಹಳಷ್ಟು ವೇಗವಾಗಿ ಹರಿದಾಡುತ್ತಿದೆ. ಕ್ರಿಕೆಟ್ ಪ್ರೇಮಿಗಳು ಬಹಳ ಕಾತುರದಿಂದ ಕಾಯುತ್ತಿರುವ ಪಂದ್ಯಗಳಲ್ಲಿ ಭಾರತ ಮತ್ತು ಪಾಕಿಸ್ತಾನ್ ಪಂದ್ಯ ಎಂದು ಹೇಳಿದರೆ ತಪ್ಪಾಗಲಾರದು. ಆದರೆ ಈ ಹೈ ವೋಲ್ಟೇಜ್ ಪಂದ್ಯ ನಡೆಯುವುದು ಅನುಮಾನ ಎಂದು ಹೇಳಲಾಗುತ್ತಿದೆ.

ಕ್ರಿಕೆಟ್ ಎಂದರೆ ಅದು ಬಹಳ ರೋಚಕತೆಯಿಂದ ಕೂಡಿರುವ ಒಂದು ಆಟ. ಅದರಲ್ಲೂ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆಯುವ ಕದನವನ್ನು ಮಾತ್ರ ಕ್ರಿಕೆಟ್ ಪ್ರೇಮಿಗಳು ಇಂದಿಗೂ ಸಹ ಮಿಸ್ ಮಾಡಿಕೊಳ್ಳುವುದಿಲ್ಲ. ಕೇವಲ ಉಭಯ ತಂಡಗಳ ರಾಜ್ಯಗಳು ಮಾತ್ರವಲ್ಲದೆ ಇಡೀ ವಿಶ್ವವೇ ಈ ಪಂದ್ಯವನ್ನು ವೀಕ್ಷಿಸಲು ಬಹಳ ಕಾತುರದಿಂದ ಕಾಯುತ್ತಿರುತ್ತಾರೆ. ಆದರೆ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಮೊದಲ ಅಭ್ಯಾಸ ಪಂದ್ಯಕ್ಕೆ ವರುಣನ ಅಡ್ಡಿಯಾಗುವ ಎಲ್ಲಾ ಸಾಧ್ಯತೆಗಳಿವೆ.

ಅಕ್ಟೋಬರ್ 23ರಂದು ಆಸ್ಪ್ರೇಲಿಯಾ ಕಾಲಮಾನ ಸಂಜೆ 7 ಗಂಟೆಗೆ (ಭಾರತೀಯ ಕಾಲಮಾನ ಮಧ್ಯಾಹ್ನ 1.30ಕ್ಕೆ) ಬದ್ಧವೈರಿಗಳ ನಡುವಿನ ಸೂಪರ್‌-12 ಹಂತದ ಪಂದ್ಯಕ್ಕೆ ಐತಿಹಾಸಿಕ ಮೆಲ್ಬರ್ನ್‌ ಕ್ರಿಕೆಟ್‌ ಮೈದಾನ ಆತಿಥ್ಯ ವಹಿಸಬೇಕಿದೆ. ಆದರೆ ಈ ದಿನ ಮೆಲ್ಬರ್ನ್‌ನಲ್ಲಿ ಶೇ.90ರಷ್ಟು ಮಳೆಯಾಗುವ ಸಾದ್ಯತೆಗಳಿದೆ ಎಂದು ಇಲ್ಲಿನ ಹವಾಮಾನ ಇಲಾಖೆ ತಿಳಿಸಿದೆ. ಗುಡುಗು ಸಹಿತ ಭಾರಿ ಮಳೆಯಾಗುವ ಸಾದ್ಯತೆಗಳಿಂದ ಪಂದ್ಯ ರದ್ದಾಗಬಹುದು.

ಒಂದು ವೇಳೆ ಮಳೆ ಬಿಟ್ಟುಬಿಡದೆ ಕಾಡಿದರೆ ಖಂಡಿತ ಪಂದ್ಯ ರದ್ದಾಗುತ್ತದೆ. ಸ್ವಲ್ಪ ಸಮಯದ ನಂತರ ಮಳೆ ಕಡಿಮೆಯಾದರೆ ಎರಡು ತಂಡಗಳಿಗೆ ತಲಾ 5 ಓವರ್ ಗಳನ್ನು ಆಡಲು ಅವಕಾಶ ನೀಡಲಾಗುತ್ತಿದೆ. ಇದು ಕೊನೆಪಕ್ಷ ಮಳೆ ನಿಂತರೆ ಮಾತ್ರ. ಒಂದು ವೇಳೆ ಮಳೆ ಕೊನೆಯವರೆಗೂ ನಿಲ್ಲದೆ ಇದ್ದರೆ ಪಂದ್ಯವನ್ನು ರದ್ದು ಮಾಡಲಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top