fbpx
ಸಮಾಚಾರ

ಕಾಂತಾರ ಸಿನಿಮಾ ನೋಡಿ ಮೆಚ್ಚುಗೆಯ ಮಾತನಾಡಿದ ತಲೈವಾ ರಜನಿಕಾಂತ್!

ಕಾಂತಾರ ಸಿನಿಮಾ ಪ್ರಪಂಚಾದ್ಯಂತ ಸಕತ್ ಸೌಂಡ್ ಮಾಡುತ್ತಿರುವ ವಿಷಯ ನಮಗೆಲ್ಲರಿಗೂ ಗೊತ್ತು. ಈ ಸಿನಿಮಾ ಬಾಕ್ಸ್ ಆಫೀಸ್ ಅನ್ನು ಸಹ ಧೂಳಿಪಟ ಮಾಡುತ್ತಿದೆ. ಜನಸಾಮಾನ್ಯರಿಂದ ಇಡಿದು ಹಲವಾರು ಸೆಲೆಬ್ರಿಟಿಗಳು ಸಹ ಈ ಸಿನಿಯಮವನ್ನು ವೀಕ್ಷಿಸಿ ಪ್ರಶಂಸಿದ್ದಾರೆ. ಇದೀಗ ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಈ ಸಿನಿಮಾವನ್ನು ವೀಕ್ಷಿಸಿದ್ದು, ಈ ಸಿನಿಮಾದ ಕುರಿತು ಟ್ವೀಟ್ ಮೂಲಕ ಪ್ರಶಂಸೆಯ ಮಾತನಾಡಿದ್ದಾರೆ.

 

 

ರಜನಿಕಾಂತ್ ಅವರು ಇತ್ತೀಚಿಗೆ ಕಾಂತಾರ ಸಿನಿಮಾವನ್ನು ವೀಕ್ಷಿಸಿದರು. ಈ ಸಿನಿಮಾವನ್ನು ವೀಕ್ಷಿಸಿದ ನಂತರ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ” ಕಾಂತಾರ ಸಿನಿಮಾ ನೋಡುವಾಗ ರೋಮಾಂಚನ ಆಯಿತು. ರಿಷಬ್​ ಶೆಟ್ಟಿ ಅವರು ನಾಯಕನಾಗಿ, ನಿರ್ದೇಶಕನಾಗಿ ಮತ್ತು ಬರಹಗಾರನಾಗಿ ನಟಿಸಿರುವುದರಿಂದ ಅವರಿಗೆ ಹ್ಯಾಟ್ಸಾಫ್​. ಭಾರತೀಯ ಚಿತ್ರರಂಗದಲ್ಲಿ ಮಾಸ್ಟರ್​ ಪೀಸ್​ ಎನಿಸಿಕೊಂಡಿರುವ ಈ ಚಿತ್ರದ ಇಡೀ ತಂಡಕ್ಕೆ ಅಭಿನಂದನೆಗಳು ” ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಇದನ್ನು ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆ ರೀಟ್ವೀಟ್​ ಮಾಡಿಕೊಂಡಿದ್ದು, ತಲೈವಾಗೆ ಧನ್ಯವಾದ ತಿಳಿಸಿದೆ.

ಕಾಂತಾರ ಸಿನಿಮಾ ಹಲವಾರು ರೆಕಾರ್ಡ್ ಗಳನ್ನು ಬ್ರೆಕ್ ಮಾಡುತ್ತಾ ಮುಂದೆ ಸಾಗುತ್ತಿದೆ. ಕೇವಲ ಕರ್ನಾಟಕದಲ್ಲೇ ಈ ಸಿನಿಮಾವನ್ನು ಸುಮಾರು 77 ಲಕ್ಷ ಜನ ವೀಕ್ಷಿಸಿದ್ದು, ಇದು ಈ ಹಿಂದೆ ಇದ್ದ ಪ್ರತಿಯೊಂದು ರೆಕಾರ್ಡ್ ಅನ್ನು ಧೂಳಿಪಟ ಮಾಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top