ಅಮೃತ್ತೂರು ಪಾಳೇಗಾರ ರಾಜಮನೆತನ ಬಹಳ ಅದ್ದೂರಿಯಾಗಿ ಸಂತೋಷದಿಂದ ಎಲ್ಲ ಸಮುದಾಯದ ಜನಾಂಗದವರ ಜೊತೆಗೆ ಬದುಕುತ್ತಿದ್ದರು. ಹೀಗೇ ಕಾಲ ಕ್ರಮೇಣ ಪಾಳೇಗಾರರು ಆನಂದದಿಂದ ಬದುಕುತ್ತಿರಲು ಸವಿತಾ ಸಮಾಜದ ಕ್ಷೌರಿಕರು ಪಾಳೇಗಾರರ ಮನೆಗೆ ಬಂದು ಕ್ಷೌರಿಕ ತುಂಬಾ ಅಚ್ಚುಕಟ್ಟಾಗಿ ಕ್ಷೌರ ಮಾಡಿ ಹೋಗುತ್ತಿದ್ದರು.
ಒಂದು ದಿನ ಪಾಳೇಗಾರರು ಮಲಗಿದ್ದರು ಅವರಿಗೆ ತೊಂದರೆ ಕೊಡಬಾರದೆಂದು ತಿಳಿದು ಗೌರವದಿಂದ ಕ್ಷೌರಿಕ ಆ ದಿನ ಎಚ್ಚರವಾಗುವವರೆಗೂ ಅವರಿಗಾಗಿ ಕಾಯದೇ ಮಲಗಿದ್ದ ಪಾಳೇಗಾರರಿಗೆ ಗೊತ್ತಾಗದ ಹಾಗೆ ತುಂಬಾ ಅಚ್ಚುಕಟ್ಟಾಗಿ ಕ್ಷೌರಿಕನ ಕೆಲಸ ಮುಗಿಸಿ ನಿಂತ್ತಿದ್ದ, ಸ್ವಲ್ಪ ಸಮಯದಲ್ಲಿ ಎದ್ದ ರಾಜನಿಗೆ ಇವನ ಕೆಲಸದ ಆಸಕ್ತಿ ಹಾಗೂ ಗೌರವಕ್ಕೆ ಮೆಚ್ಚಿ ಹಿಂದೆ ಮುಂದೆ ಆಲೋಚಿಸದೇ ನಿನಗೆ ಎನು ಬೇಕು ಕೇಳು ಎಂದನು. ಆದಕ್ಕೆ ಅವನು ರಾಜನ ಮುಗ್ದತೆ, ಸರಳತೆಯವರಾದ ರಾಜರ ಅವಕಾಶವನ್ನು ಬಳಸಿಕೊಂಡು ನಿಮ್ಮ ಒಂದು ದಿನದ ರಾಜರಪಟ್ಟ ನನಗೆ ಬೇಕು ಎಂದು ಕೇಳಿದನು.
ಕೊಟ್ಟಮಾತಿನಂತೆ ರಾಜರ ಪಟ್ಟ ಬಿಟ್ಟು ಪಾಳೇಗಾರ ರಾಜ ಹೊರ ನಡೆಯುವ ಸಮಯದಲ್ಲಿ ಹಸುವಿನ ಕರುಗಳು ಮನೆ ಬಾಗಿಲಿಗೆ ಓಡುತ್ತಾ ಬಂದು ಬಿಟ್ಟವು ಕೂಡಲೇ ಪಾಳೇಗಾರ ರಾಜ ತಂಗಿಯನ್ನು ಕರೆದು ಕರುಗಳನ್ನು ಹಿಡಿದ ಕೊಂಡು ಹೋಗಲು ಹೇಳಿದನು.
ಕೂಡಲೇ ತಂಗಿಯು ತನ್ನ ಅಣ್ಣನ ಮಾತಿನಂತೆ ತಲೆಯ ಕೂದಲಿನಿಂದ ಕಟ್ಟಿದ ನಾಲ್ಕು ಕರುಗಳನ್ನು ಕರೆದು ಕೊಂಡು ಹೋದದ್ದನ್ನು ನೋಡಿದ ಕ್ಷೌರಿಕ ತಡ ಮಾಡದೇ ನಿಮ್ಮ ತಂಗಿಯನ್ನು ನನಗೆ ಕೊಟ್ಟು ಮದುವೆ ಮಾಡಿ ಕೊಡಿ ಎಂದು ಕೇಳಿಯೇ ಬಿಟ್ಟ, ಅದಕ್ಕೆ ಅಣ್ಣಂದಿರು ಮಾತಿಗೆ ಮಣಿದು ಒಪ್ಪಿದರು.
ಆ ದಿನ ರಾತ್ರಿ ಪಾಳೇಗಾರ ಹಾಗೂ ಇಡೀ ಕುಟುಂಬ ಯೋಚನೆಯಲ್ಲಿ ಮುಳುಗಿದರು. ತಂಗಿಯನ್ನು ಬೇರೆ ಜಾತಿಗೆ ಮದುವೆ ಮಾಡಲು ಸಾಧ್ಯವೇ ಇಲ್ಲ ಎಂದು ತಿಳಿದು ಇಡೀ ಪಾಳೇಗಾರ ಕುಟುಂಬವೇ ಊರು ಬಿಡಲು ನಿರ್ಧರಿಸಿ ರಾತ್ರೋ ರಾತ್ರಿ ಪೂರ್ವದ #ಉಜ್ಜನಿ ಪ್ರಾಂತ್ಯದ ಕಡೆ ಹೊರಟರು ಆ ಗಾಬರಿಯ ಸಮಯದಲ್ಲಿ ತಂಗಿಯನ್ನು ಮರೆತು ಬಿಟ್ಟು ಬರುತ್ತಿದ್ದರು. ಕೂಡಲೇ ತಂಗಿಯನ್ನು ನೆನಪಿಸಿಕೊಂಡು ಹೋಗಿ ಕರೆತರಲು ನೋಡಲು ದಾಟಿ ಬಂದ ಹಳ್ಳದಲ್ಲಿ ನೀರಿನ ರಬಸ ಹೆಚ್ಚಾಗಿ ಹೋಗಿತ್ತು.
ಮಾರನೆಯ ದಿನ ಬೆಳಿಗ್ಗೆ ಮಲಗಿದ್ದ ತಂಗಿ ಎದ್ದು ನೋಡಿದರೆ ಅಣ್ಣಂದಿರು ಇರಲಿಲ್ಲ ತಂಗಿಗೆ ಭಯವಾಗಿ ಕೂಡಲೇ ಕಡೆಯೋ ಕಂಬಕ್ಕೆ (ಮಜ್ಜಿಗೆ ಕಡೆಯುವ ಮಂತಿಗೆ) ನೇಣು ಬಿಗಿದುಕೊಂಡು ಸಾವನ್ನಪ್ಪುತ್ತಾಳೆ.
ಇದನ್ನೂ ನೋಡಿದ ಒಂದು ದಿನದ ಪಾಳೇಗಾರ ಕ್ಷೌರಿಕನೂ ಕೂಡ ತಾಳ ತುಂಬೆಗೆ (ಬಾಗಿಲ ತಾಳಕ್ಕೆ) ನೇಣು ಬಿಗಿದುಕೊಂಡು ಸಾವನ್ನಪ್ಪುತ್ತಾನೆ. ಆಸೆಯೇ ದುಃಖಕ್ಕೆ ಮೂಲ ಎಂಬ ಮಾತಿನಂತೆ ಈ ಪ್ರಸಂಗ ನೋಡಿದರೆ ಮೈ ರೋಮ ಎದ್ದು ನಿಲ್ಲುವ ಪ್ರಸಂಗವಾಗಿದೆ.
ಮುಂದಿನ ದಿನಗಳಲ್ಲಿ ಈ ಹೆಣ್ಣು ಮಗಳು ತನ್ನ ತಂಗಿಯ ಆತ್ಮದ ಆಸೆಯಂತೆ ವಾಸಿಸುವ ಮನೆಯ ಅಡುಗೆ ಮನೆಯಲ್ಲಿ ಶ್ರೀ ಹೊನ್ನಮ್ಮ ದೇವಿಯ ರೂಪದಲ್ಲಿ ನಮ್ಮ ಕುಲದ ಮನೇ ದೇವರ ಗುಡಿಯಲ್ಲಿ ನಮ್ಮ ವಂಶದೇವತೆಯರಲ್ಲಿ ಒಬ್ಬಳಾಗಿ ಇಂದಿಗೂ ನೆಲೆಸಿ ನಮ್ಮ ಕುಲದ ದಾರಿ ದೀಪವಾಗಿ ಹರಸುತ್ತಿದ್ದಾಳೆ.
ಅಮೃತ್ತೂರು ಪಾಳೇಗಾರರ ಮನೆತನ ದಲ್ಲಿ ಮೊದಲ ಹೆಂಡತಿಗೆ ಮಕ್ಕಳಿಲ್ಲ ಎಂದು ತಿಳಿದು ಎರಡನೇ ಹೆಂಡತಿಯನ್ನು ಮದುವೆ ಯಾಗುತ್ತಾನೆ. ಕಾಲಾನುಕ್ರಮೇಣ ಪ್ರೀತಿ ಮೋಹಕ್ಕೆ ಬಿದ್ದ ಇನ್ನೊಬ್ಬಳನ್ನು ಕೂಡ ಹೆಂಡತಿಯನ್ನಾಗಿ ಸ್ವೀಕಾರ ಮಾಡುವ ಮೂಲಕ ಮೂವರು ಹೆಂಡತಿಯರಾಗುತ್ತಾರೆ.
ಮೂವರು ಹೆಂಡತಿಯರಿಗೂ ಮಕ್ಕಳ ಭಾಗ್ಯ ಲಭಿಸುತ್ತದೆ. ಹೀಗೆ ಎಲ್ಲರೂ ಒಟ್ಟಿಗೆ ಸಂತೋಷದಿಂದ ಕೂಡು ಕುಟುಂಬದ ಹಾಗೆ ಇದ್ದರೂ ಮಕ್ಕಳು ದೊಡ್ಡವರಾಗುತ್ತಾ
ಹಾಗೇ ಒಬ್ಬರಿಗೊಬ್ಬರ ನಡುವೆ ವೈಷಮ್ಯ ಬೆಳೆದು ಆಸ್ತಿ ವಿಂಗಡಣೆಯ ಮಾತು ತಂದೆಯ ಬಳಿ ಬಂದು ನಿಲ್ಲುತ್ತಾರೆ.
ಈ ಪ್ರಾಂತ್ಯದ ಸುಮಾರು ಐನೂರ ಎಂಬತ್ತು ಎಕರೆ ಜಮೀನಿನ ಪಾಳೇಗಾರನು ಮೊದಲ ಹೆಂಡತಿಯ ಮಕ್ಕಳಿಗೆ ಒಂದು ಭಾಗ ಜಮೀನು ಹಾಗೂ #ಬೆಳ್ಳಿಕರಗದಪಾಲಿನ ಜವಾಬ್ದಾರಿಯನ್ನು ಕೊಟ್ಟರು.
ಎರಡನೇ ಹೆಂಡತಿಯ ಮಕ್ಕಳಿಗೆ ಒಂದು ಭಾಗ ಜಮೀನು ಹಾಗೂ ಕೊಂಡ ಆಯುವ ಉಜ್ಜನಿ ಶ್ರೀ ಚೌಡೇಶ್ವರಿ ದೇವಿಯ ದೇವರ ಪೂಜೆ #ಕನ್ನಡಿಪಾಲು ಅಂತಲೂ ಜವಾಬ್ದಾರಿಯನ್ನು ಕೊಟ್ಟರು.
ಮೂರನೇ ಹೆಂಡತಿಯ ಮಕ್ಕಳಿಗೆ #ಅರಮನೆಹೊನ್ನಮಾಚನಹಳ್ಳಿ ಯಲ್ಲಿ ನೆಲೆಸಲು ಸೂಚಿಸಿ ಅಲ್ಲಿಯ ಜಮೀನು ಹಾಗೂ ಅವರಿಗೆ ಉಜ್ಜನಿ ಶ್ರೀ ಚೌಡೇಶ್ವರಿ ಅಮ್ಮನ ಪಲ್ಲಕ್ಕಿ #ಉತ್ಸವಮೂರ್ತಿ ಯ ಮೆರವಣಿಗೆ ಹಾಗೂ ಶ್ರೀ ಚೌಡೇಶ್ವರಿ ದೇವಸ್ಥಾನದ ಮುಂದೆ ಚಪ್ಪರ ಹಾಕುವ ಪಾಲು ಜವಾಬ್ದಾರಿಯನ್ನು ಅವರಿಗೆ ನೀಡಲಾಯಿತು. ಎಲ್ಲರೂ ಒಗ್ಗಟ್ಟಿನಲ್ಲಿ ಬದುಕಲು ತಿಳಿಸಿದನು.
#ಶ್ರೀಚೌಡೇಶ್ವರಿ ಹಬ್ಬ ಮುಗಿದು ದೇವರಿಳುಕಿದ ಸಮಯದಲ್ಲಿ ಮಾಡಿದ ಒಂದು ಬಹುಮುಖ್ಯ ಸಂಪ್ರದಾಯ ಬಹಳ ಸ್ಪಷ್ಟತೆಯ ವಿಚಾರ ಇಲ್ಲಿ ಕಾಣಿಸುತ್ತದೆ.
ಮೇಲೆ ಕಾಣಿಸಿದ ವಿಷಯದಂತೆ ಒಂದು ರಾತ್ರಿ ಒಂದು ಹಗಲು ರಾಜ್ಯಭಾರವನ್ನು ಅಮೃತ್ತೂರು ಪ್ರಾಂತ್ಯದ ಒಕ್ಕಲಿಗ ಪಾಳೇಗಾರರಲ್ಲಿ ಕೇಳಿದ ಸವಿತಾ ಸಮಾಜದ ವ್ಯಕ್ತಿ ಮೂಲ ಕಥೆಯ ಪ್ರಕಾರವಾಗಿ
ತಂಗಿಯಾದ ಹೊನ್ನಮ್ಮನನ್ನು ಇಂತಹ ಒಕ್ಕಲಿಗ ಜನಾಂಗದವರ ಹೆಣ್ಣುಮಗಳನ್ನು ಕೇಳಿದ್ದು ತಪ್ಪು ಹಾಗೂ ಒಂದು ದಿನದ ರಾಜ್ಯಭಾರವನ್ನು ಕೇಳಿ ನಾನು ಇಂತಹ ಪುಣ್ಯ ವಂಶವನ್ನೇ ಈ ಸ್ಥಳದಿಂದ ಹೊರ ಹೋಗುವ ಹಾಗೆ ಮಾಡಿದ ತಪ್ಪನ್ನು ಅರಿಯುತ್ತಾ, ರಾತ್ರಿ ಪೂರ್ತಿ ನಿದ್ದೆ ಮಾಡದೇ ಮನೆಯ ಹಿಂಭಾಗದ ಗೋಡೆಯ ಕಡೆಯಿಂದ ಕಣ್ಣು ಕಾಣದ ಹಾಗೆ ದೂರ ಹೋಗುವ ಹಾಗೆ ಮಾಡಿ ಪಾಳೇಗಾರರು ತಮ್ಮ ತಮ್ಮ ಕುಟುಂಬದವರ ಜೊತೆಯಲ್ಲಿ ರಾತ್ರೋ ರಾತ್ರಿ ಊರ ಹೊರಗಿನ ಹೊಳೆಯನ್ನು ದಾಟಿ ಎಲ್ಲೋ ಹೋದ ವಿಷಯದಲ್ಲಿ ಮನನೊಂದು, ತಾಳ ತೊಂಬೆಗೆ ನೇತು ಬಿದ್ದು ಪ್ರಾಣ ಕೊಡುವ ಮೂಲಕ ನಮ್ಮ ವಂಶಕ್ಕೆ ನೀಡಿದ ಗೌರವದ ಪ್ರತೀಕವಾಗಿ ಇಂದಿಗೂ ಹಬ್ಬದಲ್ಲಿ ಒಂದು ಎಲೆಯ
ಪ್ರಸಾದವನ್ನು ಸವಿತಾ ಸಮಾಜದ ಇವರ ವಂಶಸ್ಥರಿಗೆ #ಒಕ್ಕಲಿಗ ಪಾಳೇಗಾರ ಸಮುದಾಯದ ಗುಡ್ಡರು ಗೌರವದಿಂದ ಇಂದಿಗೂ ಈ ಸಂಪ್ರದಾಯವನ್ನು ಉಳಿದುಕೊಂಡು ಬರುತ್ತಿದ್ದಾರೆ.
ವರ್ಷಕ್ಕೆ ಒಂದು ಸಲ ದೀಪಾವಳಿಯಂದು ಈ ಕುಲದ ಎರಡೂ ಪಾಲಿನವರು ಶ್ರೀ ಲಕ್ಷ್ಮಿ ಮಾತೆಗೆ #ಬಾಗಿನ ಅರ್ಪಣೆ ಮಾಡುತ್ತಾ ಕರಡಿ ಪಾಲು ಹಾಗೂ ಕರಗದ ಪಾಲಿನರು ಹೊಸ ಸೀರೆ, ಕಳಸವನ್ನು ಮನೆಯ ಕಡೆಯೋ ಕಂಬಕ್ಕೆ (ಮಜ್ಜಿಗೆ ಸಿಲುಬುವ ಕಂಬಕ್ಕೆ ) ಈ ಜಾಗದಲ್ಲಿ ರಂಗೋಲಿ ಇಟ್ಟು, ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ.
ಜೊತೆಗೆ ಮನೆ ದೇವರಿನ ಗುಡಿಯಲ್ಲಿ ನೆಲೆಸಿರುವ ಶ್ರೀ ಹೊನ್ನಮ್ಮ ದೇವಿಗೆ, ಹಾಗೂ #ದೀಪಾವಳಿ ಹಬ್ಬದಲ್ಲಿ ಶ್ರೀ ಲಕ್ಷ್ಮಿ ಮಾತೆಯನ್ನು ಭಕ್ತಿಯಿಂದ ಪೂಜಿಸುವ ಜೊತೆಗೆ ಈ ಎರಡೂ ಪಾಲಿನ ಮನೆಗೆ ಒಬ್ಬರಂತೆ ಇಪ್ಪತ್ತೊಂದು ಜೋಡಿಯಲ್ಲಿ ಹೂವುಗಳು, ಇಪ್ಪತ್ತೊಂದು ಜೋಡಿಯಲ್ಲಿ ಹಸಿಅಡಿಕೆಕಾಯಿಯನ್ನು, ಇಪ್ಪತ್ತೊಂದು ಜೋಡಿ ತುಪ್ಪದ ಕಜ್ಜಾಯ, ಇಪ್ಪತ್ತೊಂದು ಜೋಡಿ ಎಲೆ-ಅಡಿಕೆ, ಮೂರು ಚಿಪ್ಪು ಮುರಿಯದ ಬಾಳೆಹಣ್ಣು, ಇಪ್ಪತ್ತೊಂದು ಜೋಡಿಯಲ್ಲಿ ಶ್ರೇಷ್ಠ ಹತ್ತಿಯ ಹಾರದ ಹೂ, ಎರಡು ತೆಂಗಿನ ಕಾಯಿ, ಪೂಜೆ ಸಾಮಾನು, ಬಿಳಿ ವಸ್ತ್ರದಬಟ್ಟೆ ಯನ್ನು ಮುಚ್ಚಿಕೊಂಡು, ಮಡಿಯಲ್ಲಿ ಎರಡು ಪಾಲಿನ ಒಬ್ಬೊಬ್ಬರು ಹಿರಿಯರು ಸಂಜೆ ಸುಮಾರು ಆರು ಗಂಟೆಗೆ ಸೇರಿ ವಿಶೇಷವಾಗಿ ಪ್ರಿಯವಾದ ಆಲದ ಕುಡಿಯನ್ನಿಟ್ಟು, ಬೆಳ್ಳಿಯ ಒಂದಷ್ಟು ಮೂಲ ಒಡವೆವನ್ನು ಧರಿಸಿ, ಹತ್ತಿ ಹೂವಿನ ಅಲಂಕಾರಿತ ಲಕ್ಷ್ಮಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿ, ಬಡಿಸಿ ಮನೆ ದೇವರ ಗುಡಿಯಲ್ಲಿನ ಜಗನ್ಮಾತೆ ಲಕ್ಷ್ಮಿ, ಹಾಗೂ #ಶ್ರೀಹೊನ್ನಮ್ಮ ದೇವಿಗೆ #ಬಾಗಿನ ಅರ್ಪಿಸಿ ಪೂಜಿಸುತ್ತಾರೆ.
ಈ ಹಬ್ಬ ಮಾಡದ ಒಂದಷ್ಟು ಆಪ್ತರನ್ನು, ನೆಂಟರನ್ನು ಕರೆದು ಕಜ್ಜಾಯದ ಜೊತೆಗೆ ವಿಶೇಷ ಊಟವನ್ನು ಉಣಬಡಿಸಿ ದೀಪಾವಳಿ ಹಬ್ಬವನ್ನಾಗಿ ಆಚರಣೆ ಮಾಡುತ್ತಾರೆ.
ಈ ಹೆಣ್ಣು ದೇವತೆಯಾಗಿ ನೆಲೆಸಿರುವ ಹೆಸರು ಶ್ರೀ ಹೊನ್ನಮ್ಮದೇವಿ ಎಂದು ಒಂದು ಕುಟುಂಬದಲ್ಲಿ ಒಬ್ಬ ಮಗ ಮಾತ್ರ ಅಂದರೆ ಮನೆಯ ಹಿರಿಯ ಮಗ ಅಥವಾ ಮುಖ್ಯವಾದ ಮಗ ಬಾಗಿನ ಕೊಡುವ ಸಂಪ್ರದಾಯವನ್ನು ಆಚರಣೆ ಮಾಡಲಾಗುತ್ತಿದೆ.
ಸುಮಾರು 16 ಕುಟುಂಬ #ಕನ್ನಡಿ ಹಾಗೂ ಸುಮಾರು 12 ಕುಟುಂಬ ಬೆಳ್ಳಿ ಕರಗದ ಚಿಕ್ಕಗೌಡರ ಕುಟುಂಬದವರು ಈ ಸಂಪ್ರದಾಯದಲ್ಲಿರುತ್ತಾರೆ. ಅಂದಿನ ಮಾತಿನ ಆದೇಶದಂತೆ ಕನ್ನಡಿ ಪಾಲಿನವರಿಗೆ ಕೊಡುವ ತೀರ್ಥವನ್ನು #ಕರಗದಪಾಲಿನವರು ಗರ್ಭಗುಡಿಯ ಹೊಸಲಿನ ಆಚೆ ನಿಂತು ತೆಗೆದುಕೊಳ್ಳುತ್ತಾರೆ🙏
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
