fbpx
ಸಮಾಚಾರ

ಇಂಗ್ಲೆಂಡ್ ನ ನೂತನ ರಾಣಿ ಕೊಹಿನೂರ್ ವಜ್ರವನ್ನು ಧರಿಸುವುದು ದೌಟ್! ಯಾಕೆ ಗೊತ್ತಾ?

ಸಪ್ಟೆಂಬರ್ 8 2022 ರಂದು ಬ್ರಿಟನ್‌ನ ದೀರ್ಘಾವಧಿಯ ದೊರೆ, ​​ರಾಣಿ ಎಲಿಜಬೆತ್ II ನಿಧನರಾಗಿದ್ದರು. ಇವರ ನಿಧನದ ನಂತರ ಅತಿ ಹೆಚ್ಚು ಚರ್ಚೆಯಾಗುತ್ತಿದ್ದ ವಿಷಯವೆಂದರೆ ಅದು ಕೊಹಿನೂರ್ ವಜ್ರ. ಈ ವಜ್ರ ಭಾರತಕ್ಕೆ ಸೇರಿದ್ದು, ಹೀಗಾಗಿ ಈ ವಜ್ರವನ್ನು ಭಾರತಕ್ಕೆ ತರಬೇಕೆಂದು ಹಲವಾರು ಭಾರತೀಯರು ಆಗ್ರಹಿಸುತ್ತಿದ್ದರು. ಆದರೆ ಇದೀಗ ಮತ್ತೊಂದು ಸುದ್ದಿ ಎಲ್ಲಾ ಕಡೆ ಹರಿದಾಡುತ್ತಿದೆ. ಅದೇನೆಂದರೆ ಮುಂದಿನ ವರ್ಷ ನಡೆಯಲಿರುವ ನೂತನ ರಾಣಿಯ ಪಟ್ಟಾಭಿಷೇಕದ ಸಮಯದಲ್ಲಿ ಇವರು ಕೊಹಿನೂರ್ ವಜ್ರವನ್ನು ಧರಿಸುವುದಿಲ್ಲವೆಂದು.

ರಾಣಿ ಎಲಿಜಬೆತ್ II ನಿಧನದ ನಂತರ ಈ ವಜ್ರ ರಾಣಿ ಕ್ಯಾಮಿಲ್ಲಾ ಅವರ ಪಾಲಿಗೆ ಸೇರುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಮುಂದಿನ ವರ್ಷ ನಡೆಯಲಿರುವ ಕಿಂಗ್ ಚಾರ್ಲ್ಸ್ III ರ ಪಟ್ಟಾಭಿಷೇಕದ ಸಂದರ್ಭದಲ್ಲಿ ರಾಣಿ ಕಾನ್ಸಾರ್ಟ್ ಕ್ಯಾಮಿಲ್ಲಾ ಈ ಕಿರೀಟವನ್ನು ಧರಿಸುವುದಿಲ್ಲ ಎಂದು ಹೇಳಲಾಗುತ್ತಿದೆ. ಇದಕ್ಕಿರುವ ಮುಖ್ಯ ಕಾರಣವೇನೆಂದರೆ ಈ ವಜ್ರದ ನಿಜವಾದ ಮಾಲೀಕತ್ವ ಯಾವ ರಾಜ್ಯಕ್ಕೆ ಸೇರುತ್ತದೆ ಎಂಬುದರ ಕುರಿತು ನಡೆಯುತ್ತಿರುವ ಚರ್ಚೆ.

ಕೊಹಿನೂರ್ ವಜ್ರ ಭಾರತಕ್ಕೆ ಸೇರಿದ್ದು, ಹೀಗಾಗಿ ಇದನ್ನು ಭಾರತಕ್ಕೆ ಮರುಕಳಿಸಬೇಕು ಮತ್ತು ಭಾರತ ಸರ್ಕಾರ ಇದನ್ನು ತಮ್ಮ ರಾಜ್ಯಕ್ಕೆ ತರಲು ಎಲ್ಲಾ ರೀತಿಯ ತಯಾರಿ ನಡೆಸಬೇಕೆಂದು ಟ್ವಿಟ್ಟರ್ ನಲ್ಲಿ ಭಾರತೀಯರು ಆಗ್ರಹಿಸುತ್ತಿದ್ದರು. ಆದರೆ ಇದೀಗ ಬಂದಿರುವ ಸಮಸ್ಯೆ ಏನೆಂದರೆ ಈ ವಜ್ರವು ಸಂಪೂರ್ಣವಾಗಿ ಭಾರತಕ್ಕೆ ಸೇರಿಲ್ಲ ಬದಲಾಗಿ ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ತಾಲಿಬಾನ್‌ಗಳಿಂದಲೂ ಹಕ್ಕು ಪಡೆದಿದೆ ಎಂದು ದಿ ಹಿಸ್ಟರಿ ಆಫ್ ದಿ ವರ್ಲ್ಡ್ಸ್ ಮೋಸ್ಟ್ ಇನ್ಫೇಮಸ್ ಡೈಮಂಡ್” ಪುಸ್ತಕದ ಸಹ-ಲೇಖಕ ವಿಲಿಯಂ ಡಾಲ್ರಿಂಪಲ್ ಹೇಳಿದ್ದರು. ಇದಲ್ಲದೆ ಭಾರತಕ್ಕಿಂತ ಹೆಚ್ಚಾಗಿ ಅಫ್ಘಾನಿಸ್ತಾನಕ್ಕೆ ಈ ವಜ್ರದ ಮೇಲೆ ಹಕ್ಕಿದೆ ಎಂದು ತಾಲಿಬಾನ್ ಈ ಹಿಂದೆ ಹೇಳಿತ್ತು. ಹೀಗಾಗಿ ಇವೆಲ್ಲ ಚರ್ಚೆಗಳು ನಡೆಯುತ್ತಿರುವ ಕಾರಣ ರಾಣಿ ಕಾನ್ಸಾರ್ಟ್ ಕ್ಯಾಮಿಲ್ಲಾ ಕೊಹಿನೂರ್ ವಜ್ರವನ್ನು ಧರಿಸುವುದು ದೌಟ್ ಎಂದು ಹೇಳಲಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top