ಕನ್ನಡ ಸಿನಿಮಾರಂಗದಲ್ಲಿ ಇದೀಗ ಹೆಚ್ಚು ಸದ್ದು ಮಾಡುತ್ತಿರುವ ನಟರಲ್ಲಿ ಡಾಲಿ ಧನಂಜಯ್ ಕೂಡ ಒಬ್ಬರು. ಟಗರು ಸಿನಿಮಾದ ಮೂಲಕ ಅತಿಹೆಚ್ಚು ಜನಪ್ರಿಯತೆ ಗಳಿಸಿದ್ದ ಇವರು ಇದೀಗ ‘ಹೆಡ್‌ಬುಷ್’ ಸಿನಿಮಾದ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಇವೆಲ್ಲದರ ಮದ್ಯೆ ಡಾಲಿ ಎಸ್ ಎಸ್ ಎಲ್ ಸಿ ಯಲ್ಲಿ ತೆಗೆದ ಅಂಕ ಇದೀಗ ಎಲ್ಲ ಕಡೆ ಸಕತ್ ಸೌಂಡ್ ಮಾಡುತ್ತಿದೆ.
ಧನಂಜಯ ಕೇವಲ ಸಿನಿಮಾದಲ್ಲಿ ಟಾಪ್ಪರ್ ಅಲ್ಲದೆ ಇವರು ಓದಿನಲ್ಲೂ ಸಹ ಟಾಪ್ಪರ್. ತಮ್ಮ ಶಾಲಾದಿನಗಳಿಂದಲೂ ಸಹ ಇವರು ಓದಿನಲ್ಲಿ ಬಹಳಷ್ಟು ಆಸಕ್ತಿಯನ್ನು ಹೊಂದಿದ್ದರು. ಇವರು ಓದಿದ್ದು ಇಂಜಿನಿಯರಿಂಗ್ ಆದರೂ ಇವರಿಗೆ ನಟನೆಯ ಮೇಲೆ ಹೆಚ್ಚು ಆಸಕ್ತಿವಿದ್ದ ಕಾರಣ ಇವರು ಹೆಚ್ಚಾಗಿ ನಟನೆಯಲ್ಲಿ ತೊಡಗಿಸಿಕೊಂಡಿದ್ದರು. ಧನಂಜಯ್ ಅವರು ಓದಿನಲ್ಲಿ ಎಷ್ಟು ಮುಂದಿದ್ದರು ಎಂಬುದಕ್ಕೆ ಸಾಕ್ಷಿ ಇವರು 10 ನೇ ತರಗತಿಯಲ್ಲಿ ತೆಗೆದ ಅಂಕ.
ಹಾಸನ ಜಿಲ್ಲೆಯ ಅರಸಿಕೆರೆಯ ಕಾಳೆನಹಳ್ಳಿ ಗ್ರಾಮದಲ್ಲಿ ಹುಟ್ಟಿ ಬೆಳೆದ ಧನಂಜಯ ಸೇಂಟ್ ಮೇರಿಸ್ ಹೈಸ್ಕೂಲ್‌ನಲ್ಲಿ ತಮ್ಮ ಪ್ರೌಢಶಾಲಾ ವಿದ್ಯಾಭ್ಯಾಸ ಮಾಡಿದರು. ಇವರು ತಮ್ಮ 10 ನೇ ತರಗತಿಯಲ್ಲಿ ಶೇಕಡಾ 95.52 ಅಂಕ ಪಡೆದಿದ್ದರು. 2001 ರಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಇಡೀ ಅರಸೀಕೆರೆಗೆ ಅತಿಹೆಚ್ಚು ಅಂಕ ಪಡೆದವರು ಎಂಬ ಹೆಗ್ಗಳಿಕೆ ಕೂಡ ಇವರಿಗೆ ಸಿಕ್ಕಿತ್ತು. ಇಷ್ಟೇಅಲ್ಲದೆ ಇವರ ಫೋಟೋ ಕೂಡ ಪೇಪರ್‌ನಲ್ಲಿ ಪ್ರಕಟವಾಗಿತ್ತು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
