fbpx
ಸಮಾಚಾರ

ನವೆಂಬರ್ 02: ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ

ನವೆಂಬರ್ 2, 2022 ಬುಧವಾರ
ವರ್ಷ : 1944, ಶೋಭಾಕೃತ
ತಿಂಗಳು : ಕಾರ್ತೀಕaa, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ನವಮೀ : Nov 01 11:04 pm – Nov 02 09:10 pm; ದಶಮೀ : Nov 02 09:10 pm – Nov 03 07:30 pm
ನಕ್ಷತ್ರ : ಧನಿಷ್ಠ: Nov 02 02:53 am – Nov 03 01:43 am; ಶತಭಿಷ: Nov 03 01:43 am – Nov 04 12:48 am
ಯೋಗ : ಗಂಡ: Nov 01 01:15 pm – Nov 02 10:26 am; ವೃದ್ಹಿ: Nov 02 10:26 am – Nov 03 07:49 am
ಕರಣ : ಬಾಲವ: Nov 01 11:04 pm – Nov 02 10:05 am; ಕುಲವ: Nov 02 10:05 am – Nov 02 09:10 pm; ತೈತುಲ: Nov 02 09:10 pm – Nov 03 08:18 am

Time to be Avoided
ರಾಹುಕಾಲ : 12:03 PM to 1:29 PM
ಯಮಗಂಡ : 7:43 AM to 9:10 AM
ದುರ್ಮುಹುರ್ತ : 11:40 AM to 12:26 PM
ವಿಷ : 08:39 AM to 10:11 AM
ಗುಳಿಕ : 10:36 AM to 12:03 PM

Good Time to be Used
ಅಮೃತಕಾಲ : 03:49 PM to 05:20 PM

Other Data
ಸೂರ್ಯೋದಯ : 6:17 AM
ಸುರ್ಯಾಸ್ತಮಯ : 5:49 PM

 

 

 

ನಿಮ್ಮ ಸಮಸ್ಯೆಗಳು ಸಾಕಷ್ಟು ಇರುವಾಗ ಪರರ ಸಂಕಷ್ಟಗಳಿಗೆ ಮರುಗಿ ಸಹಾಯ ಮಾಡಲು ಹೋಗಿ ನೀವೇ ಸಿಕ್ಕಿಹಾಕಿಕೊಳ್ಳುವಿರಿ. ಈ ಬಗ್ಗೆ ಎರಡು ಬಾರಿ ಚಿಂತಿಸಿ ಕಾರ್ಯ ಪ್ರವೃತ್ತರಾಗಿ. ಹಣಕಾಸಿನ ಪರಿಸ್ಥಿತಿ ಸಾಧಾರಣವಾಗಿರುತ್ತದೆ.

ಎಷ್ಟೇ ಬುದ್ಧಿಶಾಲಿಯಾದರೂ ಎಲ್ಲಾ ವಿಷಯಗಳಲ್ಲೂ ಅಥವಾ ಎಲ್ಲಾ ರಂಗದಲ್ಲೂ ನೀವು ಸರ್ವಜ್ಞರಲ್ಲ. ಹಾಗಾಗಿ ಅನ್ಯರ ಅನುಭವ ಮತ್ತು ಹಿತವಚನಗಳನ್ನು ಆಲಿಸಿದಲ್ಲಿ ನಿಮಗೆ ಒಳಿತಾಗುವುದು. ಜನರಲ್ಲಿ ನಿಮ್ಮ ಬಗ್ಗೆ ಗೌರವವಿರುತ್ತದೆ.

ನಿಮ್ಮಲ್ಲಿನ ಆತ್ಮವಿಶ್ವಾಸ ಮತ್ತು ನಿಮ್ಮ ಬಗೆಗಿನ ನಂಬಿಕೆ ಸ್ಥೈರ್ಯ ಧೈರ್ಯಗಳು ನಿಮಗೆ ಅನುಕೂಲವಾಗುವವು. ನೀವು ನಡೆಯುವ ದಾರಿಯಲ್ಲಿ ಯಾವುದೇ ಅಡೆತಡೆಗಳು ಕಂಡುಬರುವುದಿಲ್ಲ. ನಿಮ್ಮ ಸಹಾಯಕ್ಕೆ ನಿಮ್ಮೊಂದಿಗೆ ಸ್ನೇಹಿತರು ಹೆಜ್ಜೆ ಹಾಕುವರು.

ನಿಮ್ಮ ಕುರಿತಾಗಿ ಇಲ್ಲಸಲ್ಲದ ಹಲವಾರು ಅಪಸ್ವರಗಳು ಬಂದರೂ ಆ ಬಗ್ಗೆ ಕಿವಿಗೊಡದೆ ಮಾನಸಿಕವಾಗಿ ಧೈರ್ಯದಿಂದ ಇರಿ. ಇದರಿಂದ ನಿಮಗೆ ಅನುಕೂಲವಾಗುವುದು. ಮನೆಯ ಸದಸ್ಯರು ನಿಮಗೆ ಸಹಕಾರಿಯಾಗಿ ನಿಲ್ಲುವರು.

 

ಕಬ್ಬು ಸಿಹಿ ಇದೆ ಎಂದು ಸಿಪ್ಪೆ ಸಹಿತ ತಿನ್ನಲು ಆಗುವುದಿಲ್ಲ. ಅಂತೆಯೆ ಕೆಲವು ವಿಚಾರಗಳ ಬಗ್ಗೆ ಮೂಲಕ್ಕೆ ಕೈಹಾಕಲು ಮುಂದಾಗದಿರಿ. ಇದರಿಂದ ನೋವಿಗೆ ದಾರಿ ಆಗುವುದು. ಅರಿತು ಆಳಿದರೆ ಆರು ವರ್ಷ ಮರೆತು ಬಾಳಿದರೆ ಮೂರು ವರ್ಷ ಎಂಬುದು ನೆನಪಿರಲಿ.

 

ನಿಮ್ಮ ಬಗೆಗಿನ ಗೌರವ ಆದರಗಳು ಜನರಲ್ಲಿ ಅಪಾರವಾಗಿವೆ. ಅವರು ಅವನ್ನು ಬಹಿರಂಗವಾಗಿಯೂ ಪ್ರಕಟಗೊಳಿಸುವರು. ಇದರಿಂದ ನಿಮಗೆ ಆತ್ಮತೃಪ್ತಿಯೂ ಮತ್ತು ಧನ್ಯತಾಭಾವವೂ ಮೂಡುವುದು.

 

ಹಿರಿಯರ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಳ್ಳಿ. ಅವಸರದ ತೀರ್ಮಾನ ಅಪಹಾಸ್ಯಕ್ಕೆ ಗುರಿ ಆಗುವ ಸಂದರ್ಭ ಇರುತ್ತದೆ. ಕೆಲವರಿಗೆ ವೃತ್ತಿಯಲ್ಲಿ ಬದಲಾವಣೆ ಕಂಡು ಬರುವುದು. ಅಧಿಕ ಖರ್ಚಿನ ದಾರಿ ಎದುರಾಗುವುದು.

 

ಎಷ್ಟೇ ಕೂಗಾಡಿದರೂ ಕೋಪ ಅನರ್ಥಕ್ಕೆ ಕಾರಣವಾಗುವುದೇ ಹೊರತು ಅದರಿಂದ ಯಾವ ಕೆಲಸ ಕಾರ್ಯವೂ ಕೈಗೂಡುವುದಿಲ್ಲ. ಕುಟುಂಬ ಸದಸ್ಯರ ಭಾವನೆಗಳಿಗೂ ಬೆಲೆ ಕೊಡಿ ಮತ್ತು ತಾಳ್ಮೆಯಿಂದ ಇರಿ.

 

ಸುಲಭವಾಗಿ ಪರಿಹಾರವಾಗುವ ವಿಷಯಕ್ಕೆ ಜಗ್ಗಾಡದೆ ಅಥವಾ ಕಾದಾಡದೆ ಸುಮ್ಮನೆ ಮಾತುಕತೆ ನಡೆಸಿ. ಇದರಿಂದ ಒಳಿತಾಗುವುದು. ನಿಮಗೆ ಇತರರಿಗೆ ಸಹಾಯ ಮಾಡಲು ಮನಸ್ಸು ಇಲ್ಲದಿದ್ದರೆ ಸಹಾಯ ಮಾಡುವವರಿಗೆ ದಾರಿ ತಪ್ಪಿಸಬೇಡಿ.

ಈಚಲು ಮರದ ಕೆಳಗೆ ಕುಳಿತು ಮಜ್ಜಿಗೆ ಕುಡಿದರೂ ಹೆಂಡ ಕುಡಿದರು ಎಂದೇ ಮಾತನಾಡುವರು. ಯಾವುದೇ ಕಾರ್ಯ ಮಾಡುವ ಮೊದಲು ಸ್ಥಾನಬಲ ಮುಖ್ಯ. ಯಾವುದೇ ವಿಷಯದಲ್ಲಿ ಸೂಕ್ತ ನಿರ್ಧಾರ ತಳೆಯುವ ಮುನ್ನ ಎರಡು ಬಾರಿ ಚಿಂತಿಸಿ.

 

ಹಿಂದಿನ ದಿನಗಳ ಅನುಭವಗಳ ನೆಲೆಯಲ್ಲಿ ಜಾಗ್ರತೆಯ ಹೆಜ್ಜೆ ಇರಿಸಿ. ಕಿರಿಕಿರಿ ಮಾಡುವವರನ್ನು ನಿಯಂತ್ರಣಕ್ಕೆ ಒಳಪಡಿಸುವುದು ಒಳ್ಳೆಯದು. ದುಂದುವೆಚ್ಚಗಳಿಗೆ ಕಡಿವಾಣ ಹಾಕದೆ ಇದ್ದಲ್ಲಿ ಆರ್ಥಿಕ ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಳ್ಳುವಿರಿ.

ಕೆಲವು ಸಮಸ್ಯೆಗಳು ಎದುರಾಗಲಿವೆಯಾದರೂ ಎದುರಿಸುವ ಶಕ್ತಿಯನ್ನು ತೋರುವಿರಿ. ಜನರೊಡನೆ ಬೆರೆಯುವಾಗ ತಾಳ್ಮೆ ರೂಢಿಸಿಕೊಳ್ಳಿ. ಕೆಲವರು ಅನವಶ್ಯಕ ಪ್ರಶ್ನೆಗಳನ್ನು ಕೇಳಿ ನಿಮಗೆ ಕೋಪ ಬರಿಸುವ ಸಾಧ್ಯತೆ ಇರುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top