ಭಾರತ ಮತ್ತು ಬಾಂಗ್ಲಾದೇಶ್ ತಂಡಗಳ ನಡುವೆ ನಡೆದ ಪಂದ್ಯ ಬಹಳ ರೋಚಕತೆಯಿಂದ ಕೂಡಿತ್ತು. ಕೊನೆಯ ಹಂತದವರೆಗೂ ಸಹ ಉಭಯ ತಂಡದ ಅಭಿಮಾನಿಗಳು ಯಾರು ಗೆಲ್ಲುತ್ತಾರೆ ಎಂದು ಕಾದು ನೋಡುವಂತೆ ಮಾಡಿತ್ತು. ಕೊನೆಯದಾಗಿ ಗೆಲುವು ಭಾರತದ ಪರವಾಗಿತ್ತು. ಇದೆಲ್ಲ ನಡೆದ ಬಳಿಕ ಇದೀಗ ಬಾಂಗ್ಲಾ ಆಟಗಾರರು ವಿರಾಟ್ ಕೊಹ್ಲಿ ವಿರುದ್ಧ ” ಕಳ್ಳಾಟ ” ಎಂಬ ಆರೋಪವನ್ನು ಮಾಡಿದ್ದಾರೆ.
ಭಾರತ ಮತ್ತು ಬಾಂಗ್ಲಾದೇಶ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕಳ್ಳಾಟ ಮಾಡಿದ್ದಾರೆ. ಇದರಿಂದ ನಮಗೆ 5 ರನ್ ಪೆನಾಲ್ಟಿಯಾಗಿ ಬರಬೇಕು. ಹೀಗಾಗಿ ನಾವು ಸೋತೆವು ಎಂದು ಬಾಂಗ್ಲಾದೇಶ ತಂಡದ ಆಟಗಾರ ವಿಕೆಟ್ ಕೀಪರ್ ನೂರುಲ್ ಹಸನ್ ಆರೋಪಿಸಿದ್ದಾರೆ. ಇವರು ಈ ರೀತಿ ಹೇಳಲು ಒಂದು ಕಾರಣವಿದೆ. ಅದೇನೆಂದರೆ ಆಟಗಾರರು ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ತಮ್ಮ ಕೈಯಲ್ಲಿ ಬಾಲ್ ಇಲ್ಲವಾದರೆ ಅದನ್ನು ಎಸೆಯುವ ನಾಟಕವನ್ನು ಮಾಡಬಾರದು. ಈ ರೀತಿ ಮಾಡುವುದರಿಂದ ಮತ್ತೊಂದು ತಂಡದ ಆಟಗಾರರಿಗೆ ತೊಂದರೆಯಾಗುತ್ತದೆ. ಅದಕ್ಕೆ ಪೆನಾಲ್ಟಿಯಾಗಿ ಐದು ರನ್ ನೀಡಲಾಗುತ್ತದೆ. ಐಸಿಸಿ ನಿಯಮಾವಳಿಯ 41.5 ಪ್ರಕಾರ ಇದು ಅನ್ವಯವಾಗುತ್ತದೆ.
#FakeFielding or not ???#Askthepavilion #PakVSa #NoBall pic.twitter.com/1Z25J8WVDV
— Muhammad Shehroz 🇵🇰 (@Iam_Shehroz) November 2, 2022
ಆದರೆ ವಿರಾಟ್ ಕೊಹ್ಲಿ ಅವರ ವಿಷ್ಯದಲ್ಲಿ ಈ ರೀತಿಯಾಗಿರಲಿಲ್ಲ. ವಿರಾಟ್ ಬಾಲ್ ಎಸೆಯುವ ನಾಟಕವನ್ನು ಆಡಿದ್ದರು. ಆದರೆ ಸ್ಟ್ರೈಕರ್ ಮತ್ತು ನಾನ್ ಸ್ಟ್ರೈಕರ್ ನಲ್ಲಿದ್ದ ಆಟಗಾರರು ಇದನ್ನು ಗಮನಿಸಿರಲಿಲ್ಲ. ಹೀಗಾಗಿ ಇದು ಯಾವುದೇ ರೀತಿಯಲ್ಲೂ ಅಪರಾಧವಾಗುವುದಿಲ್ಲ. ಹೀಗಾಗಿ ಅಂಪೈರ್ ಇದನ್ನು ಪರಿಗಣಿಸಲಿಲ್ಲ ಮತ್ತು ಬಾಂಗ್ಲಾದೇಶ್ ತಂಡಕ್ಕೆ ಹೆಚ್ಚುವರಿ 5 ರನ್ ಪೆನಾಲ್ಟಿಯಾಗಿ ನೀಡಿರಲಿಲ್ಲ. ಆದರೂ ಸಹ ಬಾಂಗ್ಲಾದೇಶ ತಂಡದ ಆಟಗಾರರು ಮಾತ್ರ ನಮಗೆ ಹೆಚ್ಚುವರಿ 5 ಪೆನಾಲ್ಟಿ ರನ್ ನೀಡಿಲ್ಲ ಆದ್ದರಿಂದ ನಾವು ಸೊತ್ವಿ ಎಂದು ಹೇಳುತ್ತಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
