fbpx
ಸಮಾಚಾರ

ಈ ಮೂವರಲ್ಲಿ ಒಬ್ಬರು ಬಿಗ್ ಬಾಸ್ ಪಟ್ಟವನ್ನು ಅಲಂಕರಿಸುತ್ತಾರೆ! ಸೀಕ್ರೆಟ್‌ ಬಿಚ್ಚಿಟ್ಟ ಮಯೂರಿ

ಬಿಗ್ ಬಾಸ್ ಕಾರ್ಯಕ್ರಮ ದಿನದಿಂದ ದಿನಕ್ಕೆ ಬಹಳಷ್ಟು ಕ್ರೇಜ್ ಹುಟ್ಟಿಸುತ್ತಿದೆ. ಮನೆಯಲ್ಲಿ ಜಗಳ ಮನೋರಂಜನೆ ಎಲ್ಲವು ಇದೆ. ಪ್ರತಿವಾರ ಬಿಗ್ ಬಾಸ್ ಮನೆಯಿಂದ ಒಬ್ಬ ಸದಸ್ಯ ಎಲಿಮಿನೇಟ್ ಆಗುತ್ತಾರೆ. ಕಳೆದ ಒಂದು ವಾರದ ಹಿಂದೆ ಕಿಚ್ಚನ ಅನುಪಸ್ಥಿತಿಯಲ್ಲಿ ನಡೆದ ಎಲಿಮಿನೇಷನ್ ನಲ್ಲಿ ಮಯೂರಿ ಮನೆಯಿಂದ ಹೊರನಡೆದಿದ್ದರು. ಇದಾದ ಬಳಿಕ ಮಾಧ್ಯಮದ ಮುಂದೆ ಮಾತನಾಡಿದ ಅವರು ಈ ಸಲ ಬಿಗ್ ಬಾಸ್ ಯಾರು ಗೆಲ್ಲುತ್ತಾರೆ ಎಂದು ತಿಳಿಸಿದ್ದಾರೆ.

ಸಿನಿಮಾರಂಗದಲ್ಲಿ ಮತ್ತು ಕಿರುತೆರೆಯಲ್ಲಿ ತಮ್ಮ ನಟನೆಯ ಮೂಲಕ ಅಪಾರವಾದ ಅಭಿಮಾನಿ ಬಳಗವನ್ನು ಸಂಪಾದಿಸಿದ್ದರು. ಆದರೆ ಬಿಗ್ ಬಾಸ್ ಮನೆಯಲ್ಲಿ ಇವರ ಪಯಣ ಅತಿ ಹೆಚ್ಚು ದಿನಗಳ ಕಾಲ ನಡೆಯಲಿಲ್ಲ. ಕೇವಲ 4 ವಾರಗಳಲ್ಲಿ ಇವರು ಬಿಗ್ ಬಾಸ್ ಮನೆಯಿಂದ ಹೊರನಡೆದರು. ಇದೀಗ ಬಿಗ್ ಬಾಸ್ ಕಿರೀಟ ಯಾರ ತಲೆಗೆ ಸೇರುತ್ತದೆ ಎಂದು ಮಯೂರಿ ತಿಳಿಸಿದ್ದಾರೆ.

ಬಿಗ್ ಬಾಸ್ ಅನ್ನು ಯಾರು ಗೆಲ್ಲಬೇಕು ಮತ್ತು ಗೆಲ್ಲುತ್ತಾರೆ ಎಂದು ಹೇಳೋದು ಕಷ್ಟ. ಏಕೆಂದರೆ ಒಬ್ಬರಿಗಿಂತ ಒಬ್ಬರು ಪ್ರವೀಣರು. ಆ ಮನೆಯಲ್ಲಿ ಪ್ರತಿಯೊಬ್ಬರು ಗೆಲ್ಲುವಂತಹ ಅರ್ಹತೆ ಇರುವವರೇ ಇರೋದು. ಅದರಲ್ಲೂ ಈ ಬಾರಿ ಪ್ರವೀಣರು ಮತ್ತು ನವೀನರ ಪೈಪೋಟಿ ಜೋರಾಗಿ ಇರೋದರಿಂದ ಯಾರು ಗೆಲ್ಲುತ್ತಾರೆ ಅಂತಾ ಊಹೆ ಮಾಡೋದು ಅಸಾಧ್ಯ. ಹೀಗಿರುವಾಗ ಟಾಪ್ 3ರಲ್ಲಿ ರಾಕೇಶ್ ಅಡಿಗ, ಆರ್ಯವರ್ಧನ್ ಗುರೂಜಿ, ರೂಪೇಶ್ ಶೆಟ್ಟಿ ಇದ್ದೇ ಇರುತ್ತಾರೆ. ಇವರು ಚೆನ್ನಾಗಿ ಆಡುತ್ತಾ ಮನರಂಜನೆ ಕೊಡುತ್ತಿದ್ದಾರೆ. ಹೀಗಾಗಿ ಈ ಮೂವರಲ್ಲಿ ಒಬ್ಬರು ಬಿಗ್ ಬಾಸ್ ಪಟ್ಟವನ್ನು ಅಲಂಕರಿಸುತ್ತಾರೆ ಎಂದು ಮಯೂರಿ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top