ಕಾಂತಾರ ಸಿನಿಮಾ ಪ್ರಪಂಚಾದ್ಯಂತ ಸಕತ್ ಸೌಂಡ್ ಮಾಡುತ್ತಿದೆ. ಜನಸಾಮಾನ್ಯರಿಂದ ಹಿಡಿದು ಸಿನಿಮಾರಂಗದ ಗಣ್ಯರು, ರಾಜಕಾರಣಿಗಳು ಸಹ ಈ ಸಿನಿಮಾವನ್ನು ನೋಡಿ ಮೆಚ್ಚುಗೆಯ ಮಾತುಗಳನ್ನು ಸಹ ಆಡಿದ್ದಾರೆ. ಇತ್ತೀಚಿಗೆ MR.360 ಎಂದೇ ಪ್ರಖ್ಯಾತರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಆರ್ ಸಿ ಬಿ ತಂಡದ ಆಪತ್ಭಾಂಧವ ಎಬಿ ಡಿವಿಲಿಯರ್ಸ್‌ರಿಷಬ್ ಶೆಟ್ಟಿ ಜೊತೆ ಕಾಣಿಸಿಕೊಂಡಿದ್ದಾರೆ.
ಈ ಕುರಿತು ಹೊಂಬಾಳೆ ಫಿಲಂ ಸಂಸ್ಥೆ ಟ್ವೀಟ್ ಮಾಡಿದ್ದು ” ಸಿನಿಮಾದ 360 ಡಿಗ್ರಿ ಹಾಗೂ ಕ್ರಿಕೆಟ್‌ನ 360 ಡಿಗ್ರಿ ಮುಖಾಮುಖಿಯಾಗಿದ್ದಾರೆ ” ಎಂದು ತಿಳಿಸಿದ್ದಾರೆ. ಇದಲ್ಲದೆ ಇವರಿಬ್ಬರು ಕಾಂತಾರ ಸಿನಿಮಾದ ʻಬಿಡಿಯಾ…ʼ ಎಂಬ ಪದವನ್ನು ಸಹ ಹೇಳಿದ್ದಾರೆ. ಇದಾದ ನಂತರ ವಿಡಿಯೋ ದಲ್ಲಿ ರಿಷಬ್ ಶೆಟ್ಟಿ ಕೋಣವನ್ನು ಓದಿಸುತ್ತಿದ್ದಾರೆ, ಇತ್ತ ಮತ್ತೊಂದು ಕಡೆ ಎಬಿಡಿ ತಮ್ಮ ಬ್ಯಾಟನ್ನು ಬಿಸುತ್ತಿರುತ್ತಾರೆ. ಇದಾದ ನಂತರ ಇವರಿಬ್ಬರು ಒಟ್ಟಿಗೆ “ಕಾಂತಾರ” ಎಂದು ಹೇಳುತ್ತಾರೆ. ಇದೀಗ ಈ ಟ್ವೀಟ್ ಎಲ್ಲಾ ಕಡೆ ಸಕತ್ ವೈರಲ್ ಆಗುತ್ತಿದೆ.
It’s a match.
The real 360s today of the film industry and Cricket.#Kantara @shetty_rishab @ABdeVilliers17 @RCBTweets @hombalefilms @VKiragandur @gowda_sapthami @HombaleGroup @ChaluveG @Karthik1423 @AJANEESHB @actorkishore @KantaraFilm pic.twitter.com/MKeWi8tF9Q— Hombale Films (@hombalefilms) November 3, 2022
ಈ ಕುರಿತು ರಿಷಬ್ ಶೆಟ್ಟಿ ಕೂಡ ಟ್ವೀಟ್ ಮಾಡಿದ್ದು, ಇದು ಪಂದ್ಯ, ನಿಜವಾದ 360ಯನ್ನು ಭೇಟಿಯಾದೆ. ಸೂಪರ್ ಹೀರೋ ಮತ್ತೆ ತಮ್ಮ ಮೂಲಸ್ಥಾನಕ್ಕೆ ಮರಳಿದ್ದಾರೆ. ನಮ್ಮ ಬೆಂಗಳೂರು ಎಂದು ಬರೆದುಕೊಂಡಿದ್ದಾರೆ. ಕಾಂತಾರ ಸಿನಿಮಾ ಬಾಕ್ಸ್ ಆಫೀಸ್ ಅನ್ನು ಧೂಳಿಪಟ ಮಾಡುತ್ತಿದ್ದು ಇದೀಗ ಈ ಸಿನಿಮಾ 300 ಕೋಟಿಗಿಂತಲೂ ಅಧಿಕ ಹಣ ಗಳಿಸಿದೆ ಎಂದು ಹೇಳಲಾಗುತ್ತಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
