fbpx
ಸಮಾಚಾರ

ತನ್ನ ಮಗನ ವರ್ಷದ ಶಾಲೆಯ ಫೀಸ್ ಕುರಿತು ಬೇಸರ ಹೊರಹಾಕಿದ ಡಿಬಾಸ್!

ಡಿಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಪಾರವಾದ ಅಭಿಮಾನಿಬಳಗವನ್ನು ಹೊಂದಿದ್ದಾರೆ. ಇವರ ಸಿನಿಮಾ ಬಂತು ಎಂದರೆ ಸಾಕು ಇವರ ಕ್ರೇಜ್ ಎಷ್ಟರಮಟ್ಟಿಗೆ ಇದೆ ಎಂದು ಎಲ್ಲರಿಗು ಗೊತ್ತು. ಹೀಗಾಗಿ ದರ್ಶನ್ ತಮ್ಮ ಅಭಿಮಾನಿಗಳು ಕಾಯುತ್ತಿದ್ದ ಕ್ರಾಂತಿ ಸಿನಿಮಾ ಬಿಡುಗಡೆಯ ದಿನಾಂಕವನ್ನು ಸಹ ಘೋಷಿಸಿದ್ದರು. ಈ ವೇಳೆ ಅವರು ತಮ್ಮ ಮಗನ ಶಾಲೆಯ ವರ್ಷದ ಫೀಸ್ ಕುರಿತು ಮಾತನಾಡುತ್ತಾ ಬೇಸರವನ್ನು ಹೊರಹಾಕಿದ್ದರು.

ದರ್ಶನ್ ಅವರ ಯಾವುದೇ ಸಿನಿಮಾಕ್ಕೆ ಮೀಡಿಯಾ ಅವರು ಸಪೋರ್ಟ್ ಮಾಡುವುದಿಲ್ಲ ಎಂದು ಹೇಳಿದ ಮತ್ತು ನಮಗೆಲ್ಲ ಗೊತ್ತು. ಹೀಗಾಗಿ ನಮಗೆ ಯಾವ ಮೀಡಿಯಾ ಸಪೋರ್ಟ್ ಬೇಡ ನಮ್ಮ ಬಾಸ್ ಸಿನಿಮಾವನ್ನು ನಾವೇ ಪ್ರಮೋಟ್ ಮಾಡುತ್ತೇವೆ ಎಂದು ಅಭಿಮಾನಿಗಳು ಸಿನಿಮಾ ಬಿಡುಗಡೆಯಾಗುವುದಕ್ಕಿಂತ ಮುಂಚೆಯೇ ಸಿನಿಮಾವನ್ನು ಬಹಳಷ್ಟು ಪ್ರಮೋಟ್ ಮಾಡಿದ್ದಾರೆ. ಇದೀಗ ಅಧಿಕೃತವಾಗಿ ಸಿನಿಮಾ ಬಿಡುಗಡೆ ದಿನಾಂಕವನ್ನು ತಿಳಿಸಲು ಕ್ರಾಂತಿ ಸಿನಿಮಾ ತಂಡ ಯೂ ಟ್ಯೂಬರ್ಸ್ ಹಾಗೂ ಟ್ರೋಲ್ ಪೇಜ್‍ಗಳನ್ನು ಕರೆಸಿ ಕಾರ್ಯಕ್ರಮ ಮಾಡುವುದರ ಮೂಲಕ ಬಹಿರಂಗಪಡಿಸಿದ್ದರು. ಈ ವೇಳೆ ಮಾತನಾಡುತ್ತಾ ದರ್ಶನ್ ತಮ್ಮ ಮಗನ ವರ್ಷದ ಫೀಸ್ ಕುರಿತು ಬೇಸರ ಹೊರಹಾಕಿದ್ದರು.

ಕ್ರಾಂತಿ ಸಿನಿಮಾ ಸರ್ಕಾರಿ ಶಾಲೆಯನ್ನು ಉಳಿಸುವುದರ ಬಗ್ಗೆ ಎಂದು ದರ್ಶನ್ ಈ ಮೊದಲೇ ತಿಳಿಸಿದ್ದರು. ಹೀಗಾಗಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಂದ ಏನೆಲ್ಲಾ ತೊಂದರೆಗಳಾಗುತ್ತಿದೆ ಎಂದು ಈ ಸಿನಿಮಾ ತಿಳಿಸುತ್ತದೆ ಎಂದು ಅವರು ಹೇಳಿದರು. ಹೀಗೆ ಮಾತನಾಡುತ್ತಾ ನಾನು ಓದುವಾಗ ಶಾಲೆಯ ಶುಲ್ಕ ತಿಂಗಳಿಗೆ ನಲವತ್ತರಿಂದ ಐವತ್ತು ರೂಪಾಯಿಗಳಿತ್ತು, ಹತ್ತನೇ ತರಗತಿಯಲ್ಲಿ ಸುಮಾರು ಅರುವತ್ತು ರೂಪಾಯಿಗಳಿತ್ತು. ಆದರೆ ಈಗ ಅದ್ಯಾವುದೋ ಶಾಲೆಯಲ್ಲಿ ವರ್ಷಕ್ಕೆ 24 ಲಕ್ಷ ಶುಲ್ಕವಂತೆ. ನನ್ನ ಮಗ ಓದುವ ಶಾಲೆಯಲ್ಲಿಯೂ ವರ್ಷಕ್ಕೆ ಎಂಟರಿಂದ ಒಂಬತ್ತು ಲಕ್ಷ ಶುಲ್ಕ’ ಎಂದು ತಿಳಿಸಿದರು.

ದರ್ಶನ್ ತಮ್ಮ ವಿದ್ಯಾಭ್ಯಾಸವನ್ನು ಸರ್ಕಾರಿ ಶಾಲೆ ಮತ್ತು ಕಾಲೇಜಿನಲ್ಲಿ ಓದಿದ್ದರು. ಆದರೆ ಇದೀಗ ತಮ್ಮ ಮಗನ ಖಾಸಗಿ ಶಾಲೆಯ ಫೀಸ್ ಕುರಿತು ಬೇಸರವನ್ನು ಹೊರಹಾಕುತ್ತಾ ಖಾಸಗಿ ಶಾಲೆಯಲ್ಲಿ ಇಷ್ಟು ಪ್ರಮಾಣದ ಶುಲ್ಕ ಏನಿಕೆ ಎಂಬುದು ಅವರ ಪ್ರಶ್ನೆ. ಹೀಗಾಗಿ ಕ್ರಾಂತಿ ಸಿನಿಮಾ ಕೂಡ ಇದೆ ಆಯಾಮದಲ್ಲಿ ಸಾಗುತ್ತದೆ ಎಂಬುದು ಖಚಿತವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top