fbpx
ಸಮಾಚಾರ

ʻಇಂಡಿಯನ್‌ 2ʼ ಚಿತ್ರದಲ್ಲಿ ಕಮಲ್‌ ಹಾಸನ್‌ ಜೊತೆ ವರ್ಲ್ಡ್ ಕಪ್ ಹೀರೊ ತಂದೆ ನಟನೆ

ಭಾರತಕ್ಕೆ ಎರಡು ವರ್ಲ್ಡ್ ಕಪ್ ತಂದುಕೊಟ್ಟ ಶ್ರೇಷ್ಠ ಆಟಗಾರ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಅವರು ಮಾಜಿ ಕ್ರಿಕೆಟಿಗರೂ ಆಗಿದ್ದು, 1983 ರಲ್ಲಿ ಚಿತ್ರರಂಗದಲ್ಲಿ ನಟನೆಗೆ ಪಾದಾರ್ಪಣೆ ಮಾಡಿದರು. ಅವರು ಸುಮಾರು 90 ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ಸೂಪರ್‌ಸ್ಟಾರ್ ರಜನಿಕಾಂತ್ ಎದುರು ‘ದರ್ಬಾರ್’ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ನಟ ಈಗ ಕಮಲ್ ಹಾಸನ್ ಅವರ ಮುಂದಿನ ತಮಿಳು ಚಿತ್ರ ‘ಇಂಡಿಯನ್ 2’ ಗೆ ಸಹಿ ಹಾಕಿದ್ದಾರೆ.

ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಅವರು ಶೂಟಿಂಗ್‌ಗೆ ಸಜ್ಜಾಗುತ್ತಿರುವಾಗ ಮೇಕಪ್ ರೂಮ್‌ನಿಂದ ತಮ್ಮ ಸ್ನ್ಯಾಪ್ ಅನ್ನು ಹಂಚಿಕೊಂಡಿದ್ದಾರೆ. ‘ಕ್ಯಾಮೆರಾ ಹಿಂದೆ ಕೆಲಸ ಮಾಡುವ ಎಲ್ಲ ದೊಡ್ಡ ಹೀರೋಗಳಿಗೆ ನನ್ನ ಕಡೆಯಿಂದ ಗೌರವ. ನನ್ನನ್ನು ಹೆಚ್ಚು ಸ್ಮಾರ್ಟ್​ ಆಗಿ ಕಾಣುವಂತೆ ಮಾಡಿದ ಮೇಕಪ್​ ಕಲಾವಿದರಿಗೆ ಧನ್ಯವಾದಗಳು. ‘ಇಂಡಿಯನ್​ 2’ ಚಿತ್ರದಲ್ಲಿ ಲೆಜೆಂಡರಿ ನಟ ಕಮಲ್​ ಹಾಸನ್​ ಜೊತೆ ನಟಿಸಲು ಪಂಜಾಬ್ ಸಿಂಹ ರೆಡಿ’ ಎಂದು ಯೋಗರಾಜ್​ ಸಿಂಗ್​ ಅವರು ಈ ಫೋಟೋಗೆ ಕ್ಯಾಪ್ಷನ್​ ನೀಡಿದ್ದಾರೆ.

 

 

`ಇಂಡಿಯನ್ 2′ ಸಿನಿಮಾ ಶುರುವಾಗಿ ಹಲವು ವರ್ಷಗಳೇ ಆಗಿದೆ. ಆದರೆ ಕೆಲವು ಕಾರಣಗಳಿಂದ ಈ ಚಿತ್ರ ಸ್ಥಗಿತಗೊಂಡಿತ್ತು. ಇದೀಗ ಕಮಲ್ ಹಾಸನ್ ನಟನೆಯ `ವಿಕ್ರಮ್’ ಚಿತ್ರದ ಸಕ್ಸಸ್ ನಂತರ ಈ ಚಿತ್ರ ಮತ್ತೆ `ಇಂಡಿಯನ್ 2′ ಪ್ರಾಜೆಕ್ಟ್ ಶುರುವಾಗಿದೆ. ಮಾಜಿ ಕ್ರಿಕೆಟರ್ ಯೋಗರಾಜ್ ಸಿಂಗ್ ಈ ಚಿತ್ರದಲ್ಲಿ ಪವರ್‌ಫಯಲ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top