fbpx
ಸಮಾಚಾರ

ಕಾರ್ತಿಕ ಮಾಸದಲ್ಲಿ ಬೆಂಗಳೂರಿನ ಕಡಲೆಕಾಯಿ ಪರಿಷೆ ಆಚರಣೆಯ ಹಿನ್ನೆಲೆ ಏನು?ಈ ಆಚರಣೆ ಬಂದಿದಾದ್ರು ಹೇಗೆ ಗೊತ್ತಾ?

ಕಾರ್ತಿಕ ಮಾಸದಲ್ಲಿ ಬೆಂಗಳೂರಿನ ದೊಡ್ಡ ಬಸವನಗುಡಿಯ ಬಸವನಿಗೆ ಕಡಲೆಕಾಯಿ ಪರಿಷೆಯನ್ನು ವಿಜೃಂಭಣೆಯಿಂದ ಏರ್ಪಡಿಸಲಾಗುತ್ತದೆ.ಇದರ ಹಿನ್ನೆಲೆ ಏನು ಗೊತ್ತಾ ? ಈ ಕಡಲೇಕಾಯಿಯ ಪರಿಷೆ ಆಚರಣೆಗೆ ಬಂದಿದ್ದಾದರು ಹೇಗೆ ?
ಬಡವರ ಬಾದಾಮಿ ಎಂದೇ ಕರೆಸಿಕೊಳ್ಳುವ ಕಡಲೆಕಾಯಿ ಪರಿಷೆ ಬೆಂಗಳೂರಿನ ಬಸವನಗುಡಿಯಲ್ಲಿ, ಅದು ವಿಶೇಷವಾಗಿ ಕಾರ್ತಿಕ ಮಾಸದಲ್ಲಿ ಬಹಳ ವಿಜೃಂಭಣೆಯಿಂದ ನಡೆಯುತ್ತದೆ .ಕಾರ್ತಿಕ ಮಾಸದ ಕೊನೆಯ ಸೋಮವಾರ ಅಂದರೆ november 20 ನೇ ತಾರೀಖಿನಂದು ಬೆಂಗಳೂರಿನ ಬಸವನಗುಡಿಯ ದೊಡ್ಡ ಬಸವನಿಗೆ ಕಡಲೆಕಾಯಿ ಪರಿಷೆ ನಡೆಯುತ್ತದೆ. ಬಸವಣ್ಣನಿಗೆ ಕಡಲೆಕಾಯಿಯ ಅಭಿಷೇಕ ಮಾಡಲಾಗುತ್ತದೆ. ಬೆಂಗಳೂರಿನ ಸುತ್ತ ಮುತ್ತಲ ಪ್ರದೇಶಗಳಲ್ಲಿ ಬೆಳೆದಿರುವ ಕಡಲೆ ಕಾಯಿಯನ್ನು ಬೆಳೆದ ರೈತರು ಪರಿಷೆಗೆ ಬಂದು ಕಡಲೆಕಾಯಿಯ ವ್ಯಾಪಾರ ಮಾಡುತ್ತಾರೆ.
ಇದರ ಹಿಂದೆ ಐತಿಹಾಸಿಕ ಕತೆಯೂ ಕೂಡ ಇದೆ .

 

 

 

ಪುರಾಣ ಕಾಲದಲ್ಲಿ ಈ ಪ್ರದೇಶ ರೈತರ ಮುಖ್ಯ ಕೃಷಿ ಆಧಾರಿತ ಪ್ರದೇಶವಾಗಿತ್ತು. ಇಲ್ಲಿ ಹೆಚ್ಚಾಗಿ ಕಡಲೆಕಾಯಿಯನ್ನು ಮುಖ್ಯ ಬೆಳೆಯಾಗಿ ಬೆಳೆಯುತ್ತಿದ್ದರು. ಪ್ರತಿ ವರ್ಷ ಹೀಗೆಯೇ ಉತ್ತಮ ಫಲವನ್ನು ರೈತರು ಪಡೆಯುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ರಾತ್ರಿಯ ವೇಳೆ ಎಲ್ಲಿಂದಲೋ ಬಂದ ಹಸುವೊಂದು ಕಡಲೇಕಾಯಿ ಎಲ್ಲವನ್ನು ತಿಂದು ಬಿಡುತ್ತಿತ್ತು. ಪದೇ ಪದೇ ಇದೇ ರೀತಿ ನಡೆಯುತ್ತಿದ್ದಾಗ ಒಂದು ದಿನ ರೈತರು ರಾತ್ರಿಯ ಸಮಯದಲ್ಲಿ ಅದನ್ನು ನೋಡಲು ಕಾದು ಕುಳಿತರು. ಆಗ ಬೃಹತ್ ಗಾತ್ರದ ಬಸವ ಅವರ ಕಣ್ಣಿಗೆ ಕಾಣಿಸಿತು. ಅದನ್ನು ನೋಡಿದ ಜನರು ಇದು ಸಾಮಾನ್ಯವಾದ ಹಸುವಲ್ಲ ಬೃಹತ್ ಗಾತ್ರದ ಹಸು. ಇದು ಸಾಕ್ಷಾತ್ ನಂದಿಯೇ ಇರಬಹುದೆಂದು ಭಾವಿಸಿದರು.
ಭಕ್ತಿ, ಭಾವದಿಂದ ಎಲ್ಲಾ ರೈತರು ನಂದಿಯನ್ನು ಈ ರೀತಿಯಾಗಿ ಬೇಡಿಕೊಂಡರು. ದಯವಿಟ್ಟು ನಮ್ಮ ಬೆಳೆಯನ್ನೆಲ್ಲ ತಿಂದು ಹಾಳು ಮಾಡಬೇಡ. ನಿನಗೆ ಇದೇ ಜಾಗದಲ್ಲಿ ನಿನಗೊಂದು ದೇವಾಲಯವನ್ನು ನಿರ್ಮಿಸಿ ನಿನಗೆ ಭಕ್ತಿ, ಶ್ರದ್ಧೆಯಿಂದ ಪೂಜೆ ಮಾಡುತ್ತೇವೆ ಎಂದು ಕೇಳಿಕೊಂಡರು.ಹಾಗೆ ಪ್ರತಿ ವರ್ಷ ಕಾರ್ತಿಕ ಮಾಸದ ಕೊನೆಯ ಸೋಮವಾರದ ದಿನ ನಿನಗೆ ಬೆಳೆದ ಕಡಲೆ ಕಾಯಿಯನ್ನು ತೆಗೆದುಕೊಂಡು ಬಂದು ಇಲ್ಲಿ ನಿನಗೆ ಕಡಲೇ ಕಾಯಿಯ ಅಭಿಷೇಕ ಮಾಡಿ ಕಡಲೇಕಾಯಿಯ ಪರಿಷೆಯನ್ನು ನಡೆಸುತ್ತೇವೆ. ಆದ್ದರಿಂದ ನಮ್ಮ ಬೆಳೆಯನ್ನು ಉಳಿಸಿಕೊಡು , ಸಮೃದ್ಧವಾಗಿ ಬೆಳೆಯುವಂತೆ ಮಾಡು ಎಂದು ಕೇಳಿಕೊಂಡರು. ಹೀಗೆ ರೈತರ ಮನವಿಯನ್ನು ಸ್ವೀಕರಿಸಿ ಅವರ ಇಚ್ಛೆಯಂತೆ ಬಸವ ಹಾಗೆ ಆಗಲಿ ಎಂದು ಅದೃಶ್ಯವಾಯಿತು.ಪುರಾಣ ಕಾಲದಲ್ಲಿ ಇಲ್ಲಿ ದೊಡ್ಡ ಬಸವನ ದೇವಾಲಯವನ್ನು ನಿರ್ಮಾಣ ಮಾಡಿ ಅಂದಿನಿಂದ ಇಂದಿನವರೆಗೂ ಕಡಲೆಕಾಯಿಯ ಪರಿಷೆ ಕೊನೆಯ ಕಾರ್ತಿಕ ಸೋಮವಾರದ ದಿನ ನಡೆಯುತ್ತಲೇ ಬಂದಿದೆ.

ಇಲ್ಲಿ ಹಸಿ ಕಡಲೆಕಾಯಿ,ಒಣಗಿದ ಕಡಲೆಕಾಯಿ ಮತ್ತು ಹುರಿದ ಕಡಲೆಕಾಯಿ, ಬೇಯಿಸಿದ ಕಡಲೆಕಾಯಿ ಮತ್ತು ಕಡಲೆಕಾಯಿ ಬೀಜಗಳು ಈ ರೀತಿ ವಿವಿಧ ರೀತಿಯಲ್ಲಿ, ರುಚಿಗಳಲ್ಲಿ ಲಭ್ಯವಿರುತ್ತವೆ. ಬೆಲೆಯು ಸಹ ಬೇರೆ ಕಡೆಗೆ ಹೋಲಿಸಿದರೆ ತುಸು ಹೆಚ್ಚಾಗಿಯೇ ಇರುತ್ತದೆ. ವಿವಿಧ ಬಗೆಯ ರಾಶಿ ರಾಶಿ ಕಡಲೆಕಾಯಿ ಗಳನ್ನು ಈ ಪರಿಷೆಯಲ್ಲಿ ನೋಡುವುದೇ ಒಂದು ಸಂತಸ, ಕಣ್ಣಿಗೆ ಆನಂದವನ್ನು ನೀಡುತ್ತದೆ.
ಬೆಂಗಳೂರಿನಂತಹ ಹೈಟೆಕ್ ಸಿಟಿಯಲ್ಲಿ ಈ ಕಡಲೆಕಾಯಿ ಪರಿಷೆಯನ್ನು ನೋಡುವುದು ನಿಜಕ್ಕೂ ಕಣ್ಣಿಗೆ ಹಬ್ಬ ಎನಿಸುತ್ತದೆ. ಬೋಲೇನಾಥನ ಸಂಪೂರ್ಣ ಆಶೀರ್ವಾದವಿರುವ ಕಾರ್ತಿಕ ಮಾಸದಲ್ಲಿ ವ್ಯಾಪಾರ ವಹಿವಾಟುಗಳು ಚೆನ್ನಾಗಿ ಆಗುತ್ತವೆ. ಅಷ್ಟೇ ಅಲ್ಲ ಈ ಮಾಸದಲ್ಲಿ ಆಸ್ತಿ ವ್ಯವಹಾರಕ್ಕೆ ಸಂಬಂಧಿಸಿದ ಯಾವುದೇ ಕೆಲಸ ಕಾರ್ಯಗಳಿಗೆ ಕೈ ಹಾಕಿದರೂ ಅದು ಕೈಗೂಡುತ್ತದೆ ಎನ್ನಲಾಗುತ್ತದೆ. ಬಹು ಮುಖ್ಯವಾಗಿ ಶಿವನ ಸಂಪೂರ್ಣ ಸಾನಿಧ್ಯವಿರುವ ಈ ಮಾಸದಲ್ಲಿ ಶಿವನ ಪೂಜೆಯನ್ನು ಮಾಡುವುದರಿಂದ ಅವನ ರಕ್ಷಣೆ ನಮ್ಮ ಮೇಲೆ ಸದಾ ಇರುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top