ಬಿಗ್ ಬಾಸ್ ಎಂದಮೇಲೆ ಮನೆಯಲ್ಲಿ ಜಗಳ ಮತ್ತು ಮನೋರಂಜನೆ ಇದ್ದೆ ಇರುತ್ತೆ. ಆದರೆ ಇದೀಗ ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಜಗಳ ಎಂಬುದು ಬಹಳಷ್ಟು ನಡೆಯುತ್ತಿದೆ ಎಂದು ಹೇಳಬಹುದು. ಇದಕ್ಕೆ ಮುಖ್ಯ ಕಾರಣ ಪ್ರಶಾಂತ್ ಸಂಭರ್ಗಿ ಎಂದು ಹೇಳಿದರೆ ತಪ್ಪಾಗಲಾರದು. ಕಳೆದ ಸೀಸನ್ ನಲ್ಲಿ ಇವರು ಹೇಗೆ ಕಿರಿಕ್ ತೆಗೆದುಕೊಂಡು ಜಗಳಕ್ಕೆ ಹೋಗುತ್ತಿದ್ದರೋ ಇದೀಗ ಈ ಬಾರಿಯ ಬಿಗ್ ಬಾಸ್ ನಲ್ಲೂ ಸಹ ಇದನ್ನೇ ಮುಂದುವರೆಸೆಕೊಂಡು ಬಂದಿದ್ದಾರೆ. ಆದರೆ ಇದೀಗ ಇವರ ಜಗಳ ಇವರಿಗೆ ಮುಳ್ಳಾಗಿ ಪರಿವರ್ತನೆಗೊಂಡಿದೆ.
ಬಿಗ್ ಬಾಸ್ ಮನೆಯಲ್ಲಿ ಜಗಳ ಅಂತ ಬಂದಾಗ ಹೆಚ್ಚಾಗಿ ಅದು ಪ್ರಶಾಂತ್ ಸಂಭರ್ಗಿ ಮತ್ತು ರೂಪೇಶ್ ರಾಜಣ್ಣ ನಡುವೆ ನಡೆಯುತ್ತದೆ. ಇವರಿಬ್ಬರ ಜಗಳ ಪ್ರತಿದಿನ ಇದ್ದೆ ಇರುತ್ತದೆ. ಆದರೆ ಪ್ರಶಾಂತ್ ಸಂಭರ್ಗಿ ಅವರು ಈ ಬರಿ ಜಗಳವಾಡುತ್ತಿದ್ದ ವೇಳೆ ಕೇವಲ ರೂಪೇಶ್ ರಾಜಣ್ಣ ಅವರನ್ನು ಮಾತ್ರ ಟಾರ್ಗೆಟ್ ಮಾಡದೇ ಕನ್ನಡಪರ ಹೋರಾಟಗಾರರಿಗೆ ಅವಮಾನ ಮಾಡಿದ್ದಾರೆ. ಇಷ್ಟೇಅಲ್ಲದೆ ಕನ್ನಡಪರ ಹೋರಾಟಗಾರರಿಗೆ ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದಾರೆ ಎಂದು ಕನ್ನಡಪರ ಹೋರಾಟಗಾರರು ಆರೋಪಿಸುತ್ತಿದ್ದಾರೆ. ಹೀಗಾಗಿ ಬಿಗ್ ಬಾಸ್ ಶೋ ವಿರುದ್ಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರಶಾಂತ್ ಸಂಬರ್ಗಿ ಅವರನ್ನು ಕೂಡಲೇ ಬಿಗ್ ಬಾಸ್ ಮನೆಯಿಂದ ಹೊರಗೆ ಕಳಿಸಬೇಕು ಎಂದು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರನ್ನು ಹೊರಗೆ ಕಳಿಸದೇ ಇದ್ದರೆ ಪ್ರತಿಭಟನೆಯ ಕಾವು ತೀವ್ರಗೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇಷ್ಟೇಅಲ್ಲದೆ ಬಿಗ್ ಬಾಸ್ ಸಿಬ್ಬಂದಿಯವರ ಜೊತೆ ಕೂಡ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಮಾತಿನ ಚಕಮಕಿ ಕೂಡ ನಡೆಸಿದ್ದಾರೆ. ಕೇವಲ ಬಿಗ್ ಬಾಸ್ ಮನೆಯಲ್ಲಿ ಸೀಮಿತವಾಗಿದ್ದ ಪ್ರಶಾಂತ್ ಸಂಭರ್ಗಿ ಅವರ ಜಗಳ ಇದೀಗ ಮನೆಯಾಚೆ ಕೂಡ ಕಿಡಿಯನ್ನು ಹತ್ತಿಸಿದೆ. ಇದೀಗ ಈ ಘಟನೆ ಎಲ್ಲಿಗೆ ತಲುಪುತ್ತದೆ ಎಂದು ಕಾದು ನೋಡಬೇಕು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
