fbpx
ಸಮಾಚಾರ

ರಾಷ್ಟ್ರಪತಿ ಮುರ್ಮು ಬಗ್ಗೆ ಅವಹೇಳನ ಪ್ರಕರಣ: ಕೊನೆಗೂ ಕ್ಷಮೆಯಾಚಿಸಿದ ವಿಶ್ವೇಶ್ವರ ಭಟ್

ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕುರಿತು ಕೀಳುಮಟ್ಟದ ಅವಹೇಳನ ಮಾಡಿದ್ದ ಕನ್ನಡ ದೈನಿಕ ‘ವಿಶ್ವವಾಣಿ’ಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌ ಅವರು ಕೊನೆಗೂ ಕ್ಷಮೆಯಾಚಿಸಿದ್ದಾರೆ. ರಾಷ್ಟ್ರೀಯ ಮಹಿಳಾ(NCW) ಆಯೋಗದ ಎದುರು ಹಾಜರಾಗಿ ಭಟ್ ಅವರು ಬೇಷರತ್ ಕ್ಷಮೆ ಯಾಚಿಸಿದ್ದಾರೆ ಎಂದು ವರದಿಯಾಗಿದೆ.

‘ವಿಶ್ವೇಶ್ವರ ಭಟ್‌ ಆಯೋಗದ ಮುಂದೆ ಹಾಜರಾಗಿ ಬೇಷರತ್ ಕ್ಷಮೆಯಾಚಿಸಿದ್ದಾರೆ. ಈ ಸಂಬಂಧ ಲಿಖಿತವಾಗಿಯೂ ಕ್ಷಮೆ ಕೇಳಿದ್ದಾರೆ. ಎಂದು ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಹೇಳಿರುವುದಾಗಿ ಕನ್ನಡ ವಾಹಿನಿಗಳು ವರದಿಮಾಡಿವೆ. ‘ಭಾರತದ ರಾಷ್ಟ್ರಪತಿ ಅವರನ್ನು ಅವಮಾನಿಸುವ ಯಾವುದೇ ದುರುದ್ದೇಶ ತನಗೆ ಇಲ್ಲ ಎಂಬುದಾಗಿ ವಿಶ್ವೇಶ್ವರ ಭಟ್‌ ಸ್ಪಷ್ಟಪಡಿಸಿದ್ದಾರೆ’ ಎಂದು ರೇಖಾ ಶರ್ಮ ಮಾಹಿತಿ ನೀಡಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗವು ಕ್ಷಮಾಪಣೆ ಪತ್ರದ ವಿವರಗಳನ್ನು ರಾಷ್ಟ್ರಪತಿ ಭವನಕ್ಕೆ ಕಳುಹಿಸಲಿದೆ ಎಂದು ಅವರು ಹೇಳೀದ್ದಾರೆ ಎನ್ನಲಾಗಿದೆ.

ವಿಶ್ವವಾಣಿ ಪತ್ರಿಕೆಯ ಅಕ್ಟೋಬರ್ 06ರ ನೂರೆಂಟು ವಿಶ್ವ ಎಂಬ ಅಂಕಣದಲ್ಲಿ ನದಿಯ ಹೆಸರಿಟ್ಟುಕೊಂಡು ನೀರಿಗಾಗಿ ನರಳುವ ಜೋರ್ಡಾನ್! ಎಂಬ ಬರಹದಲ್ಲಿ “ಸುಟ್ಟು ಕರಕಲಾದ ಕಾಗೆ! ಥೇಟು ‘ಮುರ್ಮು’ ಅವತಾರ!” ಎಂದು ಬರೆಯುವ ಮೂಲಕ ರಾಷ್ಟ್ರಪತಿಯವರ ಮೈಬಣ್ಣವನ್ನು ಅವಹೇಳನ ಮಾಡಿದ್ದಾರೆ ಎಂದು ಅವರ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಆದರೆ ಭಟ್ ಮಾತ್ರ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಮೂಲಕ ಮತ್ತಷ್ಟು ಕೋಪಕ್ಕೆ ಕಾರಣರಾಗಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top