fbpx
ಸಮಾಚಾರ

ಅದಿತಿ ಪ್ರಭುದೇವ ಮದುವೆ ದಿನಾಂಕ ಫಿಕ್ಸ್: ಆಮಂತ್ರಣ ಪತ್ರಿಕೆ ಫೋಟೋ ವೈರಲ್!

ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿರುವ ಅದಿತಿ ಪ್ರಭುದೇವ ಅವರು ಈಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಯಶಸ್ವಿ ಎಂಬುವವರ​ ಜೊತೆ ಅವರು ಹಸೆಮಣೆ ಏರುತ್ತಿದ್ದಾರೆ. ಅವರಿಬ್ಬರ ಮದುವೆ ನವೆಂಬರ್​ 27ರಂದು ನಡೆಯಲಿದೆ. ಅದಿತಿ ಪ್ರಭುದೇವ-ಯಶಸ್ವಿ ವಿವಾಹದ ಆಮಂತ್ರಣ ಪತ್ರಿಕೆಯ ಫೋಟೋ ಕೂಡ ಲಭ್ಯವಾಗಿದೆ. ಸಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

 

 

ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನ ವಿಶೇಷವಾಗಿಯೇ ಮಾಡಿಸಿದ್ದಾರೆ. ಇದು ಅಷ್ಟೇ ಸರಳವಾಗಿಯ ಇರೋದು ವಿಶೇಷ. ಅಷ್ಟೇ ಕನ್ನಡಮಯವಾಗಿಯೂ ಇದೆ. ಕರುನಾಡ ತಾಯಿ ಭುವನೇಶ್ವರಿ ಆಶೀರ್ವಾದದೊಂದಿಗೆ ಅಂತಲೇ ಮೊದಲು ಪುಟ ನಿಮ್ಮನ್ನ ಸೆಳೆಯುತ್ತದೆ. ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ನಮ್ಮ ಮನೆ, ಮನಸ್ಸುಗಳ ಸೇರಲು ಬಯಸಿರುವಳು ಅದಿತಿ. ಹೃದಯ ತೆರೆದು ಮೌನ ಮುರಿದು ಪ್ರೀತಿಯ ಸಿಂಪಡಿಸಿ ಕಾದಿರುವನು ಯಶಸ್ವಿ’ ಎಂದು ಆಮಂತ್ರಣ ಪತ್ರಿಕೆಯಲ್ಲಿ ಬರೆದಿದ್ದಾರೆ.

 

 

ಅಂದಹಾಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದಿತಿ ಮದುವೆ ಅದ್ಧೂರಿಯಾಗಿ ನಡೆಯಲಿದ್ದು. ಮದುವೆ ತಯಾರಿ ಭರದಿಂದ ಸಾಗುತ್ತಿವೆ. ಯಶಸ್ ಉದ್ಯಮಿ ಮತ್ತು ಕಾಫಿ ಪ್ಲಾಂಟರ್ ಆಗಿದ್ದು ಅದಿತಿಯನ್ನು ಮೊದಲು ಇಷ್ಟಪಟ್ಟಿದ್ದು ನಂತರ ಕುಟುಂಬಸ್ಥರ ಒಪ್ಪಿಗೆ ನಂತರ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು.

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top