fbpx
ಸಮಾಚಾರ

ಕನ್ನಡ ಹೋರಾಟಗಾರರಿಗೆ ಅವಮಾನ: ಕಣ್ಣೀರು ಹಾಕಿ ಕ್ಷಮೆ ಕೇಳಿದ ಪ್ರಶಾಂತ್ ಸಂಬರ್ಗಿ

ಬಿಗ್ ಬಾಸ್ ಮನೆಯಲ್ಲಿ ಕನ್ನಡ ಪರ ಹೋರಾಟಗಾರರ ಬಗ್ಗೆ ಕೀಳು ಮಾತನ್ನು ಆಡಿ ಕೆಂಗಣ್ಣಿಗೆ ಗುರಿಯಾಗಿದ್ದ ಪ್ರಶಾಂತ್ ಸಂಬರ್ಗಿ ಬೇಷರತ್ ಕ್ಷಮೆ ಕೇಳಿದ್ದಾರೆ. ಬಿಗ್​ ಬಾಸ್​ನಲ್ಲಿ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರ ಜೊತೆ ವಾಗ್ವಾದ ಮಾಡುವ ಭರದಲ್ಲಿ ಪ್ರಶಾಂತ್ ಅವರು ಕನ್ನಡ ಪರ ಹೋರಾಟಗಾರರಿಗೆ ಅವಮಾನ ಮಾಡಿದ್ದರು. ಈ ಸಂಬಂಧ ಪ್ರತಿಭಟನೆಗಳು ಕೂಡ ನಡೆದಿದ್ದವು. ಈಗ ಬಿಗ್ ಬಾಸ್ ಮನೆಯಿಂದ ಪ್ರಶಾಂತ್ ಸಂಬರ್ಗಿ ಅವರು ಕ್ಷಮೆ ಕೇಳಿದ್ದಾರೆ.

 

 

ಬಿಗ್ ಬಾಸ್ ಕನ್ಫೆಷನ್ ರೂಂಗೆ ಪ್ರಶಾಂತ್ ಅವರನ್ನು ಕರೆಸಿ ತಪ್ಪಿನ ಬಗ್ಗೆ ವಿವರಿಸಿದರು. ಬಳಿಕ ಪ್ರಶಾಂತ್ ಸಂಬರಗಿ ತಕ್ಷಣ ಕ್ಷಮೆ ಕೇಳಿದರು. ‘ನಾನು ಹಾಗಿ ಹೇಳಿಲ್ಲ. ಆದರೆ ತಪ್ಪಾಗಿದ್ದರೆ ನನ್ನ ಕ್ಷಮೆ. ಮಾತಿನ ರಭಸದಲ್ಲಿ ಹೇಳಿದ್ದೇನೆ. ಕನ್ನಡ ಪ್ರೀತಿ ಮಾಡುವವರು, ಕನ್ನಡ ಹೋರಾಟಗಾರರಿಗೆ ಬೇಸರವಾಗಿದ್ದರೆ ಕ್ಷಮೆ ಕೇಳುತ್ತೇನೆ. ಇದು ಒಬ್ಬರ ವಿರುದ್ಧ ಮಾಡಿದ ಆರೋಪ. ನನಗೆ ನೋಯಿಸುವ ಅಥವಾ ಅವಮಾನ ಮಾಡುವ ಉದ್ದೇಶ ಇರಲಿಲ್ಲ. ನನ್ನ ಮಾತನ್ನು ಹಿಂಪಡೆಯುತ್ತೇನೆ’ ಎಂದು ಹೇಳಿ ಕಣ್ಣೀರು ಹಾಕಿದರು.

‘’ಈ ತರಹ ಅರ್ಥ ಹೋಗಿದೆ ಅಂದ್ರೆ ನನ್ನಿಂದ ತಪ್ಪಾಗಿದೆ. ನಾನು ಆ ತರಹ ಮಾತನಾಡಬೇಕು ಅಂತ ಮಾತನಾಡಿಲ್ಲ. ರೂಪೇಶ್ ರಾಜಣ್ಣ ಅವರ ಮೈಂಡ್‌ನ ಕುಗ್ಗಿಸಬೇಕು ಅಂತ ಮಾಡಿದ್ದು. ಇದು ಈ ಪ್ರಮಾಣದಲ್ಲಿ ಆಗುತ್ತೆ ಅಂತ ನನಗೆ ಗೊತ್ತಿರಲಿಲ್ಲ. ನಾನು ವಿಷಾದ ವ್ಯಕ್ತಪಡಿಸುತ್ತೇನೆ. ನನ್ನ ಮಾತನ್ನ ವಾಪಸ್ ತೆಗೆದುಕೊಳ್ಳುತ್ತೇನೆ. ಮಾತಿನ ಭರದಲ್ಲಿ ಹೇಳಿದ್ದು ನನ್ನಿಂದ ತಪ್ಪಾಗಿದೆ. ಅದಕ್ಕೆ ಕ್ಷಮೆ ಕೇಳುತ್ತಿದ್ದೇನೆ. ದಯವಿಟ್ಟು ಕ್ಷಮಿಸಬೇಕು ಅಂತ ನಿಮ್ಮಲ್ಲಿ ಕೇಳುತ್ತಿದ್ದೇನೆ ‘ಬಿಗ್ ಬಾಸ್’’ ಎಂದಿದ್ದಾರೆ ಪ್ರಶಾಂತ್ ಸಂಬರಗಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top