fbpx
ಸಮಾಚಾರ

ಮೊದಲ ಮಗುವಿನ ನಿರೀಕ್ಷೆಯಲ್ಲಿ ಸಮೀರ್ ಆಚಾರ್ಯ ಶ್ರಾವಣಿ ದಂಪತಿ

ಬಿಗ್ ಬಾಸ್ ಕನ್ನಡ ಸೀಸನ್ ಐದರ ಸ್ಪರ್ದಿಯಾಗುವುದರ ಮೂಲಕ ಪ್ರವರ್ಧಮಾನಕ್ಕೆ ಬಂದಿದ್ದ ಸಮೀರ್ ಆಚಾರ್ಯ ಆನಂತರ ಅನೇಕ ಕಿರುತೆರೆ ಶೋಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಸಕ್ರಿಯರಾಗಿದ್ದರು. ಇತ್ತೀಚಿಗೆ ಅವರು ತಮ್ಮ ಧರ್ಮಪತ್ನಿ ಶ್ರಾವಣಿ ಜೊತೆಗೆ ರಾಜರಾಣಿ ರಿಯಾಲಿಟಿ ಷೋನಲ್ಲಿ ಕೂಡ ಸ್ಪರ್ದಿಸಿ ಮತ್ತಷ್ಟು ಹೆಸರು ಮಾಡಿದ್ದರು. ಇದೀಗ ಸಮೀರ್ ಆಚಾರ್ಯ ಶ್ರಾವಣಿ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

 

 

ಹೌದು, ರಾಜಾ ರಾಣಿ ಕಾರ್ಯಕ್ರಮದ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದಿದ್ದ ಈ ಜೋಡಿ, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಶ್ರಾವಣಿ ಅವರು ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಹಂಚಿಕೊಂಡಿದ್ದಾರೆ. ಜೀವನ ಹೊಸ ಅಧ್ಯಾಯ ಆರಂಭವಾಗಿದೆ ಎಂದು ಶ್ರಾವಣಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ತುಂಬಾ ದಿನಗಳ ನಂತರ ಮಗು ಬರುತ್ತಿರುವುದ ಖುಷಿಯಾಗಿದೆ ಎಂದು ಹೇಳಿದ್ದಾರೆ.

 

 

ಸೋಷಿಯಲ್ ಮೀಡಿಯಾದಲ್ಲಿ ಫಾಲೋವರ್ಸ್ ಮತ್ತು ಸಿನಿ ಸ್ನೇಹಿತರು ವಿಶ್ ಮಾಡಿದ್ದಾರೆ. ಮಗುವಿನ ನಿರೀಕ್ಷೆ ಬಗ್ಗೆ ರಾಜಾ ರಾಣಿ ರಿಯಾಲಿಟಿ ಶೋನಲ್ಲಿ ಮಾತನಾಡಿದ್ದರು. ರಾಜಾ ರಾಣಿ ರಿಯಾಲಿಟಿ ಶೋ ಕಾರ್ಯಕ್ರಮಕ್ಕೂ ಮುನ್ನ ಶ್ರಾವಣಿಯವರಿಗೆ ಒಮ್ಮೆ ಗರ್ಭಪಾತ ಆಗಿತ್ತು. ಅದರಿಂದ ತುಂಬಾ ನೋವಾಗಿತ್ತು ಎಂದು ಹೇಳಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top