fbpx
ಸಮಾಚಾರ

ಭಾರತ-ಜಿಂಬಾಬ್ವೆ ಪಂದ್ಯಕ್ಕೆ ವರುಣನ ಕಾಟ! ಪಂದ್ಯ ರದ್ದಾದರೆ ಟೀಮ್ ಇಂಡಿಯಾದ ಭವಿಷ್ಯವೇನು?

ಭಾರತ ಮತ್ತು ಜಿಂಬಾಬ್ವೆ ತಂಡಗಳ ನಡುವೆ ಭಾನುವಾರ ಕೊನೆಯ ಪಂದ್ಯ ನಡೆಯಲಿದೆ. ಈ ಪಂದ್ಯ ಭಾರತ ತಂಡಕ್ಕೆ ಬಹಳ ಮುಖ್ಯವಾದದ್ದು. ಏಕೆಂದರೆ ಈ ಪಂದ್ಯವನ್ನು ಗೆದ್ದರೆ ಮಾತ್ರ ಭಾರತ ಸೆಮಿಫೈನಲ್ಸ್ ತಲುಪುತ್ತದೆ. ಆದರೆ ಇದೀಗ ಈ ಪಂದ್ಯಕ್ಕೆ ವರುಣನ ಕಾಟವಿದ್ದು, ಒಂದು ವೇಳೆ ಮಳೆ ಬಂದು ಪಂದ್ಯ ರದ್ದಾದರೆ ಭಾರತ ಸೆಮಿಫೈನಲ್ಸ್ ತಲುಪುವ ಲೆಕ್ಕಾಚಾರ ಹೇಗಿದೆ ಎಂದು ತಿಳಿಯೋಣ.

ಇದೀಗ ನಾವು ಪಾಯಿಂಟ್ಸ್ ಟೇಬಲ್ ಕಡೆ ಗಮನಹರಿಸಿದರೆ ಭಾರತ 4 ಪಂದ್ಯಗಳ ಪೈಕಿ ಮೂರರಲ್ಲಿ ಗೆದ್ದರೆ ಒಂದು ಪಂದ್ಯ ಸೋತು 6 ಅಂಕ ಸಂಪಾದಿಸಿದೆ. +0.730 ರನ್​ರೇಟ್ ಹೊಂದಿದೆ. ಹೀಗಾಗಿ ಜಿಂಬಾಬ್ವೆ ವಿರುದ್ಧ ಗೆದ್ದರೆ ಭಾರತ ನೇರವಾಗಿ ಸೆಮಿಫೈನಲ್ಸ್ ತಲುಪುತ್ತದೆ. ಒಂದು ವೇಳೆ ಮಳೆ ಬಂದರೆ ಭಾರತಕ್ಕೆ ಒಂದು ಅಂಕ ಸಿಗುತ್ತದೆ. ಹೀಗಾಗಿ ಭಾರತ ಸಲೀಸಾಗಿ ಸೆಮಿಫೈನಲ್ಸ್ ಹಂತ ತಲುಪಬಹುದು.

ಒಂದು ವೇಳೆ ಈ ಪಂದ್ಯದಲ್ಲಿ ಸೋತರೆ ಮಾತ್ರ ಭಾರತಕ್ಕೆ ಟೆನ್ಶನ್ ಹೆಚ್ಚು. ಏಕೆಂದರೆ ಭಾರತ ಸೆಮಿಫೈನಲ್ಸ್ ತಲುಪಬೇಕಾದರೆ ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಫಲಿತಾಂಶವನ್ನು ಅವಲಂಬಿಸಬೇಕಾಗುತ್ತದೆ. ಪಾಕ್ ಬಾಂಗ್ಲಾ ವಿರುದ್ಧ ಗೆದ್ದು, ಆಫ್ರಿಕಾ ತಂಡ ನೆದರ್ಲೆಂಡ್ಸ್‌ ವಿರುದ್ಧ ಸೋತರೆ ಪಾಕ್‌ ತಂಡ ಸೆಮಿಫೈನಲ್ ಟಿಕೆಟ್‌ ಪಡೆಯಲಿದೆ. ಒಂದು ವೇಳೆ ಪಾಕಿಸ್ತಾನ ತಂಡ ಕೊನೇ ಪಂದ್ಯದಲ್ಲಿ ಬಾಂಗ್ಲಾ ವಿರುದ್ದ ಸೋತರೆ ಭಾರತ ಮತ್ತು ದಕ್ಷಿಣ ಆಫ್ರಿಕಾ ನೇರವಾಗಿ ಸೆಮೀಸ್​ಗೆ ಪ್ರವೇಶಿಸಲಿದೆ.

ಮೆಲ್ಬೋರ್ನ್ ಹವಾಮಾನ ಹೇಗಿದೆ?
ಹವಾಮಾನ ಇಲಾಖೆಯ ವರದಿಯ ಪ್ರಕಾರ ಭಾನುವಾರ (ನವೆಂಬರ್ 6) ಮೆಲ್ಬೋರ್ನ್ ನಲ್ಲಿ ಮಳೆಯಾಗುವ ಸಾಧ್ಯತೆಗಳು ಕಡಿಮೆ ಎಂದು ಹೇಳಲಾಗುತ್ತಿದೆ. ಶನಿವಾರ ಸ್ವಲ್ಪ ಮಟ್ಟಿಗೆ ಮಳೆಯಾಗಬಹುದು. ಇದು ಭಾರತ ಮತ್ತು ಜಿಂಬಾಬ್ವೆ ಪಂದ್ಯಕ್ಕೆ ಯಾವುದೇ ರೀತಿಯ ತೊಂದರೆ ಮಾಡುವುದಿಲ್ಲ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಮಳೆ ಬಂದರು ಸಹ ಅದು ಹೆಚ್ಚು ಕಾಲ ಇರದೇ ಇರುವ ಕಾರಣ ಅಭಿಮಾನಿಗಳು ಈ ಪಂದ್ಯವನ್ನು ವೀಕ್ಷಿಸಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top