fbpx
ಸಮಾಚಾರ

ವಾಟ್ಸಾಪ್ ನಲ್ಲಿ ಪರಿಚಯವಾಯ್ತು ಹೊಸ ಫೀಚರ್! ನೀವು WhatsApp ಬಳಸುತ್ತಿರುವುದು ಯಾರಿಗೂ ತಿಳಿಯದಂತೆ ಮಾಡಬಹುದು

ಪ್ರಪಂಚದಾದ್ಯಂತ ಅತಿ ಹೆಚ್ಚು ಬಳಕೆಯಾಗುತ್ತಿರುವ ಅಪ್ಲಿಕೇಶನ್ ಗಳಲ್ಲಿ ವಾಟ್ಸಾಪ್ ಕೂಡ ಒಂದು. ಕಳೆದ ಕೆಲವು ತಿಂಗಳುಗಳಿಂದ ವಾಟ್ಸಾಪ್ ನಲ್ಲಿ ಹಲವಾರು ವೈಶಿಶ್ಯತೆಗಳನ್ನು ನೀಡಲಾಗಿತ್ತು. ಇದೀಗ ವಾಟ್ಸಾಪ್ ಮತ್ತೊಂದು ಹೊಸ ವೈಶಿಷ್ಯತೆಯನ್ನು ಪರಿಚಯಿಸಿದ್ದು, ಈ ಮೂಲಕ ನೀವು ಆನ್ಲೈನ್ ಇದ್ದೀರಾ ಇಲ್ಲವ ಎಂದು ಯಾರಿಗೂ ತಿಳಿಯದಂತೆ ಮಾಡಬಹುದು.

ವಾಟ್ಸಾಪ್ ಇದೀಗ ಆನ್‌ಲೈನ್‌ ಪ್ರೆಸೆನ್ಸ್‌ ಎಂಬ ಹೊಸ ವೈಶಿಷ್ಯತೆಯನ್ನು ಪರಿಚಯಿಸಿದೆ. ಈ ಹೊಸ ಫೀಚರ್ಸ್ ವಾಟ್ಸಾಪ್ ಬಳಕೆದಾರರಿಗೆ ತಾವು ಆನ್ಲೈನ್ ಇರುವುದನ್ನು ತೋರಿಸದೆ ಇರಲು ಮಾಡುವಂತೆ ಸಹಾಯ ಮಾಡುತ್ತದೆ. ಈ ಮೂಲಕ ತಾವು ವಾಟ್ಸಾಪ್ ಅನ್ನು ಉಪಯೋಗಿಸುತ್ತಿದ್ದೀರಾ ಇಲ್ಲವಾ ಎಂದು ಯಾರಿಗೂ ತಿಳಿಯುವುದಿಲ್ಲ.

ನಾವು ವಾಟ್ಸಾಪ್ ಅಲ್ಲಿ ಒಬ್ಬರಿಗೆ ಸಂದೇಹವನ್ನು ಕಳುಹಿಸುವ ಸಂಧರ್ಭದಲ್ಲಿ ಅವರು ಆನ್ಲೈನ್ ಇದ್ದರೆ ಅದು ಆನ್ಲೈನ್ ಎಂದು ತೋರಿಸುತ್ತದೆ. ಆದರೆ ಈ ಹೊಸ ಫೀಚರ್ಸ್ ನ ಸಹಾಯದಿಂದ ಅದನ್ನು ಮರೆಮಾಡಬಹುದು ಮತ್ತು ನೀವು ಆನ್ಲೈನ್ ಇದ್ದೀರಾ ಇಲ್ಲವಾ ಎಂದು ಯಾರಿಗೆ ಗೋಚರಿಸಬೇಕು ಎಂಬುದನ್ನು ಸಹ ಕಂಟ್ರೋಲ್ ಮಾಡಬಹುದು. ಹೀಗಾಗಿ ನೀವು ಈ ರೀತಿ ಮಾಡಲು ಈ ಕೆಲಕಂಡ ಸುಲಭ ವಿಧಾನವನ್ನು ಅನುಸರಿಸಬೇಕು.

ನೀವು ಆಂಡ್ರಾಯ್ಡ್ ಫೋನ್ ಬಳಕೆ ಮಾಡುತ್ತಿದ್ದರೆ ಈ ರೀತಿ ಮಾಡಿ:
ಹಂತ:1 ನಿಮ್ಮ ಆಂಡ್ರಾಯ್ಡ್ ಫೋನಿನಲ್ಲಿ ವಾಟ್ಸಾಪ್ ಅಪ್ಲಿಕೇಶನ್ ತೆರೆಯಿರಿ
ಹಂತ:2 ಮೇಲೆ ಇರುವ ಮೂರು ಚುಕ್ಕೆಗಳುಳ್ಳ ‘ಮೋರ್‌’ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:3 ಈಗ ಸೆಟ್ಟಿಂಗ್‌ಗಳ ಆಯ್ಕೆಯನ್ನು ಟ್ಯಾಪ್ ಮಾಡಿ ಮತ್ತು ನಂತರ ಗೌಪ್ಯತೆ ಟ್ಯಾಪ್ ಮಾಡಿ.
ಹಂತ:4 ನಂತರ ಲಾಸ್ಟ್ ಸೀನ್‌ ಮತ್ತು ಆನ್‌ಲೈನ್‌ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:5 ನಂತರ ನನ್ನ ಸಂಪರ್ಕಗಳನ್ನು ಹೊರತುಪಡಿಸಿ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:6 ಇದೀಗ ನಿಮ್ಮ ಆನ್‌ಲೈನ್ ಸ್ಟೇಟಸ್‌ ಅನ್ನು ಮರೆಮಾಡಲು ಬಯಸುವ ಎಲ್ಲಾ ಸಂಪರ್ಕಗಳನ್ನು ಆಯ್ಕೆಮಾಡಿ.
ಹಂತ:7 ನಂತರ ಮುಗಿದಿದೆ (ಡನ್) ಎಂಬುದನ್ನು ಟ್ಯಾಪ್ ಮಾಡಿ.

ನೀವು ಐಫೋನ್ ಬಳಸುತ್ತಿದ್ದರೆ ಈ ರೀತಿ ಮಾಡಿ:
ಹಂತ 1: ನಿಮ್ಮ ಐಫೋನಿನಲ್ಲಿ ವಾಟ್ಸಾಪ್ ಅಪ್ಲಿಕೇಶನ್ ತೆರೆಯಿರಿ
ಹಂತ 2: ಸೆಟ್ಟಿಂಗ್‌ಗಳ ಟ್ಯಾಬ್ ಮೇಲೆ ಟ್ಯಾಪ್ ಮಾಡಿ.
ಹಂತ 3: ಗೌಪ್ಯತೆ ಆಯ್ಕೆಯ= ಮೇಲೆ ಟ್ಯಾಪ್ ಮಾಡಿ.
ಹಂತ 4: ಈಗ, ನನ್ನ ಸಂಪರ್ಕಗಳನ್ನು ಟ್ಯಾಪ್ ಮಾಡಿ.
ಹಂತ 5: ನಿಮ್ಮ ಆನ್‌ಲೈನ್ ಸ್ಥಿತಿಯನ್ನು ಮರೆಮಾಡಲು ಬಯಸುವ ಎಲ್ಲಾ ಸಂಪರ್ಕಗಳನ್ನು ಆಯ್ಕೆಮಾಡಿ.
ಹಂತ 6: ನಂತರ ಮುಗಿದಿದೆ (ಡನ್) ಎಂಬುದನ್ನು ಟ್ಯಾಪ್ ಮಾಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top