fbpx
ಸಮಾಚಾರ

ನೀವು ವಾಟ್ಸಾಪ್ ನಲ್ಲಿ ಅಪರಿಚತರಿಗೆ ಫೋಟೋ ಕಳುಹಿಸಲು ಭಯವಾಗುತಿದ್ಯಾ? ಹಾಗಿದ್ದರೆ ಈ ಅಚ್ಚರಿ ಫೀಚರ್ ಬಳಿಸಿ

ಪ್ರಪಂಚಾದ್ಯಂತ ಅತಿಹೆಚ್ಚು ಬಳಕೆಯಾಗುತ್ತಿರುವ ಅಪ್ಲ್ಲಿಕೇಷನ್ ಗಳಲ್ಲಿ ವಾಟ್ಸಾಪ್ ಕೂಡ ಒಂದು. ಮೊದಲಿನಿಂದಲೂ ವಾಟ್ಸಾಪ್ ಬಳಕೆದಾರರಿಗೆ ಹಲವಾರು ಪ್ರೈವೆಸಿ ಫೀಚರ್ ಗಳನ್ನು ನೀಡುತ್ತಾ ಬಂದಿದೆ. ಇದೀಗ ವಾಟ್ಸಾಪ್ ಬಳಕೆದಾರರು ಮತ್ತೊಂದು ಹೊಸ ಫೀಚರ್ ಬಿಟ್ಟಿದ್ದು, ಇದಕ್ಕಾಗಿ ನೀವು ಯಾವುದೇ ಥರ್ಡ್ ಪಾರ್ಟಿ ಅಪ್ಲಿಕೇಶನ್ ಸಹಾಯ ಪಡೆದುಕೊಳ್ಳುವ ಅವಶ್ಯಕತೆ ಇಲ್ಲ.

ಇತ್ತೀಚಿಗೆ ಪ್ಲೇ ಸ್ಟೋರ್ ನಲ್ಲಿ ವಾಟ್ಸಾಪ್ ರೀತಿಯ ಹಲವಾರು ಆಪ್ ಗಳು ಬಂದಿದೆ. ಇದರಲ್ಲಿ ಡಿಲೀಟ್ ಮಾಡಿರುವ ಮೆಸೇಜ್ ಅನ್ನು ನೋಡಬಹುದು, ಮತ್ತು ನಿಮ್ಮ ಡಿಪಿ ಯನ್ನು ಯಾರು ನೋಡಿದರು ಎಂದು ಸಹ ತಿಳಿದುಕೊಳ್ಳಬಹುದು. ಆದರೆ ಇವೆಲ್ಲ ಫೀಚರ್ ಗಿಂತ ಮಿಗಿಲಾಗಿ ಒಂದು ಫೀಚರ್ ನೀವು ಬಳಸುತ್ತಿರುವ ವಾಟ್ಸಾಪ್ ನಲ್ಲಿದೆ. ಅದೇನೇದರೆ ವ್ಯೂ ವನ್ಸ್ (View Once) ಎಂಬ ಫೀಚರ್. ಇದರ ಮೂಲಕ ನೀವು ಯಾರಿಗಾದರು ಫೋಟೋವನ್ನು ಕಳುಹಿಸಿದರೆ ಅವರು ಅದನ್ನು ಓಪನ್ ಮಾಡಿ ನೋಡಿದ ತಕ್ಷಣ ಅದು ಡಿಲೀಟ್ ಆಗುತ್ತದೆ.

ವಾಟ್ಸಾಪ್ ಬಳಕೆದಾರಿಗೆ ಒಂದು ಭಯ ಯಾವಾಗಲು ಇರುತ್ತಿತ್ತು. ಅದೇನೆಂದರೆ ನಾವು ಯಾರಿಗಾದರು ನಮ್ಮ ಫೋಟೋವನ್ನು ಕಳುಹಿಸಿದರೆ ಅವರು ಅದನ್ನು ಸೇವ್ ಮಾಡಿ ಅದನ್ನು ಮಿಸ್ ಯೂಸ್ ಮಾಡಬಹುದು ಎಂದು. ಆದರೆ ಇನ್ನುಮುಂದೆ ಆತರ ಆಗುವುದಿಲ್ಲ. ನೀವು ಯಾರಿಗಾದರು ಫೋಟೋ ಕಳುಹಿಸುವಾಗ ಸೆಂಡ್ ಆಪ್ಷನ್ ಪಕ್ಕ ಇರುವ ವ್ಯೂ ವನ್ಸ್ ಅನ್ನು ಒತ್ತಿ. ಹೀಗೆ ಮಾಡುವುದರಿಂದ ನೀವು ಸೆಂಡ್ ಮಾಡಿದ ಫೈಲ್ ಅನ್ನು ಅವರಿಗೆ ಒಮ್ಮೆಗೆ ಮಾತ್ರ ಓಪನ್ ಮಾಡಲು ಸಾಧ್ಯವಾಗುತ್ತಿದೆ. ಅಷ್ಟೇಅಲ್ಲದೆ ಈ ಫೋಟೋ ಅವರ ಮೊಬೈಲ್ ನಲ್ಲಿ ಆಗಲಿ ಅಥವಾ ವಾಟ್ಸಾಪ್ ನಲ್ಲಿಯಾಗಲಿ ಸೇವ್ ಆಗಿರುವುದಿಲ್ಲ. ಹೀಗಾಗಿ ನೀವು ಯಾವುದೇ ಭಯ ಪಡುವ ಅವಶ್ಯಕತೆ ಇರುವುದಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top