fbpx
ಸಮಾಚಾರ

ಕನ್ನಡ ಹೋರಾಟಗಾರರಿಗೆ ಅವಮಾನ: ಪ್ರಶಾಂತ್ ಸಂಬರ್ಗಿಗೆ ಕಿಚ್ಚ ಸುದೀಪ್ ತರಾಟೆ

ಬಿಗ್ ಬಾಸ್ ಮನೆಯಲ್ಲಿ ಕನ್ನಡ ಪರ ಹೋರಾಟಗಾರರ ಬಗ್ಗೆ ಕೀಳು ಮಾತನ್ನು ಆಡಿ ಕೆಂಗಣ್ಣಿಗೆ ಗುರಿಯಾಗಿದ್ದ ಪ್ರಶಾಂತ್ ಸಂಬರ್ಗಿಗೆ ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಚಾರಕ್ಕೆ ಪ್ರಶಾಂತ್ ಸಂಬರ್ಗಿ ಅವರಿಗೆ ಕಿಚ್ಚ ಸುದೀಪ್ ಅವರು ಖಡಕ್ ಆಗಿ ಎಚ್ಚರಿಕೆ ನೀಡಿದ್ದಾರೆ.

ಪ್ರಶಾಂತ್ ಸಂಬರ್ಗಿ ಅವರೇ ಕಳೆದ ವಾರ, ಮಾತನಾಡುವ ಬರದಲ್ಲಿ ಕನ್ನಡ ಪರ ಹೋರಾಟಗಾರಿಗೆ ಅವಮಾನ ಮಾಡಿದ್ದೀರಿ. ನೀವು, ರಾಜಣ್ಣ ವೈಯಕ್ತಿಕವಾಗಿ ಎಷ್ಟಾದ್ರೂ ಜಗಳ ಮಾಡಿ. ಅದು ತಪ್ಪಲ್ಲ. ಯಾರೂ ಬೇಡ ಅನ್ನಲ್ಲ. ಆದ್ರೆ ಮಿತಿ ಮೀರಿ ಅದು ಕನ್ನಡ ಪರ ಹೋರಾಡುವವರಿಗೆ ನೋವಾಗಿದೆ. ಕನ್ನಡಕ್ಕಾಗಿ ಹೋರಾಟ ಮಾಡೋ ಎಷ್ಟೋ ಪ್ರಮಾಣಿಕರು ನಮ್ಮ ಮಧ್ಯೆ ಇದ್ದಾರೆ. ಅವರಿಗೆ ನಿಮ್ಮ ಮಾತು ಬೇಸರ ತಂದಿದೆ. ಇನ್ನೊಮ್ಮೆ ಆ ರೀತಿ ಮಾತನಾಡಬೇಡಿ ಎಂದು ಎಚ್ಚರಿಕೆ ಸುದೀಪ್ ನೀಡಿದ್ದಾರೆ.

ನಿಮ್ಮ ಮಾತುಗಳು ಈ ಮನೆಗೆ, ಸ್ಪರ್ಧಿಗಳಿಗೆ, ಆಟಕ್ಕೆ ಸೀಮಿತವಾದರೆ ಒಳ್ಳೆಯದು. ಯಾರೇ ಏನೇ ಗಲಾಟೆ ಮಾಡಬೇಕಾದರೂ, ಹೊರಗಡೆಯವರನ್ನ ಇನ್ವಾಲ್ವ್ ಮಾಡಿಕೊಳ್ಳಬೇಡಿ’’ ಎಂದು ಪ್ರಶಾಂತ್ ಸಂಬರಗಿಗೆ ಕಿಚ್ಚ ಸುದೀಪ್ ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top