ನಾಳೆ ವರ್ಷದ ಕೊನೆಯ ಚಂದ್ರಗ್ರಹಣ ಸಂಭವಿಸಲಿದ್ದು ಕೆಲೊವೊಡು ರಾಶಿಯವರಿಗೆ ಇದರಿಂದ ತೊಂದರೆಯಾಗುತ್ತದೆ ಎಂದು ಹೇಳಲಾಗುತ್ತಿದೆ. ಚಂದ್ರಗ್ರಹಣ ಭಾರತಾದ್ಯಂತ ಹಲವು ದೇಶಗಲ್ಲಿ ಕಾಣಿಸಿಕೊಳ್ಳಲಿದ್ದು, ಗ್ರಹಣದ ಸಮಯ ಮೋಕ್ಷಕಾಲ ಮತ್ತು ಮಾಡಬಾರದಂತ ಕೆಲಸಗಳ ಕುರಿತು ಮಾಹಿತಿ ಇಲ್ಲಿದೆ.
ಗ್ರಹಣದ ಸಮಯ:
ಗ್ರಹಣವು ಮಧ್ಯಾಹ್ನ 2.39ಕ್ಕೆ ಸ್ಪರ್ಶಿಸಿ ಅಪರಾಹ್ನ 4.29ಕ್ಕೆ ಉಚ್ಛ್ರಾಯ ಮಧ್ಯ ಸ್ಥಿತಿ ಗೆ ತಲುಪಿ ಸಂಜೆ 6.19ಕ್ಕೆ ಮೋಕ್ಷವಾಗಲಿದೆ. ಚಂದ್ರೋದಯ ಆಗುವುದು ಸಂಜೆ 5.59ಕ್ಕೆ ಮತ್ತು ಮೋಕ್ಷಕಾಲ ಸಂಜೆ 6.19ಕ್ಕೆ.
ಚಂದ್ರ ಗ್ರಹಣದ ಸೂತಕದ ಸಮಯದಲ್ಲಿ ಏನು ಮಾಡಬಾರದು?
1. ಚಂದ್ರ ಗ್ರಹಣದ ಸೂತಕದ ಸಂದರ್ಭದಲ್ಲಿ ಯಾವುದೇ ಆಹಾರವನ್ನು ಸೇವಿಸಬಾರದು.
2. ಗ್ರಹಣದ ಸಂದರ್ಭದಲ್ಲಿ ಗರ್ಭಿಣಿ ಮಹಿಳೆಯರು ಮನೆಯಿಂದ ಹೊರಗೆ ಬರಬಾರದು.
3. ಚಂದ್ರ ಗ್ರಹಣ ಇರುವಾಗ ಮನೆಯಲ್ಲಿ ಯಾವುದೇ ಅಡುಗೆ ಮಾಡಬಾರದು ಮತ್ತು ಆಹಾರ ಸೇವನೆಯನ್ನು ಸಹ ಗ್ರಹಣ ಮುಗಿದ ಮೇಲೆ ಮಾಡಬೇಕು.
4. ಸೂತಕದ ಸಂದರ್ಭದಲ್ಲಿ ಏನನ್ನಾದರೂ ತಿನ್ನುವುದು ಅಥವಾ ಕುಡಿಯುವುದು ಮಾಡ ಬಾರದು. ಇದರ ಜೊತೆಗೆ ಚೂಪಾದ ಆಯುಧಗಳನ್ನು ಬಳಸುವುದಾಗಲಿ ಅಥವಾ ನಿದ್ರೆ ಮಾಡುವುದಾಗಲಿ ಮಾಡಬಾರದು.
5. ಮನೆಯಲ್ಲಿ ಗೋಧಿ ಅಕ್ಕಿ ಬೇಳೆ ಇವುಗಳನ್ನು ಗರಿಕೆ ಹುಲ್ಲು ಅಥವಾ ದರ್ಬೆ ಹುಲ್ಲು ಇಲ್ಲವೆಂದರೆ ತುಳಸಿ ಎಲೆಗಳನ್ನು ಹಾಕಿ ಭದ್ರವಾಗಿ ಮುಚ್ಚಬೇಕು.
6. ಗ್ರಹಣದ ಸಂದರ್ಭದಲ್ಲಿ ಮೂತ್ರ ವಿಸರ್ಜನೆ ಮತ್ತು ಮಲವಿಸರ್ಜನೆ ಮಾಡಬಾರದು.
7. ಗ್ರಹಣದ ಸೂತಕದ ಸಂದರ್ಭದಲ್ಲಿ ತಲೆಕೂದಲಿಗೆ ಅಥವಾ ದೇಹದ ಭಾಗಗಳಿಗೆ ಎಣ್ಣೆ ಹಚ್ಚಿ ಕೊಳ್ಳಬಾರದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
