fbpx
ಸಮಾಚಾರ

ಅರ್ಜುನ್ ಸರ್ಜಾಗೆ ಶಾಕ್! ಮಗಳಿಗಾಗಿ ನಿರ್ದೇಶನ ಮಾಡುತ್ತಿದ್ದ ಸಿನಿಮಾದಿಂದ ನಾಯಕ ಔಟ್!

ದಕ್ಷಿಣ ಭಾರತದ ಖ್ಯಾತ ನಟರಲ್ಲಿ ಅರ್ಜುನ್ ಸರ್ಜಾ ಕೂಡ ಒಬ್ಬರು. ತಮ್ಮ ಚಿಕ್ಕ ವಯಸ್ಸಿನಲ್ಲೇ ಇವರು ನಟನೆಯ ಮೂಲಕ ಅಪಾರವಾದ ಅಭಿಮಾನಿ ಬಳಗವನ್ನು ಸಂಪಾದಿಸಿದ್ದರು. ಕೇವಲ ನಟನೆಯಲ್ಲಿ ಮಾತ್ರ ಸೈ ಎನಿಸಿಕೊಂಡಿದ್ದ ಇವರ ನಿರ್ದೇಶನ ಕೂಡ ಮಾಡಿದ್ದರು. ಇದೀಗ ತಮ್ಮ ಮಗಳು ಐಶ್ವರ್ಯಗಾಗಿ ಮತ್ತೆ ನಿರ್ದೇಶನದತ್ತ ಮುಖಮಾಡಿದ್ದಾರೆ. ಆದರೆ ಇದೀಗ ಇವರಿಗೆ ಒಂದು ದೊಡ್ಡ ಹೊಡೆತ ಬಿದ್ದಿದೆ ಎಂದು ಹಳಲಾಗುತ್ತಿದೆ.

ಇತ್ತೀಚಿಗೆ ಅರ್ಜುನ್ ಸರ್ಜಾ ತನ್ನ ಮಗಳಿಗೋಸ್ಕರ ಒಂದು ಸಿನಿಮಾ ನಿರ್ದೇಶನ ಮಾಡಲು ಮುಂದಾಗಿದ್ದರು. ಇದರ ಮುಹೂರ್ತ ಕೂಡ ಅದ್ದೂರಿಯಾಗಿ ನಡೆದಿದ್ದು ಖ್ಯಾತ ನಟ ಪವನ್ ಕಲ್ಯಾಣ್ ಕ್ಲಾಪ್ ಮಾಡಿ ಶುಭಹಾರೈಸಿದ್ದರು. ಇನ್ನು ಹೆಸರಿಡದ ಈ ಸಿನಿಮಾಕ್ಕೆ ವಿಶ್ವಕ್ ಸೇನ್ ನಾಯಕನಾಗಿ ಆಯ್ಕೆಯಾಗಿದ್ದರು. ಸಿನಿಮಾ ಕುರಿತು ಪ್ರತಿಯೊಂದು ಹಂತದಲ್ಲೂ ಖುಷಿಯಾಗಿ ಭಾಗಿಯಾಗಿದ್ದ ವಿಶ್ವಕ್ ಸೇನ್ ಇದೀಗ ಸಿನಿಮಾದಿಂದ ಹೊರನಡೆದಿದ್ದಾರೆ. ಇದೀಗ ನಾಯಕ ಧಿಡೀರನೆ ಸಿನಿಮಾದಿಂದ ಹೊರನಡೆದಿರುವುದು ಅರ್ಜುನ್ ಸರ್ಜಾ ಅವರಿಗೆ ಬಹಳಷ್ಟು ಬೇಸರವನ್ನು ತಂದಿದ್ದು ಇದೀಗ ನಾಯಕನ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ.

ವಿಶ್ವಕ್ ಸೇನ್ ಸಿನಿಮಾದಿಂದ ಹೊರನಡೆದಿದ್ದಾರೆ ಎಂಬ ಸುದ್ದಿ ಎಲ್ಲ ಕಡೆ ಹರಿದಾಡುತ್ತಿತ್ತು. ಇದೀಗ ಈ ವಿಷಯದ ಕುರಿತು ಸ್ಪಷ್ಟನೆ ನೀಡಲು ಅರ್ಜುನ್ ಸರ್ಜಾ ಪತ್ರಿಕಾಗೋಷ್ಠಿ ಏರ್ಪಡಿಸಿದ್ದರು. ಈ ವೇಳೆ ಮಾತನಾಡುತ್ತಾ ಇಂಥ ವೃತ್ತಿಪರವಿಲ್ಲದ ನಟರ ಜೊತೆ ಕೆಲಸ ಮಾಡುವುದು ಅರ್ಥವಿಲ್ಲ ಎಂದು ಅರ್ಜುನ್ ಸರ್ಜಾ ಕಿಡಿಕಾರಿದ್ದಾರೆ.

ಇದು ನಾನು ಬರೆದ ಅತ್ಯುತ್ತಮ ಸ್ಕ್ರಿಪ್ಟ್. ಕಥೆ ಪೂರ್ಣಗೊಳಿಸಿದ ನಂತರ, ಮುಖ್ಯ ಪಾತ್ರಕ್ಕೆ ವಿಶ್ವಕ್ ಸೇನ್ ಸೂಕ್ತ ವ್ಯಕ್ತಿ ಎಂದು ನಾನು ಭಾವಿಸಿದೆ. ಅವರು ಕೂಡ ಸ್ಕ್ರಿಪ್ಟ್ ಅನ್ನು ಸಂಪೂರ್ಣವಾಗಿ ಇಷ್ಟಪಟ್ಟ ಬಳಿಕವೇ ಸಿನಿಮಾ ಘೋಷಣೆ ಮಾಡಿದ್ದು. ಅವರ ಸಂಭಾವನೆ ಮತ್ತು ಷರತ್ತುಗಳಿಂದ ನನಗೆ ಸಂತೋಷವಾಗದಿದ್ದರೂ ಒಪ್ಪಿಕೊಂಡೆವು. ಮೊದಲು ಅಕ್ಟೋಬರ್ ನಲ್ಲಿ ಪ್ರಮುಖ ವೇಳಾಪಟ್ಟಿಯನ್ನು ಪ್ಲಾನ್ ಮಾಡಿದೆವು. ಕೊನೆಯ ಕ್ಷಣದಲ್ಲಿ, ವಿಶ್ವಕ್ ಸೇನ್ ಅವರ ಮ್ಯಾನೇಜರ್ ನನ್ನ ಬಳಿಗೆ ಬಂದು ನಾಯಕ ವೇಳಾಪಟ್ಟಿಗೆ ಸಿದ್ಧವಾಗಿಲ್ಲ ಎಂದು ಹೇಳಿದರು. ಜಗಪತಿ ಬಾಬು ಮತ್ತು ಇತರರ ಡೇಟ್ಸ್ ಸಿಕ್ಕಿದ್ದರಿಂದ ನನಗೆ ಆಘಾತವಾಯಿತು. ಕೇರಳದ ಕಲಾವಿದರೂ ಕೂಡ ಬಂದಿದ್ದರು. ಆದರೆ ಶೆಡ್ಯೂಲ್ ರದ್ದುಗೊಳಿಸಬೇಕಾಯಿತು’ ಎಂದು ಬೇಸರ ವ್ಯಕ್ತಪಡಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top