ಈ ಬಾರಿಯ T20 ವಿಶ್ವಕಪ್ ಪಂದ್ಯ ರೋಚಕ ಘಟ್ಟ ತಲುಪಿದೆ. ಭಾರತ ತಂಡ ಸೆಮಿಫೈನಲ್ಸ್ ಹಂತ ತಲುಪಿದೆ. ಹೀಗಾಗಿ ಕಪ್ ಗೆಲ್ಲಲು ಭಾರತಕ್ಕೆ ಇದೀಗ ಇರುವುದು ಕೇವಲ ಎರಡು ಹೆಜ್ಜೆಗಳು ಮಾತ್ರ. ಹೀಗಾಗಿ ಭಾರತ ತನ್ನ ಸೆಮಿಫೈನಲ್ಸ್ ಪಂದ್ಯವನ್ನು ಇಂಗ್ಲೆಂಡ್ ತಂಡದ ವಿರುದ್ಧ ಆಡಲಿದೆ. ಹೀಗಾಗಿ ಕ್ರಿಕೆಟ್ ಅಭಿಮಾನಿಗಳಿಗೆ ಇರುವ ಉತ್ಸಾಹಎಷ್ಟರಮಟ್ಟಿಗೆ ಎಂದರೆ ಭಾರತ ಇಂಗ್ಲೆಂಡ್ ತಂಡವನ್ನು ಮಣಿಸಿ ಫೈನಲ್ ಹಂತವನ್ನು ತಲುಪುತ್ತದೆ ಎಂದು. ಹೀಗಾಗಿ ನ.13 ರ ಭಾನುವಾರದಂದು ನಡೆಯಲಿರುವ ವಿಶ್ವಕಪ್ ಫೈನಲ್ಗಾಗಿ ಪ್ರತಿಯೊಬ್ಬರೂ ಕಾಯುತ್ತಿದ್ದಾರೆ. ಆದರೆ ವಿಶ್ವಕಪ್ ಫೈನಲ್ ನೋಡುತ್ತ ಮೋಜು ಮಸ್ತಿ ಮಾಡಬೇಕೆಂದುಕೊಂಡಿದ್ದ ಬೆಂಗಳೂರಿಗರಿಗೆ, ನಗರದ ಪೊಲೀಸರು ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಸೆಮಿಫೈನಲ್ಸ್ ಪಂದ್ಯ ನವೆಂಬರ್ 10 ರಂದು ನಡೆಯಲಿದೆ. ಹಳೆಯ ಲೆಕ್ಕಾಚಾರವನ್ನು ಗಮನಿಸಿದರೆ ಭಾರತ ಇಂಗ್ಲೆಂಡ್ ತಂಡವನ್ನು ಮಣಿಸಿ ಭಾನುವಾರ ನಡೆಯುವ ಫೈನಲ್ ಹಂತಕ್ಕೆ ಬರಲಿದೆ ಎಂದು. ಫೈನಲ್ ಪಂದ್ಯ ಭಾನುವಾರ ನಡೆಯಲಿರುವ ಕಾರಣ ಕ್ರಿಕೆಟ್ ರಸಿಕರು ಪಬ್, ರೆಸ್ಟೋರೆಂಟ್ ಗಳಲ್ಲಿ ಮೋಜು ಮಸ್ತಿ ಮಾಡುತ್ತಾ ಪಂದ್ಯವನ್ನು ವೀಕ್ಷಿಸುತ್ತಾರೆ. ಇದಾದ ನಂತರ ಅವರು ಮನೆಗೆ ತೆರಳಲು ಮದ್ಯಸೇವಿಸಿ ಮನೆಗೆ ತೆರಳುವ ಸಾಧ್ಯತೆಗಳು ಹೆಚ್ಚಾಗಿವೆ. ಇದೀಗ ಇದನ್ನು ತಪ್ಪಿಸಲು ಪೊಲೀಸರು ಮನವಿಯನ್ನು ಮಾಡಿಕೊಂಡಿದ್ದಾರೆ.
The World Cup final is next Sunday. We repeat, it’s next Sunday so DONOT drink & drive today.
Or next Sunday. Or any day. Nope ❌#T20WorldCup
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) November 6, 2022
ಬೆಂಗಳೂರು ಪೊಲೀಸರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ “ಟಿ20 ವಿಶ್ವಕಪ್ ಫೈನಲ್ ಪಂದ್ಯ ಮುಂದಿನ ಭಾನುವಾರ ನಡೆಯಲಿದೆ. ಹೀಗಾಗಿ ಆ ದಿನ ವಾಹನ ಸವಾರರು ಮದ್ಯಪಾನ ಮಾಡಿ, ವಾಹನ ಚಾಲನೆ ಮಾಡಬೇಡಿ. ಮುಂದಿನ ಭಾನುವಾರವಂತಲ್ಲ, ಯಾವ ದಿನವೂ ಕುಡಿದು ವಾಹನ ಚಲಾಯಿಸಬೇಡಿ” ಎಂದು ಮಾನ್ವಿ ಮಾಡಿಕೊಂಡಿದ್ದಾರೆ.
Don't worry sir. Drunk or without drunk, nobody is safe while traveling in Bangalore. Ask government to fix potholes before collecting fine because you "care" for our safety.
— Chirag (@AbcLmn12) November 6, 2022
ಬೆಂಗಳೂರು ಪೋಲೀಸರ ಟ್ವೀಟ್ ಗೆ ನೆಟ್ಟಿಗರು ಸಹ ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದು ಒಬ್ಬ ವ್ಯಕ್ತಿ “ಚಿಂತಿಸಬೇಡಿ ಸರ್. ಬೆಂಗಳೂರಿನಲ್ಲಿ ಪ್ರಯಾಣಿಸುವಾಗ ಕುಡಿದು ಅಥವಾ ಕುಡಿಯದೆ ಯಾರೂ ಸುರಕ್ಷಿತವಾಗಿರುವುದಿಲ್ಲ. ದಂಡವನ್ನು ಸಂಗ್ರಹಿಸುವ ಮೊದಲು ಗುಂಡಿಗಳನ್ನು ಸರಿಪಡಿಸಲು ಸರ್ಕಾರವನ್ನು ಕೇಳಿ ಏಕೆಂದರೆ ನೀವು ನಮ್ಮ ಸುರಕ್ಷತೆಗಾಗಿ “ಕಾಳಜಿ” ವಹಿಸುತ್ತೀರಾ ಅಲಲ್ವೇ ಎಂದು ಟ್ವೀಟ್ ಮಾಡಿದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
