fbpx
ಸಮಾಚಾರ

ಭಾರತದಲ್ಲಿ ವ್ಯಾಪಾರಸ್ಥರು ಕೇವಲ ಒಂದು ತಿಂಗಳಲ್ಲಿ ಮದುವೆಯಿಂದ ಸಂಪಾದಿಸುವ ಹಣದ ಮೌಲ್ಯ ಎಷ್ಟು ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ

ಮದುವೆ ಎಂದರೆ ಸಾಕು ಎಲ್ಲರ ಮುಖದಲ್ಲೂ ಮಂದಹಾಸ ತುಂಬಿರುತ್ತದೆ. ಭಾರತದಲ್ಲಿ ಮದುವೆ ಸಂಭ್ರಮ ಬಹಳಷ್ಟು ಜೋರಾಗಿ ನಡೆಯುತ್ತದೆ. ಇದು ಮದುವೆಗೆ ಸಂಬಂಧಪಟ್ಟ ವ್ಯವಹಾರ ಮಾಡುವ ಉದ್ಯಮಗಳು, ವ್ಯಾಪಾರಸ್ಥರ ಪಾಲಿಗೆ ಚಿನ್ನವಿದ್ದಂತೆ. ಹೀಗಾಗಿ ಭಾರತದಲ್ಲಿ ಮದುವೆ ಸಂಭ್ರಮ ಅಂತ ಬಂದರೆ ಎಷ್ಟರಮಟ್ಟಿಗೆ ಲಾಭವಾಗುತ್ತದೆ ಗೊತ್ತಾ? ಇದರ ಕುರಿತು ಮಾಹಿತಿ ಇಲ್ಲಿದೆ.

ಸಂಶೋಧನೆಯ ಪ್ರಕಾರ ಭಾರತದಲ್ಲಿ ಒಂದು ಅಂದಾಜಿನ ಪ್ರಕಾರ ವಾರ್ಷಿಕ 45 ರಿಂದ 50 ಲಕ್ಷ ಕೋಟಿ ರೂ. ಮದುವೆ ಕಾರ್ಯಕ್ರಮಗಳಿಗೆ ವೆಚ್ಚ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ದೇಶದ 35 ನಗರಗಳಲ್ಲಿ 4,302 ವ್ಯಾಪಾರಿಗಳು, ಸೇವಾ ಸಂಸ್ಥೆಗಳು, ಇವೆಂಟ್‌ ಮ್ಯಾನೇಜ್‌ಮೆಂಟ್‌ಗಳನ್ನು ಸಂದರ್ಶಿಸಿ, ಸಮೀಕ್ಷೆ ನಡೆಸಿರುವ ಒಕ್ಕೂಟ ಮದುವೆ ಮನೆಯಲ್ಲಿ ಗಳಿಸುವ ಒಂದು ಅಂದಾಜಿನ ಮೊತ್ತವನ್ನು ಬಹಿರಂಗಪಡಿಸಿದ್ದಾರೆ.

ನವೆಂಬರ್ ಮತ್ತು ಡಿಸೆಂಬರ್ ನ 15 ದಿನಗಳು ಮದುವೆಗೆ ಸೀಮಿತ ಎಂದು ಹೇಳಬಹುದು. ಏಕೆಂದರೆ ಇದಾದನಂತರ ಒಂದು ತಿಂಗಳುಗಳ ಕಾಲ ಧನುರ್ಮಾಸ ಇರುವ ಕಾರಣ ಯಾವುದೇ ಮದುವೆಗಳು ನಡೆಯುವುದಿಲ್ಲ. ಅಖಿಲ ಭಾರತ ವ್ಯಾಪಾರಸ್ಥರ ಒಕ್ಕೂಟ ಸಂಘ ತಿಳಿಸಿರುವ ಮಾಹಿತಿಯ ಪ್ರಕಾರ ದೇಶದಲ್ಲಿ 32 ಲಕ್ಷ ಮದುವೆಗಳು ನಡೆಯಲಿದ್ದು, ಈ ವಿವಾಹ ಕಾರ್ಯಕ್ರಮಗಳಿಂದ ಒಟ್ಟಾರೆ 3.75 ಲಕ್ಷ ಕೋಟಿ ರೂ. ವ್ಯವಹಾರ ನಡೆಯಲಿದೆ ಎಂದು ತಿಳಿಸಿದ್ದಾರೆ.

ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲೇ ಒಂದು ತಿಂಗಳಲ್ಲಿ 3.5 ಲಕ್ಷ ಮದುವೆ ನಡೆಯಲಿವೆ. ಅಂದಾಜು 75 ಸಾವಿರ ಕೋಟಿ ರೂ. ವಹಿವಾಟು ನಡೆಯುವ ನಿರೀಕ್ಷೆ ಇದೆ ಎಂದು ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್‌ ಖಂಡೇವಾಲಾ ಹೇಳಿದ್ದಾರೆ. ಕಳೆದ ವರ್ಷ ದಿಲ್ಲಿಯಲ್ಲಿ ನಡೆದಿದ್ದ 25 ಲಕ್ಷ ಮದುವೆಗಳಿಂದ 3 ಲಕ್ಷ ಕೋಟಿ ರೂ. ವಹಿವಾಟು ನಡೆದಿತ್ತು ಎಂದು ಅವರು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top