ಕರ್ನಾಟಕದ ಬೆಡಗಿ ಬಹುಭಾಷಾ ನಟಿ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಅಪಾರವಾದ ಅಭಿಮಾನಿಬಳಗವನ್ನು ಸಂಪಾದಿಸಿರುವ ರಶ್ಮಿಕಾ ಮಂದಣ್ಣ ಸದಾ ನಗು ಮುಖದಿಂದ ಇರುವುದನ್ನು ನಾವು ನೋಡಿದ್ದೇವೆ. ಹಲವಾರು ಬಾರಿ ಇವರನ್ನು ಸಹ ಟ್ರೋಲಿಗರು ಬಹಳಷ್ಟು ಟ್ರೊಲ್ ಮಾಡುತ್ತಾರೆ. ಆದರೆ ಎಂದಿಗೂ ಸಹ ಇವರ ಇದರ ಕುರಿತು ಮಾತನಾಡಿರಲಿಲ್ಲ. ಆದರೆ ಇದೀಗ ಮೊದಲ ಬಾರಿ ರಶ್ಮಿಕಾ ಮಂದಣ್ಣ ಟ್ರೋಲಿಗರ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ.
ರಶ್ಮಿಕಾ ಮಂದಣ್ಣ ಅವರನ್ನು ಟ್ರೋಲಿಗರು ಬಹಳಷ್ಟು ಟ್ರೊಲ್ ಮಾಡುತ್ತಿರುತ್ತಾರೆ. ಇದೀಗ ಪದೇ ಪದೇ ಟ್ರೋಲ್‌ಗಳಿಗೆ ಒಳಗಾಗಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಬರೆಯುವ ಮೂಲಕ ಪ್ರತಿಯೊಬ್ಬರಿಗೂ ಉತ್ತರಿಸಿಕೊಂಡಿದ್ದಾರೆ.
View this post on Instagram
ಕಳೆದ ಕೆಲವು ದಿನಗಳಿಂದ ವಾರಗಳಿಂದ ತಿಂಗಳುಗಳಿಂದ ಅಥವಾ ವರ್ಷಗಳಿಂದ ನನಗೆ ಟ್ರೋಲ್ ವಿಚಾರಗಳು ತುಂಬಾನೇ ತೊಂದರೆ ಕೊಡುತ್ತಿದೆ. ನನ್ನ ವೃತ್ತಿ ಜೀವನ ಆರಂಭಿಸಿದ ಕ್ಷಣದಿಂದಲ್ಲೂ ನಾನು ತುಂಬಾನೇ ಟೀಕೆಗಳನ್ನು ಸ್ವೀಕರಿಸುತ್ತಿದ್ದೇನೆ.
ನಾನು ಆಯ್ಕೆ ಮಾಡಿಕೊಂಡಿರುವ ಜೀವನಕ್ಕೆ ಬೆಲೆ ಇದೆ ಎಂಬುದು ನನಗೆ ಗೊತ್ತಿದೆ ಹೀಗಾಗಿ ನಾನು everyone’s cup of tea ಅಲ್ಲ ಅನ್ನೋ ವಿಚಾರ ಸ್ಪಷ್ಟವಾಗಿ ಗೊತ್ತಿದೆ, ಪ್ರತಿಯೊಬ್ಬರು ನನ್ನನ್ನು ಪ್ರೀತಿಸಬೇಕು ಎಂದು ನಿರೀಕ್ಷೆ ಮಾಡುತ್ತಿಲ್ಲ. ಒಪ್ಪಿಕೊಳ್ಳದಿದ್ದರೂ ಪರ್ವಾಗಿಲ್ಲ ಆದರೆ ನೆಗೆಟಿವಿಟಿ ಕೊಡಬೇಡಿ.
ನಾನು ಹೇಳದ ಮಾತುಗಳನ್ನು ಹೇಳಿರುವ ಎಂದು ಹಾಸ್ಯಾ ಮಾಡಿ ವ್ಯಂಗ್ಯ ಮಾಡುವುದು ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿವೆ. ಇದರಿಂದ ಮನಸ್ಸಿಗೆ ನೋವು ಕೊಡುತ್ತಿದೆ ಮತ್ತು ನನ್ನ ಸ್ಥೈರ್ಯವನ್ನು ಕೆಡಿಸುತ್ತಿದೆ.ನನ್ನ ಗಮನಕ್ಕೆ ಬಂದಿರುವ ಪ್ರಕಾರ ನನ್ನ ಕೆಲವೊಂದು ಸಂದರ್ಶನಗಳ ಕ್ಲಿಪ್‌ಗಳನ್ನು ತಪ್ಪಾಗಿ ತೋರಿಸಿ ನನ್ನ ವಿರುದ್ಧ ತಿರುಗಿ ಬೀಳುವಂತೆ ಮಾಡಿದ್ದಾರೆ.
‘ಖಂಡಿತ ನಾನು ನೆಗೆಟಿವ್ ಕಾಮೆಂಟ್‌ಗಳನ್ನು ಸ್ವೀಕರಿಸುತ್ತೀನಿ ಏಕೆಂದರೆ ಅದೇ ನನ್ನ ಶ್ರಮಕ್ಕೆ ಕಾರಣ ಹಠದಿಂದ ಕೆಲಸ ಮಾಡುವ ಹುಮ್ಮಸ್ಸು ನೀಡುತ್ತದೆ ಆದರೆ ಈ ದೇಷ ಬೆಳೆಸುವುದರಲ್ಲಿ ಏನಿದೆ ಅರ್ಥ? ತುಂಬಾ ವರ್ಷಗಳಿಂದ ಇದನ್ನು ನಿರ್ಲಕ್ಷಿಸುವಂತೆ ಹೇಳುತ್ತಿದ್ದಾರೆ ಆದರೆ ಇದರಿಂದ ಏನೂ ಪರಿಹಾರ ಸಿಕ್ಕಿಲ್ಲ ಸಮಯ ಇನ್ನು ಹೆಚ್ಚಿಗೆ ಕೆಟ್ಟದಾಗುತ್ತಿದೆ.
‘ಅಭಿಮಾನಿಗಳ ಸಪೋರ್ಟ್‌ನಿಂದ ನಾನು ವೃತ್ತಿ ಜೀವನದಲ್ಲಿ ಈ ಮಟ್ಟಕ್ಕೆ ಬರಲು ಸಾಧಯವಾಗಿದ್ದು. ಹಾಗೂ ಅದೇ ಪ್ರೀತಿ ನನ್ನ ನೋವನ್ನು ಹೇಳಿಕೊಳ್ಳಲು ಧೈರ್ಯ ಕೊಟ್ಟಿದ್ದು. ಅದೆಷ್ಟೋ ಜನರಿಂದ ನಾನು ಸ್ಪೂರ್ತಿಗೊಂದು ಕೆಲಸ ಮಾಡುತ್ತಿರುವೆ, ಆರಂಭದಲ್ಲಿ ಹೇಗೆ ನಿಮ್ಮನ್ನು ನಾನು ಪ್ರೀತಿಸುತ್ತಿದ್ದೆ ಅದೇ ರೀತಿ ಪ್ರೀತಿ ಮಾಡುತ್ತೀನಿ. ಶ್ರಮದಿಂದ ಕೆಲಸ ಮಾಡಿ ಒಳ್ಳೆ ವ್ಯಕ್ತಿಯಾಗಿ ಗುರುತಿಸಿಕೊಳ್ಳುತ್ತೀನಿ.
ರಶ್ಮಿಕಾ ಅವರ ಈ ಪೋಸ್ಟ್ ಗೆ ಅಭಿಮಾನಿಗಳಿಂದ ಹಿಡಿದು ಸೆಲೆಬ್ರಿಟಿಗಳವರೆಗೂ ಪ್ರತಿಯೊಬ್ಬರೂ ಕೂಡ ಬೆಂಬಲವನ್ನು ಸೂಚಿಸಿದ್ದು, ರಶ್ಮಿಕಾ ಅವರ ಧೈರ್ಯವನ್ನು ಮೆಚ್ಚಿ ಮೆಚ್ಚುಗೆಯ ಮಾತುಗಳನ್ನು ಸಹ ಆಡುತ್ತಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
