fbpx
ಸಮಾಚಾರ

ಲೆಜೆಂಡ್ ಮಗನ ಜೊತೆ ನಟಿಸಲಿದ್ದಾರೆ ಕಾಂತಾರ ಬೆಡಗಿ ಸಪ್ತಮಿ ಗೌಡ ! ಹೀರೋ ಯಾರು ಗೊತ್ತಾ?

ಕಾಂತಾರ ಸಿನಿಮಾ ಇದೀಗ ಎಲ್ಲ ಕಡೆ ಸಕತ್ ಸೌಂಡ್ ಮಾಡುತ್ತಿದೆ. ಒಂದು ಕಡೆ ಅಭಿಮಾನಿಗಳಿಗೆ ರಿಷಬ್ ಶೆಟ್ಟಿ ಅವರ ನಟನೆ ಇಷ್ಟವಾದರೆ ಮತ್ತೊಂದುಕಡೆ ನಾಯಕಿ ಸಪ್ತಮಿ ಗೌಡ ಅವರ ನಟನೆ ಕೂಡ ಇಷ್ಟವಾಗಿದೆ. ಲೀಲಾ ಪಾತ್ರದಲ್ಲಿ ಮಿಂಚಿರುವ ಇವರು ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ಇದೀಗ ಈ ನಟಿಗೆ ಲೆಜೆಂಡ್ ಮಗನ ಜೊತೆ ನಟಿಸುವ ಭಾಗ್ಯ ಸಿಕ್ಕಿದೆ.

ಕೇವಲ ಒಂದು ಸಿನಿಮಾದ ಮೂಲಕ ಸಪ್ತಮಿ ಗೌಡ ಅವರ ಬದುಕೇ ಬದಲಾಗಿದೆ ಎಂದು ಹೇಳಬಹುದು. ಕಾಂತಾರ ಸಿನಿಮಾದ ಸಕ್ಸೆಸ್ ಇವರನ್ನು ದೊಡ್ಡ ಮಟ್ಟಕ್ಕೆ ಕರೆದುಕೊಂಡು ಹೋಗಿದೆ. ಇದೀಗ ಎಲ್ಲಿ ನೋಡಿದರು ಅಭಿಮಾನಿಗಳ ಬಾಯಲ್ಲಿ ಕೇಳಿ ಬರುತ್ತಿರುವುದು ಸಪ್ತಮಿ ಅವರ ಹೆಸರು ಮಾತ್ರ. ಹೀಗಾಗಿ ಇವರಿಗೆ ಸ್ಯಾಂಡಲ್ವುಡ್ ನಲ್ಲಿ ಬಹಳಷ್ಟು ಬೇಡಿಕೆ ಸಹ ಹೆಚ್ಚಾಗಿದೆ. ಇಷ್ಟೆಲ್ಲಾ ಬೇಡಿಕೆಗಳ ಮದ್ಯೆ ಇದೀಗ ಇವರಿಗೆ ರೆಬೆಲ್ ಸ್ಟಾರ್ ಅಂಬರೀಷ್ ಮಗನ ಜೊತೆ ನಟಿಸುವ ಅವಕಾಶ ದೊರಕಿದೆ.

 

 

ರೆಬೆಲ್ ಸ್ಟಾರ್ ಅಂಬರೀಷ್ ಮಗನಾಗಿರುವ ಅಭಿಷೇಕ್ ಇದೀಗ ಕಾಳಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಪೈಲ್ವಾನ್’ ಸಿನಿಮಾದ ನಿರ್ದೇಶಕ ಕೃಷ್ಣ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹೀಗಾಗಿ ಈ ಸಿನಿಮಾದಲ್ಲಿ ನಾಯಕಿಯಾಗಿ ಸಪ್ತಮಿ ಗೌಡ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ಕುರಿತು ಚಿತ್ರತಂಡ ಅಥವಾ ನಿರ್ದೇಶಕರಾಗಲಿ ಯಾರು ಕೂಡ ಅಧಿಕೃತವಾಗಿ ತಿಳಿಸಿಲ್ಲ. ಒಂದು ವೇಳೆ ನಿಜವಾದರೆ ಅಭಿಷೇಕ್ ಅಂಬರೀಷ್ ಜೊತೆ ಸಪ್ತಮಿ ಗೌಡ ಅವರನ್ನು ನೋಡುವ ಭಾಗ್ಯ ಅಭಿಮಾನಿಗಳಿಗೆ ಸಿಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top