ಪ್ರಪಂಚದಲ್ಲಿ ಬೆಲೆಕಟ್ಟಲಾಗಲು ಸಾಧ್ಯವಾಗದೇ ಇರುವ ಒಂದು ವಸ್ತು ಎಂದರೆ ಅದು ಪ್ರೀತಿ. ಅದು ಎಂತವರನ್ನು ಸಹ ಬದಲಾಯಿಸುತ್ತದೆ. ಇದಕ್ಕೆ ಹಲವಾರು ಉದಾಹರಣೆಗಳನ್ನು ಸಹ ನಾವು ನೋಡಿರುತ್ತೇವೆ. ಆದರೆ ಇದೀಗ ನಾವು ಹೇಳುತ್ತಿರುವ ಕಥೆ ಎಲ್ಲಕಿಂತ ವಿಭಿನ್ನ ಎಂದು ಹೇಳಿದರೆ ತಪ್ಪಾಗಲಾರದು.
ಪ್ರೀತಿಗೆ ಕಣ್ಣಿಲ್ಲ. ಪ್ರೀತಿಗೋಸ್ಕರ ಇಂತಹ ತ್ಯಾಗವನ್ನು ಸಹ ಮಾಡುತ್ತಾರೆ ಎಂಬ ಮಾತುಗಳನ್ನು ನಾವು ಕೇಳಿರುತ್ತೇವೆ. ಇದಕ್ಕೆ ಒಂದು ಉದಾಹರಣೆ ಎಂದರೆ ರಾಜಸ್ಥಾನದಲ್ಲಿ ನಡೆದ ಒಂದು ಘಟನೆ. ಹೌದು. ರಾಜಸ್ಥಾನದ ಭರತ್‌ಪುರದ ಶಿಕ್ಷಕರೊಬ್ಬರು ತಾನು ಪುರುಷನಾಗಲು ಹಾಗೂ ತನ್ನ ವಿದ್ಯಾರ್ಥಿನಿಯನ್ನು ಮದುವೆಯಾಗಬೇಕೆಂಬ ಆಸೆಯಿಂದ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಈ ಕುರಿತು ಶಿಕ್ಷಕರಾಗಿ ಬದಲಾಗಿರುವ ಆರವ್ ಕುಂತಲ್ ತಿಳಿಸಿದ್ದಾರೆ.
Bharatpur, Rajasthan | Teacher undergoes gender change surgery to become a male & marry a student
“I always wished to undergo surgery to change my gender. I had my first surgery in December 2019,” says Aarav Kuntal, teacher who changed his gender pic.twitter.com/S70JGrprwr
— ANI MP/CG/Rajasthan (@ANI_MP_CG_RJ) November 8, 2022
ನಾನು ಶಸ್ತ್ರಚಿಕಿತ್ಸೆ ಮಾಡಿಸಲು ಬಯಸಿದ್ದೆ. ಹೀಗಾಗಿ ಮೊದಲ ಬಾರಿಗೆ 2019ರ ಡಿಸೆಂಬರ್‌ನಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದೆ. ಇದಾದ ನಂತರ ಇತ್ತೀಚಿಗೆ ಎರಡನೆಯ ಬಾರಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದೇನೆ. ಇದಾದ ನಂತರ ವಿದ್ಯಾರ್ಥಿಯನ್ನೇ ಪ್ರೀತಿಸಿ ಮದುವೆಯಾಗಿದ್ದೇನೆ ಎಂದು ತಿಳಿಸಿದ್ದಾರೆ.
I loved him from the beginning. Even if he had not done this surgery, I would have married him. I went along with him for the surgery: Kalpana after marrying Aarav pic.twitter.com/SPKnH9TrbW
— ANI MP/CG/Rajasthan (@ANI_MP_CG_RJ) November 8, 2022
ಇದರ ಕುರಿತು ಪ್ರತಿಕ್ರಯಿಸಿದ ಯುವತಿ ” ನಾನು ಮೊದಲಿನಿಂದಲೂ ಅವರನ್ನು ಪ್ರೀತಿಸುತ್ತಿದ್ದೆ. ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಾಗ ನಾನೂ ಅವರೊಂದಿಗೆ ಇದ್ದೆ. ಈ ಸರ್ಜರಿ ಮಾಡಿಸಿಕೊಳ್ಳದೇ ಇದ್ದಿದ್ದರೂ ನಾನು ಅವರನ್ನು ಮದುವೆಯಾಗುತ್ತಿದ್ದೆ ” ಎಂದು ಹೇಳಿದ್ದಾರೆ. ಹೀಗಾಗಿ ಪ್ರೀತಿಗಾಗಿ ಜನರು ಎಂತಹ ತ್ಯಾಗಕ್ಕೂ ಸಹ ಮುಂದಾಗುತ್ತಾರೆ ಎಂಬುದಕ್ಕೆ ಇದೆ ಸಾಕ್ಷಿ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
