ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ ಒಂದು ವರ್ಷ ಕಳೆದಿದೆ. ಇಂದಿಗೂ ಸಹ ಅಪ್ಪು ಅಭಿಮಾನಿಗಳ ಮನಸಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಇಂದಿಗೂ ಸಹ ಅಪ್ಪು ಹೆಸರಿನಲ್ಲಿ ಪ್ರತಿನಿತ್ಯ ಹಲವಾರು ಕಾರ್ಯಕ್ರಮಗಳು ಸಹ ನಡೆಯುತ್ತಿದೆ. ಇದೀಗ ಮೊದಲಬಾರಿಗೆ ಬಾಲಿವುಡ್ ನ ಬಿಗ್ ಬಿ ಎಂದೇ ಪ್ರಖ್ಯಾತಿಗಳಿಸಿರುವ ಅಮಿತಾಬ್ ಬಚ್ಚನ್ ಅಪ್ಪು ಬಗ್ಗೆ ಮಾತನಾಡಿದ್ದಾರೆ.
ಶ್ರೀ. ಅಮಿತಾಭ್ ಬಚ್ಚನ್ ಅವರೇ, ನಿಮ್ಮ ಈ ಭಾವನಾತ್ಮಕ ಮಾತುಗಳಿಗೆ ಮತ್ತು ವಿಶೇಷ ಸಂದೇಶಕ್ಕೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು.
.
Thank you for your gracious words and overwhelming gesture @SrBachchan sir.
We are humbled by your expression.#DrPuneethRajkumar #GandhadaGudi #GGMovie #PowerInU pic.twitter.com/M5wSDtwN1J— Ashwini Puneeth Rajkumar (@Ashwini_PRK) November 9, 2022
ಅಪ್ಪು ಕಂಡ ದೊಡ್ಡ ಕನಸು ಎಂದರೆ ಅದು ಗಂಧದಗುಡಿ ಸಿನಿಮಾ. ಈ ಸಿನಿಮಾಕ್ಕಾಗಿ ಅಪ್ಪು ಬಹಳಷ್ಟು ಶ್ರಮಪಟ್ಟಿದ್ದರು. ಈ ವರ್ಷ ಅಕ್ಟೋಬರ್ 28ರಂದು ‘ಗಂಧದ ಗುಡಿ’ ರಿಲೀಸ್ ಮಾಡಲಾಯಿತು. ಅದಕ್ಕೂ ಮುನ್ನ ಅದ್ದೂರಿಯಾಗಿ ಪ್ರೀ-ರಿಲೀಸ್ ಕಾರ್ಯಕ್ರಮ ನಡೆಯಿತು. ಆ ಕಾರ್ಯಕ್ರಮಕ್ಕೆ ಅಮಿತಾಭ್ ಬಚ್ಚನ್ ಬರಬೇಕಿತ್ತು. ಆದರೆ ಕಾರಣಾಂತರದಿಂದ ಅವರು ಬರಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅಮಿತಾಬ್ ಬಚ್ಚನ್ ಮುಂಬೈನಿಂದಲೇ ಅವರು ಒಂದು ವಿಡಿಯೋ ಸಂದೇಶ ಕಳುಹಿಸಿದ್ದು, ಇದನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಕತ್ ವೈರಲ್ ಆಗುತ್ತಿದೆ.
“ಪುನೀತ್ ರಾಜ್ಕುಮಾರ್ ಅವರನ್ನು ನಾವೆಲ್ಲರೂ ಅಪ್ಪು ಅಂತ ಪ್ರೀತಿಯಿಂದ ಕರೆಯುತ್ತಿದ್ವಿ. ಅವರ ಬಗ್ಗೆ ಭೂತಕಾಲದಲ್ಲಿ ಮಾತನಾಡಲು ಕಷ್ಟ ಆಗುತ್ತದೆ’ ಎಂದು ಬಿಗ್ ಬಿ ಮಾತು ಆರಂಭಿಸಿದ್ದಾರೆ. ‘ಅವರು ಚಿಕ್ಕ ಬಾಲಕನಾಗಿದ್ದಾಗ ನಾನು ಮೊದಲ ಬಾರಿ ಭೇಟಿ ಮಾಡಿದೆ. ಯಾವಾಗ ಭೇಟಿ ಆದರೂ ಕೂಡ ಅವರ ಮುಖದಲ್ಲಿ ಸುಂದರವಾದ ನಗು ಇರುತ್ತಿತ್ತು. ನಮ್ಮಲ್ಲರಿಗೂ ಅವರು ಹತ್ತಿರವಾಗಲು ಆ ನಗುವೇ ಕಾರಣ ಅಂತ ನಾನು ನಂಬಿದ್ದೇನೆ “.
‘ಗಂಧದ ಗುಡಿ ಸಿನಿಮಾದಲ್ಲಿ ಪುನೀತ್ ರಾಜ್ಕುಮಾರ್ ಅವರು ನಟಿಸಿಲ್ಲ. ಅವರು ತಾವಾಗಿಯೇ ಕಾಣಿಸಿಕೊಂಡಿದ್ದಾರೆ. ಸಮೃದ್ಧವಾದ ಕರ್ನಾಟಕದ ಕಾಡನ್ನು ಎಲ್ಲರಿಗೂ ಪರಿಚಯಿಸಿದ್ದಾರೆ. ಅಪ್ಪು ಅವರ ಮ್ಯಾಜಿಕಲ್ ಜರ್ನಿಯಲ್ಲಿ ಎಲ್ಲರೂ ಭಾಗವಹಿಸಿ. ಪರಿಸರದ ಜೊತೆ ಸಾಮರಸ್ಯದಿಂದ ಬದುಕುವ ಬಗ್ಗೆ ಪುನೀತ್ ಅವರು ಈ ಸಾಕ್ಷ್ಯಚಿತ್ರದಲ್ಲಿ ತಿಳಿಸಿಕೊಟ್ಟಿದ್ದಾರೆ. ನಮ್ಮ ಮಕ್ಕಳಿಗಾಗಿ ಇರುವ ಚಿತ್ರ ಇದು. ನಾವೆಲ್ಲರೂ ನಮ್ಮ ಅರಣ್ಯ ಸಂಪತ್ತಿನ ಬಗ್ಗೆ ಹೆಮ್ಮೆ ಪಡುವಂತಹ ಚಿತ್ರ. ಗಂಧದ ಗುಡಿಗೆ ಯಶಸ್ಸು ಸಿಗಲಿ’ ಎಂದು ವಿಡಿಯೋ ಮೂಲಕ ಅಮಿತಾಬ್ ಬಚ್ಚನ್ ಅಪ್ಪು ನಗುವಿನ ಕುರಿತು ಮಾತನಾಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
