fbpx
ಸಮಾಚಾರ

‘ಅವತಾರ್ 2’ ಕನ್ನಡ ಟ್ರೈಲರ್ ಬಿಡುಗಡೆಯಾಗಲು ಕಾರಣವಾಗಿದ್ದು ಕನ್ನಡ ಈ ಸಂಸದರು: ಯಾರು ಗೊತ್ತೇ? ಮುಂದೆ ಓದಿ

ಇಡೀ ವಿಶ್ವವೇ ಕಾತರದಿಂದ ಎದುರು ನೋಡುತ್ತಿರುವ ‘ಅವತಾರ್-2’ ಚಿತ್ರ ಮುಂದಿನ ತಿಂಗಳು 16ನೇ ತಾರೀಕಿನಂದು ತೆರೆಗೆ ಬರುತ್ತಿದೆ. ಬಹುನಿರೀಕ್ಷಿತ ಈ ಸಿನಿಮಾ ಹಲವು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಭಾರತದಲ್ಲಿ ಇಂಗ್ಲಿಷ್​ ಜೊತೆಗೆ ಇತರ ಭಾಷೆಗಳಿಗೆ ಡಬ್​ ಆಗಿ ಈ ಚಿತ್ರ ರಿಲೀಸ್​ ಆಗಲಿದೆ. ಆರಂಭದಲ್ಲಿ ಈ ಸಿನಿಮಾವನ್ನು ಕನ್ನಡದಲ್ಲಿಯೂ ಡಬ್ ಮಾಡಿ ರಿಲೀಸ್ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು.

ಆದರೆ ಇತ್ತೀಚಿಗೆ ಬಿಡುಗಡೆಯಾದ ಟ್ರೈಲರ್ ಕನ್ನಡ ಅವತರಣಿಯಲ್ಲಿ ಬಂದಿರಲಿಲ್ಲ. ಇಂಗ್ಲಿಷ್ ಸೇರಿದಂತೆ ಹಿಂದಿ, ಮಲಯಾಳಂ, ತಮಿಳು, ತೆಲುಗು ಭಾಷೆಗಳ ಅವತಾರಿಣಿಕೆ ಟ್ರೈಲರ್ ಮಾತ್ರ ಬಿಡುಗಡೆಯಾಗಿತ್ತು. ಆದರೆ ಕನ್ನಡ ವರ್ಷನ್ ಟ್ರೈಲರ್ ಬಿಡುಗಡೆಗೊಳಿಸಿರಲಿಲ್ಲ. ಈ ವಿಚಾರ ಕನ್ನಡಿಗರನ್ನ ಕೆರಳಿಸಿತ್ತು. #Avatar2InKannada ಎಂಬುದು ಟ್ರೆಂಡ್​ ಆಗಿತ್ತು.

 

 

“ಈ ಹಿಂದೆ ಬಿಡುಗಡೆ ಮಾಡಿದ್ದ ಪೋಸ್ಟರ್‌ನಲ್ಲಿ ಕನ್ನಡದ ಹೆಸರನ್ನೂ ಸೇರಿಸಲಾಗಿತ್ತು. ಅಲ್ಲದೇ, ಕೆಲವೇ ತಿಂಗಳ ಹಿಂದೆ ಕನ್ನಡ ವರ್ಷನ್‌ನಲ್ಲಿ ಟೀಸರ್ ಕೂಡ ಬಿಡುಗಡೆ ಮಾಡಲಾಗಿತ್ತು. ಆದರೆ ಈಗ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಅದು ಕನ್ನಡಕ್ಕೆ ಡಬ್ ಆಗಿಲ್ಲ. ಅಲ್ಲದೇ, ಪೋಸ್ಟರ್‌ನಲ್ಲಿ ಇದ್ದ ಕನ್ನಡ ಕೂಡ ತೆಗೆಯಲಾಗಿದೆ. ಅಫಿಷಿಯಲ್ ಯೂಟ್ಯೂಬ್ ಖಾತೆಯಲ್ಲಿ ಈ ಮೊದಲು ಇದ್ದ ಕನ್ನಡ ಟೀಸರ್ ಸಹ ಈಗ ಕಾಣಿಸುತ್ತಿಲ್ಲ” ಎಂದು ಕನ್ನಡಿಗರು ಆರೋಪಿಸಿದ್ದರು..

ಈ ಬಗ್ಗೆ ರಾಜ್ಯಸಭಾ ಸಂಸದರಾದ ಜಿಸಿ ಚಂದ್ರೇಖರ್ ಅವರು ಕೂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ಕನ್ನಡಿಗರ ಕೂಗಿಗೆ ಧ್ವನಿಗೆ ಸೇರಿಸಿದ್ದರು. ಕನ್ನಡಿಗರ ಒಕ್ಕರಲ ಬೇಡಿಕೆಗೆ ‘ಅವತಾರ್ 2’ ಚಿತ್ರ ನಿರ್ಮಾಣ ಸಂಸ್ಥೆಯಾದ 20th century studio ಮಣಿದಿದ್ದು ಇದೀಗ ಕನ್ನಡ ಟ್ರೈಲರ್ ಅನ್ನು ಸಹ ಬಿಡುಗಡೆ ಮಾಡಿದೆ. ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್ ನಲ್ಲಿ ಕನ್ನಡ ಟ್ರೈಲರ್ ಅನ್ನು 20th century studio ಹಂಚಿಕೊಂಡಿದ್ದು ಕನ್ನಡಿಗರ ಹರ್ಷಕ್ಕೆ ಕಾರಣವಾಗಿದೆ.

 

 

ಈ ವಿಚಾರವನ್ನು ಸ್ವತಃ ಸಂಸದರೇ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ. “ಡಿಸೆಂಬರ್ 16ರಂದು ಕನ್ನಡದಲ್ಲಿ ಅವತಾರ್ ನೋಡೋಣ! ನಮ್ಮ ಬೇಡಿಕೆಯಾದ #Avatar2inkannada ವನ್ನು ಪುರಸ್ಕರಿಸಿದ
@20thCenturyIN ಅವರಿಗೆ ಧನ್ಯವಾದಗಳು. ಈ ಬೇಡಿಕೆಯನ್ನು ಮುಂದಿಡಲು ನಮ್ಮ ಜೊತೆ ನಿಂತ ಎಲ್ಲಾ ಕನ್ನಡ ಗ್ರಾಹಕರಿಗೂ ಸಿಕ್ಕ ಜಯವಾಗಿದೆ. ಕನ್ನಡಿಗರು ಒಗ್ಗಟ್ಟಾದರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ತೋರಿಸುತ್ತದೆ.” ಎಂದು ಚಂದ್ರಶೇಖರ್ ಅವರು ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top