fbpx
ಸಮಾಚಾರ

ಇಂದಿರಾ ಕ್ಯಾಂಟೀನ್ ಗೆ ತೆರಳಿ ಸಾಮಾನ್ಯರಲ್ಲೇ ಸಾಮಾನ್ಯರಂತೆ ಆಹಾರ ಸೇವಿಸಿದ ಸಂಸದ ಜಿಸಿ ಚಂದ್ರಶೇಖರ್

ಬಡ ಜನರಿಗೆ ಕಡಿಮೆ ಖರ್ಚಿನಲ್ಲಿ ಊಟವನ್ನು ನೀಡಬೇಕು ಎಂಬ ಉದ್ದೇಶದಿಂದ 2017ರಲ್ಲಿ ಆರಂಭವಾದ ಜನಪ್ರಿಯ ‘ಇಂದಿರಾ ಕ್ಯಾಂಟೀನ್’ ಯೋಜನೆ ಎಷ್ಟೋ ಜನರ ಹಸಿವನ್ನ ನೀಗಿಸುತ್ತಿದೆ. ಮೊದಲಿಗೆ ಬೆಂಗಳೂರಿನಲ್ಲಿ ಮಾತ್ರ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿತ್ತು. ನಂತರ ಜಿಲ್ಲಾ ಕೇಂದ್ರಗಳಿಗೆ ಈ ಯೋಜನೆ ವಿಸ್ತರಣೆ ಮಾಡಲಾಗಿತ್ತು.

ಆದರೆ ಈಗಿನ ಬಸವರಾಜ ಬೊಮ್ಮಾಯಿ ಅವರ ಬಿಜೆಪಿ ಸರ್ಕಾರ ಈ ಯೋಜನೆಗೆ ಕತ್ತರಿ ಹಾಕುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಈ ಮೂಲಕ ಸರ್ಕಾರ ಲಕ್ಷಾಂತರ ಮಂದಿ ಜನರ ಊಟಕ್ಕೆ ಕಲ್ಲುಹಾಕುತ್ತಿದೆ. ಈ ಎಲ್ಲಾ ವಿದ್ಯಮಾನಗಳ ಮಧ್ಯೆ ಸಂಸದ ಜಿಸಿ ಚಂದ್ರಶೇಖರ್ ಅವರು ಸಾಮಾನ್ಯರಲ್ಲೇ ಸಾಮಾನ್ಯರಂತೆ ಇಂದಿರಾ ಕ್ಯಾಂಟೀನ್ ಗೆ ತೆರಳಿ ಆಹಾರ ಸೇವಿಸಿದ್ದಾರೆ. ಜೊತೆಗೆ ಅಲ್ಲಿನ ಸಿಬ್ಬಂದಿ, ಗ್ರಾಹಕರ ಜೊತೆಗೆ ಮಾತನಾಡಿ ಅವರ ಕಷ್ಟಗಳನ್ನ ಆಲಿಸಿದ್ದಾರೆ.

 

 

ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ‘ಇಂದಿರಾ ಕ್ಯಾಂಟೀನ್’ ಗೆ ನೆನ್ನೆ ಬೆಳಿಗ್ಗೆ ಮಾನ್ಯ ಸಂಸದ ಜಿಸಿ ಚಂದ್ರಶೇಖರ್ ಅವರು ಭೇಟಿ ನೀಡಿದರು. ಅಷ್ಟೊತ್ತಿಗಾಗಲೇ ಅಲ್ಲಿ ಗ್ರಾಹಕರಿಗೆ ಆಹಾರ ನೀಡಲಾಗುತ್ತಿತ್ತು. ಸಾಮಾನ್ಯರಂತೆ ಸರತಿ ಸಾಲಿನಲ್ಲಿ ಬಂದು ಟಿಕೆಟ್ ಪಡೆದು ಕೌಂಟರ್ ನಲ್ಲಿ ಆಹಾರ ಹಾಕಿಸಿಕೊಂಡು ಜನರ ಮಧ್ಯೆಗೆ ತಿಂಡಿ ಸೇವಿಸಿದರು.

 

 

ಈ ವೇಳೆ ಅಲ್ಲಿನ ಜನ ಸಮಾನ್ಯರು ಇಂದಿರಾ ಕ್ಯಾಂಟೀನ್ ಮುಚ್ಚುವ ಕುರಿತು ಹರಿದಾಡುತ್ತಿರುವ ಸುದ್ದಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ” ಇಂದಿರಾ ಕ್ಯಾಂಟೀನ್ ನಿಂದ ನಮಗೆ ಬಹಳ ಉಪಯೋಗವಾಗುತ್ತಿದೆ, ನಾವು ಪ್ರತಿನಿತ್ಯ ಇಲ್ಲೆಯೇ ಆಹಾರ ಸೇವಿಸುತ್ತೇವೆ. ಇದನ್ನು ನಿಲ್ಲಿಸದರೆ ನಮಗೆ ಬಹಳ ತೊಂದರೆಯಾಗುತ್ತದೆ” ಎಂದು ಮಹಿಳೆಯರು ಚಂದ್ರಶೇಖರ್ ಅವರ ಬಳಿ ಅಳಲು ತೋಡಿಕೊಂಡರು. ಇನ್ನು ಸಿಬ್ಬಂದಿಯೊಬ್ಬರು ಮಾತನಾಡಿ ತಮಗೆ ವೇತನ ನೀಡಿಕೆಯಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಹೇಳಿಕೊಂಡರು. “ಕಳೆದ ಐದಾರು ತಿಂಗಳಿನಿಂದ ಬಿಬಿಎಂಪಿ ಬಿಲ್ ಆಗಿಲ್ಲ,, ನಮಗೆ ಸಂಬಳ ಸಿಗದೇ ಬಹಳ ತೊಂದರೆಯಾಗುತ್ತಿದೆ” ಎಂದು ಹೇಳಿದರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top