ದೋಸೆ ಎಂದರೆ ಪ್ರತಿಯೊಬ್ಬರಿಗೂ ಇಷ್ಟ. ಅದರಲ್ಲೂ ಮಸಾಲಾ ದೋಸೆ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಆದರೆ ಯಾವತ್ತಾದರೂ ನೀವು ಚಿನ್ನದ ದೋಸೆ ತಿಂದಿದ್ದೀರಾ? ಅಥವಾ ಚಿನ್ನದ ದೋಸೆ ಬೆಲೆ ಎಷ್ಟು ಎಂದು ಯೋಚಿಸಿದ್ದೀರಾ? ಇಲ್ಲವಾದರೆ ನಮ್ಮ ಕರ್ನಾಟಕದಲ್ಲಿ ಚಿನ್ನದ ದೋಸೆ ಎಲ್ಲಿ ಸಿಗುತ್ತದೆ ಮತ್ತು ಇದರ ಬೆಲೆ ಎಷ್ಟು ಎಂಬುದರ ಕುರಿತು ತಾವು ತಿಳಿಸಿಕೊಡುತ್ತೇವೆ.
ನಮ್ಮ ಕರ್ನಾಟಕದ ಬೆಂಗಳೂರು ನಗರದಲ್ಲಿ ಚಿನ್ನದ ದೋಸೆ ಸಿಗುತ್ತದೆ. ಗಾಂಧಿನಗರದಲ್ಲಿರುವ ಉಡುಪಿ ಶ್ರೀಕೃಷ್ಣ ಭೋಜನಾಲಯದಲ್ಲಿ ಈ ಚಿನ್ನದ ದೋಸೆ ಸಿಗಲಿದ್ದು ಇದರ ಬೆಲೆ ಬರೋಬ್ಬರಿ 1 ಸಾವಿರ ರೂಪಾಯಿ. ಎಣ್ಣೆ ಬಳಸದೆ ತುಪ್ಪದಿಂದ ದೋಸೆ ತಯಾರಿಸಿ, ಅದರ ಮೇಲ್ಭಾಗದಲ್ಲಿ ಚಿನ್ನದ ಹಾಳೆ ಅಂಟಿಸಲಾಗುತ್ತದೆ. ಇದಕ್ಕೆ ‘ಗೋಲ್ಡನ್ ಫಾಯಿಲ್ ಎಡಿಬಲ್ ಮಸಾಲ ದೋಸೆ’ ಎಂದು ಹೆಸರಿಡಲಾಗಿದೆ.
ಬೆಂಗಳೂರಿನ ಉಡುಪಿ ಶ್ರೀಕೃಷ್ಣ ಭೋಜನಾಲಯದಲ್ಲಿ ಈ ಪ್ರಯತ್ನ ನಡೆಯುತ್ತಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಇದರ ರುಚಿ ಪ್ರತಿಯೊಬ್ಬರಿಗೂ ಮತ್ತೆ ಬರುವಂತೆ ಮಾಡುತ್ತಿದ್ದು, ಇವರ ತಮ್ಮ ಸ್ನೇಹಿತರು, ಬಂಧುಗಳು ಪ್ರತಿಯೊಬ್ಬರಿಗೂ ಸಹ ಇದನ್ನು ಸವಿಯಲು ಹೇಳುತ್ತಿದ್ದಾರೆ. ಹೀಗಾಗಿ ಈ ಚಿನ್ನದ ದೋಸೆಗೆ ಬೇಡಿಕೆ ಹೆಚ್ಚಾಗುತ್ತಿದೆ. ಗುಜರಾತ್‌ನಿಂದ ಚಿನ್ನದ ಹಾಳೆ ತರಿಸಲಾಗುತ್ತದೆ. ಒಮ್ಮೆ 10ರಿಂದ 20 ಚಿನ್ನದ ಹಾಳೆ ಬರುತ್ತವೆ. ದೋಸೆ ಬಿಸಿ ಇರುವಾಗಲೇ ಅದರ ಮೇಲೆ ಹಾಳೆ ರೀತಿಯಲ್ಲಿರುವ ಚಿನ್ನದ ಹಾಳೆ ಅಂಟಿಸಲಾಗುತ್ತದೆ.
ಇದೀಗ ಬೆಂಗಳೂರಿನಲ್ಲಿ ತಯಾರಾಗುತ್ತಿರುವ ಚಿನ್ನದ ದೋಸೆಯಿಂದ ಪ್ರೇರೇಪಿತರಾಗಿ ತುಮಕೂರಿನ ಒಂದು ಹೋಟೆಲ್ ಕೂಡ ಇದೀಗ ಚಿನ್ನದ ದೋಸೆಯನ್ನು ತಯಾರಿಸುತ್ತಿದ್ದಾರೆ. ಇದರ ಕುರಿತು ಮಾತನಾಡಿದ ಹೋಟೆಲ್ ಮಾಲೀಕರಾದ ಕಾರ್ತಿಕ್ “ಬೆಂಗಳೂರಿನ ಹೋಟೆಲ್ ಒಂದರಲ್ಲಿ ಈ ರೀತಿಯ ಚಿನ್ನದ ದೋಸೆ ತಯಾರಿಸುತ್ತಿದ್ದರು. ಅದರ ಪ್ರೇರಣೆಯಿಂದಾಗಿ ನಾವು ಸಹ ಚಿನ್ನದ ದೋಸೆ ಮಾಡುತ್ತಿದ್ದೇವೆ. ಇದನ್ನು ಸೇವಿಸುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಆಗುವುದಿಲ್ಲ. ಬೇಡಿಕೆ ಬಂದಾಗ ಮಾತ್ರ ಮಾಡಿಕೊಡಲಾಗುತ್ತದೆ ” ಎಂದು ತಿಳಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
