fbpx
ಸಮಾಚಾರ

ಕರ್ನಾಟಕದಲ್ಲಿ ಮತ್ತೊಂದು ರೆಕಾರ್ಡ್ ಬ್ರೇಕ್ ಮಾಡಿದ ಕಾಂತಾರ! ಏನದು ಗೊತ್ತಾ?

ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾ ಒಂದರಮೇಲೊಂದರಂತೆ ಹಲವಾರು ರೆಕಾರ್ಡ್ ಗಳನ್ನು ಧೂಳಿಪಟ ಮಾಡುತ್ತಿದೆ. ಇದೀಗ ಕಾಂತಾರ ಸಿನಿಮಾದಲ್ಲಿ ಮತ್ತೊಂದು ರೆಕಾರ್ಡ್ ಕೇಳಿಬರುತ್ತಿದ್ದು, ಇದು ಇಲ್ಲಿಯವರೆಗೂ ಕರ್ನಾಟಕದಲ್ಲಿ ಯಾವ ಸಿನಿಮಾ ಕೂಡ ಮಾಡಿಲ್ಲ.

ಕಾಂತಾರ ಸಿನಿಮಾ ಕರ್ನಾಟಕದಲ್ಲಿ ಒಟ್ಟು ಬರೋಬ್ಬರು ಒಂದು ಕೋಟಿ ಟಿಕೆಟ್ ಗಳು ಮಾರಾಟವಾಗಿದೆ. ಈ ಮೂಲಕ ಹಲವಾರು ದಾಖಲೆಗಳನ್ನು ಕಾಂತಾರ ಸಿನಿಮಾ ಮುರಿದುಹಾಕಿದೆ. ಇದು ಕಿಜಿಎಫ್ ಸಿನಿಮಾವನ್ನು ಮೀರಿಸಿದ್ದು, ಇನ್ನು ಮುಂದಕ್ಕೆ ಕಾಂತಾರ ಸಿನಿಮಾ ಎಷ್ಟು ರೆಕಾರ್ಡ್ ಗಳನ್ನು ಧೂಳಿಪಟ ಮಾಡುತ್ತದೆ ಎಂದು ಕಾದು ನೋಡಬೇಕು.

ಕಾಂತಾರ ಸಿನಿಮಾ ಕರ್ನಾಟಕ ಮಾತ್ರವಲ್ಲದೆ ಬೇರೆ ರಾಜ್ಯದಲ್ಲೂ ಸಹ ದೊಡ್ಡ ಮಟ್ಟಿಗೆ ಸದ್ದು ಮಾಡುತ್ತಿದ್ದು, ಅಭಿಮಾನಿಗಳಿಂದ ಇಡಿದು ಸೆಲೆಬ್ರಿಟಿಗಳವರೆಗೂ ಪ್ರತಿಯೊಬ್ಬರೂ ಸಹ ಈ ಸಿನಿಮಾವನ್ನು ಹೊಗಳುತ್ತಿದ್ದಾರೆ. ಗಳಿಕೆಯ ವಿಷಯ ಬಂದರೆ ಈಗಾಗಲೇ ಈ ಸಿನಿಮಾ 300 ಕೋಟಿಗಿಂತ ಅಧಿಕ ಹಣ ಗಳಿಸಿದ್ದು, ಇದರ ಗಳಿಕೆ ಮತ್ತಷ್ಟು ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top