fbpx
ಸಮಾಚಾರ

ನನ್ನ ಹೆಂಡತಿಗೆ ಮೊಟ್ಟೆ ಕೂಡ ಬೇಯಿಸೋಕೆ ಬರಲ್ಲ! ಹೆಂಡತಿ ಸೀದಿಸಿದ ಮೊಟ್ಟೆ ಫೋಟೋ ಹಂಚಿಕೊಂಡ ರವೀಂದ್ರ

ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಂಚಲ ಸೃಷ್ಟಿಸಿದ ಜೋಡಿ ಎಂದರೆ ಅದು ತಮಿಳಿನ ರವೀಂದ್ರ ಚಂದ್ರಶೇಖರ್ ಮತ್ತು ಮಹಾಲಕ್ಷ್ಮಿ ಜೋಡಿ. ಇವೆರಡು ಜೋಡಿ ಮದುವೆಯಾದಾಗಿನಿಂದಲೂ ಒಂದಲ್ಲ ಒಂದು ಸುದ್ದಿಯಲ್ಲಿದ್ದರು. ಹೀಗಾಗಿ ಜನರು ಇವರನ್ನು ಬಹಳಷ್ಟು ಟ್ರೊಲ್ ಮಾಡುತ್ತಿದ್ದರು. ಇದೀಗ ಈ ಜೋಡಿ ಮೊಟ್ಟೆ ವಿಷಯಕ್ಕೆ ಮತ್ತೆ ಸುದ್ದಿಯಲ್ಲಿದ್ದಾರೆ.

ಮಹಾಲಕ್ಷ್ಮಿಯನ್ನು ಮದುವೆಯಾದ ನಂತರ ಶೂಟಿಂಗ್ ಸ್ಥಳಕ್ಕೆ ಮನೆಯಿಂದಲೇ ಊಟ ತಗೆದುಕೊಂಡು ಹೋಗಿದ್ದರು ರವೀಂದ್ರ. ಆನಂತರ ಬೇರೆ ಬೇರೆ ಹೋಟೆಲ್ ಗಳಲ್ಲಿ ಹೆಂಡತಿಯನ್ನು ಕರೆದುಕೊಂಡು ಹೋಗಿ ಊಟ ಕೊಡಿಸಿದ್ದರು. ಆದರೆ ಇವರಿಗೆ ಹೋಟೆಲ್ ರುಚಿಕ್ಕಿಂತ ತಮ್ಮ ಹೆಂಡತಿಯ ಕೈ ರುಚಿ ನೋಡಬೇಕೆಂಬ ಆಸೆಯಾಯಿತು. ಹೀಗಾಗಿ ತಮ್ಮ ಹೆಂಡತಿಗೆ ಮೊಟ್ಟೆ ಬೇಯಿಸಲು ಹೇಳಿದ್ದಾರೆ. ಆದರೆ ಮಹಾಲಕ್ಷ್ಮಿ ಬೇಯಿಸಿದ ಮೊಟ್ಟೆ ಇದೀಗ ಎಲ್ಲ ಕಡೆ ಸಕತ್ ವೈರಲ್ ಆಗುತ್ತಿದೆ.

ರವೀಂದ್ರ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೆಂಡತಿ ಬೇಯಿಸಿದ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಮೊಟ್ಟೆ ಸಂಪೂರ್ಣವಾಗಿ ಸೀದುಹೋಗಿದೆ. ಹೀಗಾಗಿ ತಮ್ಮ ಹೆಂಡತಿ ಮಾಡಿದ ಮೊಟ್ಟೆ ಕುರಿತು ಅವರು ನಗುನಗುತ್ತಾ ಪೋಸ್ಟ್ ಕೂಡ ಹಂಚಿಕೊಂಡಿದ್ದಾರೆ.

ಎರಡು ಮೊಟ್ಟೆಗಳನ್ನು ಬೇಯಿಸಲು ಇಟ್ಟಿದ್ದ ಮಹಾಲಕ್ಷ್ಮಿ, ಅದನ್ನು ಸರಿಯಾಗಿ ನೋಡಿಕೊಳ್ಳದೇ ಇರುವ ಕಾರಣಕ್ಕಾಗಿ ಮೊಟ್ಟೆಗಳು ಸೀದು ಹೋಗಿವೆ. ಅವುಗಳನ್ನು ಫೋಟೋ ತಗೆದಿರುವ ರವೀಂದ್ರ, ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಪತ್ನಿಯ ಕುಕ್ಕಿಂಗ್ ಸ್ಕಿಲ್ಸ್ ಬಗ್ಗೆ ತಮಾಷೆಯಾಗಿಯೇ ಮಾತನಾಡಿದ್ದಾರೆ. ಮೊಟ್ಟೆ ಸೀದು ಹೋಗಿದ್ದನ್ನು ನಾನು ಜೀವಮಾನದಲ್ಲೇ ನೋಡಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top