fbpx
ಸಮಾಚಾರ

ಸಾನಿಯಾ ಮಿರ್ಜಾ ಮತ್ತು ಶೋಯಿಬ್ ಮಲಿಕ್ ಡಿವೋರ್ಸ್ ವಿಚಾರದ ಕುರಿತು ಸ್ಪೋಟಕ ಮಾಹಿತಿ ಹೊರಹಾಕಿದ ಸಾನಿಯಾ ಫ್ರಂಡ್ಸ್! ಏನದು ಗೊತ್ತಾ?

ಹಲವಾರು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಒಂದು ಸುದ್ದಿ ಹರಿದಾಡುತ್ತಿದೆ. ಅದೇನೆಂದರೆ ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನ್ ತಂಡದ ಆಟಗಾರ ಶೋಯಿಬ್ ಮಲಿಕ್ ದಂಪತಿ ವಿಚ್ಚೇದನ ಪಡೆಯುತ್ತಿದ್ದಾರೆ ಎಂದು. ಈ ವಿಷಯದ ಕುರಿತು ಪ್ರತಿಯೊಬ್ಬರಿಗೂ ಗೊಂದಲವಿತ್ತು. ಆದರೆ ಇದೀಗ ಸಾನಿಯಾ ಮಿರ್ಜಾ ಅವರ ಸ್ನೇಹಿತರ ಇದರ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಸಾನಿಯಾ ಮಿರ್ಜಾ ಮಾಡಿದಂತ ಇನ್ಸ್ಟಾಗ್ರಾಮ್ ಪೋಸ್ಟ್ ಹಲವಾರು ಅನುಮಾನಗಳನ್ನು ಹುಟ್ಟಿಹಾಕಿತ್ತು. ಆದರೆ ಇದರ ಕುರಿತು ಸಾನಿಯಾ ಮಿರ್ಜಾ ಆಗಲಿ ಅಥವಾ ಶೋಯಿಬ್ ಮಲಿಕ್ ಆಗಲಿ ಸ್ಪಷ್ಟನೆ ನೀಡಿರಲಿಲ್ಲ. ಆದರೆ ಇದೀಗ ಇವರಿಬ್ಬರ ಸ್ನೇಹಿತರು ಇದರ ಕುರಿತು ಮಾತನಾಡಿದ್ದಾರೆ. ಇವರ ಸ್ನೇಹಿತರ ಪ್ರಕಾರ ಇವರಿಬ್ಬರು ಈಗಾಗಲೇ ಒಂದು ನಿರ್ಧಾರಕ್ಕೆ ಬಂದಿದ್ದು, ಡಿವೋರ್ಸ್ ಪಡೆಯಲು ತಯಾರಿ ನಡೆಸುತ್ತಿದ್ದಾರೆ. ಈಗಾಗಲೇ ಡಿವೋರ್ಸ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಅಧಿಕೃತ ಮಾಹಿತಿ ತಿಳಿಸಲಿದ್ದಾರೆ ಎಂದು ಹೇಳಿದ್ದಾರೆ.

 

 

View this post on Instagram

 

A post shared by Sania Mirza (@mirzasaniar)

 

ಇದಲ್ಲದೆ ಶೋಯಿಬ್ ಮಲಿಕ್ ಅವರ ಪಾಕಿಸ್ತಾನ್ ಕ್ರಿಕೆಟ್ ಮ್ಯಾನೇಜ್ಮೆಂಟ್ ಸದಸ್ಯರು ಕೂಡ ಇದನ್ನು ಖಚಿತಪಡಿಸಿದ್ದಾರೆ. ಇವರಿಬ್ಬರು ಬೇರ್ಪಟ್ಟು ಈಗಾಗಲೇ ವಿಚ್ಚೇದನ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಸಾನಿಯಾ ಇದೀಗ ದುಬೈ ನಲ್ಲಿ ನೆಲೆಸಿದ್ದು, ಶೋಯಿಬ್ ಮಲಿಕ್ ಪಾಕಿಸ್ತಾನದಲ್ಲಿದ್ದಾರೆ. ಇತ್ತೀಚಿಗೆ ತಮ್ಮ ಮಗನ ಹುಟ್ಟುಹಬ್ಬದ ಸಂದರ್ಭದಲ್ಲಿ ಶೋಯಿಬ್ ಸಾನಿಯಾ ಅವರನ್ನು ದುಬೈನಲ್ಲಿ ಭೇಟಿಮಾಡಿದ್ದರು.

 

 

View this post on Instagram

 

A post shared by Shoaib Malik (@realshoaibmalik)

 

ಹೀಗಾಗಿ ಇವರಿಬ್ಬರ ಡಿವೋರ್ಸ್ ವಿಷಯದ ಕುರಿತು ಯಾರಿಗೂ ಸಹ ಸ್ಪಷ್ಟನೆ ಇಲ್ಲ. ಆದರೆ ಇಬ್ಬರು ಬೇರ್ಪಟ್ಟಿದ್ದಾರೆ ಎಂಬ ಮಾತುಗಳು ಇವರ ಆಪ್ತ ಮೂಲಗಳಿಂದ ತಿಳಿದುಬರುತ್ತಿದೆ. ಹೀಗಾಗಿ ಇವೆಲ್ಲ ವಿಷಯಗಳಿಗೆ ಸಾನಿಯಾ ಮಿರ್ಜಾ ಅಥವಾ ಶೋಯಿಬ್ ಮಲಿಕ್ ಅವರು ಸ್ಪಷ್ಟನೆ ನೀಡುವವರೆಗೂ ಕಾಯಬೇಕು ಅಷ್ಟೇ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top