ಇತ್ತೀಚಿನ ದಿನಗಳಲ್ಲಿ ನಮ್ಮ ಭಾರತೀಯರು ಹಲವಾರು ಸಾದನೆಗಳನ್ನು ಸಹ ಮಾಡುತ್ತಿದ್ದು, ಹಲವಾರು ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಅಮೇರಿಕಾದಲ್ಲಿ ನಡೆಯುತ್ತಿದೆ ಮಧ್ಯಂತರ ಚುನಾವಣೆಯಲ್ಲಿ ಐವರು ಭಾರತೀಯ ಮೂಲದವರು ಆಯ್ಕೆಯಾಗುವ ಮೂಲಕ ಮತ್ತೊಂದು ಇತಿಹಾಸವನ್ನು ಸೃಷ್ಟಿಸಿದ್ದಾರೆ.
ಆಡಳಿತ ಪಕ್ಷ ಡೆಮಾಕ್ರಟಿಕ್‌ನ ಅಭ್ಯರ್ಥಿಯಾಗಿ , ರಾವ್ ಖನ್ನಾ, ರಾಜ ಕೃಷ್ಣಮೂರ್ತಿ, ಶ್ರೀ ಥಾಣೇದಾರ್, ಪ್ರಮೀಳಾ ಜಯಪಾಲ್ ಮತ್ತು ಅಮಿ ಬೇರಾ ಅವರು ಸಂಸತ್ ಪ್ರತಿನಿಧಿಗಳಾಗಿ ಚುನಾಯಿತರಾದವರು. ಅಚ್ಚರಿಯ ವಿಷಯವೆಂದರೆ ಇದರಲ್ಲಿ ನಮ್ಮ ಕರ್ನಾಟಕದ ಒಬ್ಬರು ಆಯ್ಕೆಯಾಗಿದ್ದಾರೆ.
ಮಿಚಿಗನ್ ಕ್ಷೇತ್ರದಿಂದ ಆಯ್ಕೆ ಆಗಿರುವ ಶ್ರೀ ಥಾಣೆದಾರ್ ಅವರು ಮೂಲತಃ ಕರ್ನಾಟಕದ ಬೆಳಗಾವಿ ಮೂಲದವರಾಗಿದ್ದಾರೆ. ಇವರು ರಿಬ್ಲಿಕನ್ ಪಕ್ಷದ ಮಾರ್ಟೆಲ್ ಬಿವಿಂಗ್ಸ್ ಅವರನ್ನು ಸೋಲಿಸಿ, ಮಿಚಿಗನ್‍ನಿಂದ ಆಯ್ಕೆಯಾದ ಮೊದಲ ಭಾರತೀಯ ಮೂಲದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
My name is Nabeela Syed. I’m a 23-year old Muslim, Indian-American woman. We just flipped a Republican-held suburban district.
And in January, I’ll be the youngest member of the Illinois General Assembly.
— Nabeela Syed (@NabeelaforIL) November 9, 2022
ಇಷ್ಟೇ ಅಲ್ಲದೆ ಅಮೇರಿಕಾ ರಾಜ್ಯದ ಶಾಸನ ಸಭೆಯಲ್ಲಿ ಸಹ ನಮ್ಮ ಭಾರತೀಯರು ಮೇಲುಗೈ ಸಾಧಿಸಿದ್ದಾರೆ. ಅರವಿಂದ್ ವೆಂಕಟ್, ತಾರಿಕ್ ಖಾನ್, ಸಲ್ಮಾನ್ ಭೋಜಣಿ, ಸುಲೇಮಾನ್ ಲಾಲಣಿ, ಸ್ಯಾಮ್ ಸಿಂಗ್, ರಾಜೀವ್ ಪುರಿ, ನಬೀಲಾ ಸೈಯದ್, ಮೇಘನ್ ಶ್ರೀನಿವಾಸ್, ಕೆವಿನ್ ಓಲಿಕ್ಕಲ್, ನಬ್ಲಿಯಾ ಇಸ್ಲಾಮ್, ಫಾರೂಕ್ ಮುಘಲ್ ಮುಂತಾದವರು ಆಯ್ಕೆಯಾಗಿದ್ದಾರೆ.
ಭಾರತೀಯ ಮೂಲದ ನಬೀಲಾ ಸೈಯದ್ ಅವರು ಇಲಿನಾಯ್ಸ್ ಜನರಲ್ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಕೇವಲ 32 ವರ್ಷವಾಗಿರುವ ಇವರಿಗೆ ಅತ್ಯಂತ ಕಿರಿಯ ಸದಸ್ಯೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
