ಟ್ವಿಟ್ಟರ್ ಬಳಕೆಯ ಬ್ಲೂ ಟಿಕ್‌ನೊಂದಿಗೆ ಮಾಸಿಕ ಚಂದಾದಾರಿಕೆ ಯೋಜನೆಯನ್ನು ಪ್ರಾರಂಭಿಸಿದೆ. ಪ್ರತಿ ತಿಂಗಳು 719 ರೂ. ಪಾವತಿಸುವ ಮೂಲಕ ‘ಟ್ವಿಟ್ಟರ್ ಬ್ಲೂ’ ಚಂದಾದಾರಿಕೆ ಪಡೆಯಬಹುದು ಎಂದು ತಿಳಿದುಬಂದಿದೆ.
Twitter Blue in india costs 719/- per month. pic.twitter.com/HKTtBbO00p
— Gaurav Agrawal (@Agrawalji_Tech) November 10, 2022
ಗೌರವ್ ಅಗರ್ವಾಲ್, ಭಾರತ ಮೂಲದ ಟ್ವಿಟರ್ ಬ್ಲೂ ಚಂದಾದಾರರು ರೂ 719 ಪಾವತಿಸುವ ಮೂಲಕ ಪಾವತಿಸಿದ ನೀಲಿ ಚೆಕ್‌ಮಾರ್ಕ್ ಅನ್ನು ಪಡೆದುಕೊಂಡಿದ್ದಾರೆ. ಭಾರತದಲ್ಲಿ ಆರಂಭೀಕವಾಗಿ ‘ಟ್ವಿಟ್ಟರ್ ಬ್ಲೂ’ ಚಂದಾದಾರಿಕೆ ಪಡೆಯುವ ಆಯ್ಕೆಯು ಕೆಲವೇ ಟ್ವಿಟ್ಟರ್ ಬಳಕೆದಾರರಿಗೆ ಲಭ್ಯವಾಗಿರುವ ನಿರೀಕ್ಷೆ ಇದೆ. ಅದರಲ್ಲೂ ಮೊದಲು iOS ಬಳಕೆದಾರರಿಗೆ ಮಾತ್ರ ‘ಟ್ವಿಟ್ಟರ್ ಬ್ಲೂ’ ಚಂದಾದಾರಿಕೆ ದೊರೆತಿದೆ ಎಂದು ಹೇಳಲಾಗಿದೆ.
ವಿಶ್ವದ ನಂಬರ್ 1 ಶ್ರೀಮಂತ ಎಲಾನ್ ಮಸ್ಕ್, ಟ್ವಿಟರ್ ಖರೀದಿ ಬೆನ್ನಲ್ಲೇ ಬ್ಲೂಟಿಕ್ ಪಡೆಯಲು ಇನ್ಮುಂದೆ ಹಣ ಪಾವತಿಸಬೇಕಾಗುತ್ತದೆ ಎಂದು ಘೋಷಣೆ ಮಾಡಿದ್ದರು. ಎಲೋನ್ ಮಸ್ಕ್ ಅವರ ಉದ್ದೇಶವು ಹೆಚ್ಚಿನ ಆದಾಯವನ್ನು ಗಳಿಸುವುದು ಆಗಿದೆ.
ಭಾರತದಾದ್ಯಂತ ಬ್ಲೂ ಟಿಕ್ ಚಂದಾದಾರಿಕೆಗಳ ಸೇವೆಯ ಆರಂಭಕ್ಕೂ ಮುಂಚಿತವಾಗಿ, ಭಾರತೀಯ ಸರ್ಕಾರದ ಟ್ವಿಟ್ಟರ್ ಖಾತೆಗಳನ್ನು “ಅಧಿಕೃತ” ಎಂದು ಲೇಬಲ್ ಮಾಡಲು ಪ್ರಾರಂಭಿಸಿದೆ. ವಿವಿಧ ಭಾರತೀಯ ಸರ್ಕಾರಿ ಸಂಸ್ಥೆಗಳ ಟ್ವಿಟರ್ ಹ್ಯಾಂಡಲ್‌ಗಳಲ್ಲಿ, “ಅಧಿಕೃತ” ಲೇಬಲ್ ಅನ್ನು ಗಮನಿಸಲಾಗಿದೆ. ಉದಾಹರಣೆಗೆ, ಪ್ರಧಾನಿ ಕಾರ್ಯಾಲಯ, ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಟ್ವಿಟ್ಟರ್ ಖಾತೆ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಟ್ವಿಟರ್ ಖಾತೆ ಕೂಡ “ಅಧಿಕೃತ ಲೇಬಲ್” ಅನ್ನು ಹೊಂದಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
