fbpx
ಸಮಾಚಾರ

“ಅಲೆದು ಅಲೆದು ಸುಸ್ತಾಯ್ತು, ಲಂಚ ಕೇಳುತ್ತಿದ್ದಾರೆ, ವಿಷ ಕುಡಿಯುತ್ತೇವೆ, ದಯಾಮರಣ ನೀಡಿ’: ರಾಷ್ಟ್ರಪತಿಗೆ ಪತ್ರ ಬರೆದ ಶಿವಮೊಗ್ಗದ ದಂಪತಿ

ಸರ್ಕಾರೀ ಅಧಿಕಾರಿಗಳ ಲಂಚಬಾಕತನಕ್ಕೆ ಬೇಸತ್ತು ಶಿವಮೊಗ್ಗ ದಂಪತಿಯೊಂದು ರಾಷ್ಟ್ರಪತಿಗಳ ಬಳಿ ದಯಾಮರಣಕ್ಕೆ ಬೇಡಿ ಅರ್ಜಿ ಹಾಕಿದೆ. ಸಾಗರ ತಾಲೂಕು ಖಂಡಿಕಾ ಗ್ರಾಮ ಪಂಚಾಯತಿಯ ಶ್ರೀಕಾಂತ್ ನಾಯ್ಕ್-ಸುಜಾತ ನಾಯ್ಕ್ ದಂಪತಿ ದಯಾಮರಣ ದಯಪಾಲಿಸುವಂತೆ ಮನವಿ ಮಾಡಿದ್ದಾರೆ.

ಈ ದಂಪತಿ ತಮ್ಮ ಜಮೀನಿನಲ್ಲಿ ಲೇಔಟ್ ನಿರ್ಮಾಣ ಮಾಡಿದ್ದು, ಈಗಾಗಲೇ ಗ್ರಾಮ ಪಂಚಾಯತ್​ಗೆ ಹಣ ಕಟ್ಟಿದ್ದಾರೆ. ಇದೀಗ ತಾಲೂಕು ಪಂಚಾಯತ್​ನ ಹಿರಿಯ ಅಧಿಕಾರಿಯೊಬ್ಬರು 10 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದು, ಮತ್ತೋರ್ವ​ ಅಧಿಕಾರಿಯ ಮೂಲಕ ಒತ್ತಡ ಹಾಕುತ್ತಿದ್ದಾರೆ ಎಂದು ದೂರಿದ್ದಾರೆ.

ದಂಪತಿಗಳು ವಿಷ ಸೇವಿಸಲು ದಯಾಮರಣಕ್ಕೆ ಅನುಮತಿ ನೀಡುವಂತೆ ಕೇಳಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ವಿಡಿಯೊದಲ್ಲಿ ಮಾತನಾಡಿರುವ ಸುಜಾತಾ ನಾಯ್ಕ್‌‌, “ಕೆಲಸ ಮಾಡಿಕೊಡುತ್ತೇನೆ, ಫೋನ್‌ ಮಾಡುತ್ತೇನೆ ಎಂದು ಹೇಳುತ್ತಾರೆ. ಅಲೆದು ಅಲೆದು ಸುಸ್ತಾಯ್ತು, ಲಂಚ ಕೇಳುತ್ತಿದ್ದಾರೆ, ವಿಷ ಕುಡಿಯುತ್ತೇವೆ. ಇದೀಗ ಇಲ್ಲಿ AC ಆಫಿಸಿನಲ್ಲಿ ದಯಾಮರಣ ಅರ್ಜಿ ಹಾಕಲು ಬಂದಿದ್ದೇವೆ” ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top