fbpx
ಸಮಾಚಾರ

ನಿರ್ಮಲಾನಂದ ಶ್ರೀಗಳ ಹೆಗಲ ಮೇಲೆ ಕೈ ಇಟ್ಟು ಫೋಟೋಗೆ ಪೋಸ್; ಸಚಿವ ಅಶೋಕ್ ನಡೆಗೆ ತೀವ್ರ ಖಂಡನೆ

ಕೆಂಪೇಗೌಡರ ಪ್ರತಿಮೆ ಅನಾವರಣದ ಬಳಿಕ ಎಲ್ಲರೂ ಫೋಟೋ ತೆಗೆಸಿಕೊಂಡಿದ್ದಾರೆ. ಈ ವೇಳೆ ನಿರ್ಮಲಾನಂದ ಶ್ರೀಗಳ ಹೆಗಲ ಮೇಲೆ ಕೈ ಹಾಕಿ ಕಂದಾಯ ಸಚಿವ ಆರ್. ಅಶೋಕ ಪೋಸ್ ಕೊಟ್ಟಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಕಾಂಗ್ರೆಸ್ ಕಿಡಿಕಾರಿದೆ. ಈ ಫೋಟೋವನ್ನು ಟ್ವಿಟರ್‍ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ಸಚಿವ ಆರ್.ಅಶೋಕ್ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ಸ್ವಾಮೀಜಿಗಳಿಗೆ ಅವರದ್ದೇ ಆದ ಗೌರವ ಇರುತ್ತದೆ. ಆದರೆ, ಫೋಟೋ ಶೂಟ್‌ ವೇಳೆ ಅಶೋಕ್‌ ಸ್ವಾಮೀಜಿಗಳ ಹೆಗಲ ಮೇಲೆ ಕೈಇಟ್ಟುಕೊಂಡು ನಿಂತಿರುವುದು ಸ್ವಾಮೀಜಿಗೆ ಮಾಡಿದ ಅವಮಾನ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಇದರ ಬಗ್ಗೆ ಮಾತನಾಡಿದ್ದು, ಅಶೋಕ್ ವರ್ತನೆಯನ್ನು ಖಂಡಿಸಿದ್ದಾರೆ.

 


 

ಸಚಿವ ಆರ್.ಅಶೋಕ ನಡೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಸ್ವಾಮೀಜಿಗಳಿಗೆ ಅವರದ್ದೇ ಆದ ಗೌರವ ಘನತೆ ಇರುತ್ತೆ. ಹೆಗಲ ಮೇಲೆ ಕೈ ಹಾಕುವಷ್ಟು ಆದಿಚುಂಚನಗಿರಿ ಶ್ರೀಗಳು ಆರ್.ಅಶೋಕ್​​ ಅವರಿಗೆ ಸದರ ಎನಿಸಿದ್ದಾರೆಯೇ? ಶ್ರೀಗಳ ಮೇಲೆ ಕೈ ಹಾಕಿದ ಹಾಗೇ ಪ್ರಧಾನಿ ಮೋದಿ ಹೆಗಲ ಮೇಲೆ ಕೈ ಹಾಕಿವಷ್ಟು ಧೈರ್ಯವಿದೆಯೇ? ಧರ್ಮ, ಸಂಸ್ಕೃತಿ ಬಗ್ಗೆ ಮಾತಾಡುವ ಬಿಜೆಪಿ ನಾಯಕರಿಗೆ ಕನಿಷ್ಠ ಸಂಸ್ಕಾರದ ಜ್ಞಾನವಿಲ್ಲ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top